ನವದೆಹಲಿ: 2019ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಐಸಿಸಿಯಿಂದ ಪ್ರಧಾನ ಮಾಡುವ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಇಂಗ್ಲೆಂಡಿನ ಬೆನ್ ಸ್ಟೋಕ್ಸ್ ರಿಗೆ ಪ್ರಶಸ್ತಿ ಸಿಕ್ಕಿದ್ದು ಸಂಕ್ರಾಂತಿ ಹಬ್ಬವನ್ನು ಆಚರುಸಿದ್ದಾರೆ. 
 
ಸಂಕ್ರಾಂತಿ ಹಬ್ಬದಂದೇ ಐಸಿಸಿ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಇಂಗ್ಲೆಂಡ್​ ಆಲ್​ ರೌಂಡರ್​ ಬೆನ್​ ಸ್ಟೋಕ್ಸ್​ ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ​ ಪ್ರಶಸ್ತಿ ಗಳಿಸಿದ್ದಾರೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ 2019ನೇ ಇಸವಿಯಲ್ಲಿ ಸ್ಟೋಕ್ಸ್​ ಛಾಪು ಮೂಡಿಸಿದ್ದಾರೆ. ಕಳೆದ ವರ್ಷದ ತವರು ನೆಲದಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬೆನ್​ ಸ್ಟೋಕ್ಸ್​ ಉತ್ತಮ ಆಲ್​ರೌಂಡರ್​ ಪ್ರದರ್ಶನ ನೀಡಿ ತಂಡ ಮೊದಲನೇ ವಿಶ್ವಕಪ್​ ಜಯಿಸಲು ಪ್ರಮುಖ ಕಾರಣರಾಗಿದ್ದರು. ವಿಶ್ವಕಪ್​ ಟೂರ್ನಿಯಲ್ಲಿ 5 ಅರ್ಧ ಶತಕಗಳೊಂದಿಗೆ 465ರನ್​ ಗಳಿಸಿದ್ದರು.​
 
ರೋಹಿತ್​ ಶರ್ಮ ಏಕದಿನ ವರ್ಷದ ಕ್ರಿಕೆಟಿಗ ಪ್ರಶಸ್ತಿ:- 
 
2019ರಲ್ಲಿ ಬ್ಯಾಟಿಂಗ್​ ಮೂಲಕ ಎಲ್ಲರನ್ನು ರಂಜಿಸಿದ ಟೀಮ್​ ಇಂಡಿಯಾ ಆರಂಭಿಕ ಆಟಗಾರ​ ವರ್ಷದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವಕಪ್​ ಟೂರ್ನಿಯೊಂದರಲ್ಲೇ 5 ಶತಕ ಹಾಗೂ ಒಟ್ಟಾರೆ ಏಕದಿನ ಕ್ರಿಕೆಟ್​ನಲ್ಲಿ 7 ಶತಕಗಳನ್ನು ರೋಹಿತ್​ ಬಾರಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ರೋಹಿತ್​ ಶರ್ಮಾ ಆಯ್ಕೆಯಾಗಿದ್ದಾರೆ. 
 
ಕ್ಯಾಪ್ಟನ್ ವಿರಾಟ್​ಗೆ ಸ್ಪಿರಿಟ್​ ಆಫ್​ ಕ್ರಿಕೆಟ್​ ಗೌರವ: ಚೇಸಿಂಗ್ ಕಿಂಗ್  ವಿಶ್ವಕಪ್​ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ವಿರಾಟ್​ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ ಮೆರೆಯುವ ಮೂಲಕ ಅಗ್ರೆಸಿವ್​​ನೆಸ್​ ನನ್ನ ಪ್ರವೃತ್ತಿಯಲ್ಲ ಎಂಬುದನ್ನು ಸಾಬೀತು ಪಡಿಸಿದ್ದರು. ಕನ್ನಿಂಗ್ಟನ್​ನ ಓವಲ್​ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯವು ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಗಿತ್ತು. ಈ ವಿಶೇಷ ಕ್ಷಣವನ್ನು ಮೆಲಕು ಹಾಕಿರುವ ಐಸಿಸಿ, ವಿರಾಟ್​ ಕೊಹ್ಲಿಗೆ “ಸ್ಪಿರಿಟ್​ ಆಫ್​ ಕ್ರಿಕೆಟ್”​ ಪ್ರಶಸ್ತಿ ಗೌರವಿಸಿದೆ. ಪ್ರಶಸ್ತಿ ಪಡೆದ ಟೀಂ ಇಂಡಿಯಾದ ಜೋಡೆತ್ತುಗಳು ಸಂಭ್ರಮಿಸಿದ್ದಾರೆ

మరింత సమాచారం తెలుసుకోండి: