ಲಾಭ ಇಲ್ಲದೇ ಯಾರು ವ್ಯಾಪಾರ ಮಾಡುತ್ತಾರೆ ಹೇಳಿ? ನೋ ಸಾಧ್ಯವೇ ಇಲ್ಲ. ಅದರೆ ಇಲ್ಲೊಬ್ಬ ಅಜ್ಜಿ ಇದ್ದಾಳೆ ಅವರು ಇಡ್ಲಿ ಮಾರುತ್ತಾಳೆ. ಅಷ್ಟಕ್ಕೂ ನಿಮಗೆ ಹೊರಗೆ ಇಡ್ಲಿ ಎಷ್ಟು ರೂಪಾಯಿಗೆ ಸಿಗಬಹುದು? ಚಿಕ್ಕದಾದ ಒಂದು ಇಡ್ಲಿಗೆ 5 ರೂ ಅಷ್ಟು ಕಡಿಮೆಗೆ ಸಿಗಬಹುದು. ಆದರೆ ಈ ಅಜ್ಜಿ ಒಂದು ರೂ.ಗೆ ಒಂದು ಇಡ್ಲಿ ಮಾರುತ್ತಾಳೆ. 


ಹೌದು ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಿರಬೇಕು ಅಲ್ಲವೇ? ಹೌದು ತಮಿಳುನಾಡು ರಾಜ್ಯದ ಕೋಯಿಮತ್ತೂರಿನ 82 ವರ್ಷದ ಅಜ್ಜಿ ಕಮಲಥಾಲ್. ಈಕೆ ತನ್ನ ಮೂವತ್ತು ವರ್ಷಗಳಿಂದಲೂ ಪುಟ್ಟದಾದಂತ ಗೂಡಡಂಗಡಿಯಲ್ಲು ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾಳೆ. ಅಚ್ಚರಿ ಸಂಗತಿ ಎಂದರೆ ಈಕೆ ತನ್ನ ಇಳಿ ವಯಸ್ಸಿನಲ್ಲಿಯೂ 400-500 ಇಡ್ಲಿ ಮಾಡುತ್ತಾಳೆ. ಈ ಎಲ್ಲ ಇಡ್ಲಿಗಳನ್ನೂ ಈಕೆ ಕೇವಲ 1 ರೂ.ಗೆ ಮಾರಾಟ ಮಾಡುತ್ತಾರೆ. 


ಹೌದು ಈ ಕುರಿತು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಅಜ್ಜಿಯ ಕತೆ ಇದೀಗ ಇಡೀ ದೇಶಕ್ಕೂ ಗೊತ್ತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಜ್ಜಿಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಅಜ್ಜಿಯನ್ನು ಇಡ್ಲಿ ಮಾಡೋಕೆ ಅಡುಗೆ ಅನಿಲವನ್ನು ಯಾಕೆ ಬಳಕೆ ಮಾಡೋದಿಲ್ಲ ಎಂದು ಪತ್ರಕರ್ತರು ಕೇಳಿದಾಗ ಅಜ್ಜಿ ಹೇಳೋದೇನು ಗೊತ್ತಾ? ನನಗೆ ಅಡುಗೆ ಅನಿಲ ಬಳಕೆ ಮಾಡೋದು ಗೊತ್ತಿಲ್ಲ ಎನ್ನುತ್ತಾರೆ.


ಅಜ್ಜಿ 500 ಇಡ್ಲಿ ಮಾಡಬೇಕು ಅಂದರೆ ಸುಮ್ಮನೇ ಮಾತಲ್ಲ. ಹೌದು ಯಾಕೆಂದರೆ ಅವಳು ಎದ್ದೆಳೋದು ಬೆಳಗಿನ ಜಾವ 5ಕ್ಕೆ. ಹೌದು ಆಗಲೇ 8 ಕೆ.ಜಿ ಹಅಕ್ಕಿಯನ್ನು ತಾವೇ ರುಬ್ಬುತ್ತಾರೆ ಜತೆಗೆ ಚಟ್ನಿಯನ್ನೂ ತಯಾರಿಸಿ, ಒಲೆಯ ಮೇಲೆ ಹಬೆಯಾಡುವ ಬಿಸಿ ಬಿಸಿ ಇಡ್ಲಿ ತಯಾರಿಸಿಕೊಂಡು ಬೆಳಿಗ್ಗೆ ಏಳು ಗಂಟೆಗೆ ಅಂಗಡಿ ತೆಗೆಯುತ್ತಾರೆ. ನೂರಾರು ಜನಕ್ಕೆ ಕೇವಲ ಒಂದು ರೂಪಾಯಿಗೆ 1 ರೂ ಇಡ್ಲಿ ನೀಡುತ್ತಾರೆ.


ವಿವಿಧ ಖಾಸಗಿ ವಾಹಿನಿಯಲ್ಲಿ ಈ ಕುರಿತು ವರದಿಯಾದ ಬಳಿಕ ಮಹೀಂದ್ರಾ ಗ್ರೂಪ್ ಆನಂದ ಮಹೀಂದ್ರಾ ಅವರು ಈಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಆಕೆಯ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ ಅಜ್ಜಿಯ ಅಡುಗೆ ಅನಿಲ್ ಖರೀದಿಗೆ ನಾನು ಸಹಾಯ ಮಾಡಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.


మరింత సమాచారం తెలుసుకోండి: