ಟಿಕ್ ಟ್ಯಾಕ್ ಈ ಹೆಸರನ್ನು ಕೇಳದೇ ಇರುವವರು ಯಾರು ಪ್ರತಿಯೊಬ್ಬರಿಗೂ ಚಿರಪರಿಚಿತವಿರುವ ಟಿಕ್ ಟಾಕ್ ಸಾಮಾನ್ಯ ಜನರನ್ನು ಸ್ಟಾರ್ ಗಳನ್ನಾಗಿ ಮಾಡಿದ ಒಂದು ಜನಪ್ರಿಯ ಆಫ್. ಈ ಆಪ್ ಮೂಲಕ ಅದೆಷ್ಟೋ ಜನರು ಜೀವನವನ್ನು ಕಟ್ಟುಕೊಂಡಿದ್ದಾರೆ ಹಾಗೂ ಸಿನಿಮಾ ರಂಗದಲ್ಲಿ ಅವಕಾಶವನ್ನು ಪಡೆಯುತ್ತಿದ್ದಾರೆ. ಇದರಿಂದ ಈ ಟಿಕ್ ಟ್ಯಾಕ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ರೇಟಿಂಗ್ ಪಾಯಿಂಟ್ ಅನ್ನು ಪಡೆದಿತ್ತು. ಆದರೆ ಈಗ ಟಿಕ್ ಟಾಕ್ ಗೆ ಸ್ಪರ್ಧೆಯನ್ನು ನೀಡುವಂತಹ ಭಾರತದ ಹೊಸ ಆಫ್ ಮುನ್ನಲೆಗೆ ಬಂದಿದೆ. ಅಷ್ಟಕ್ಕೂ ಆ ಸ್ವದೇಶಿ ಆಫ್ ಯಾವುದು ಗೊತ್ತಾ..?
ವಿಡಿಯೋ ಶೇರಿಂಗ್ ಆಯಪ್ ಟಿಕ್ ಟಾಕ್ ಗೆ ಪ್ಲೇ ಸ್ಟೋರ್ ನಲ್ಲಿ ಬಾರಿ ಹಿನ್ನಡೆ ಆಗಿದೆ. ಭಾರತದ ಹೊಸ ಅಪ್ಲಿಕೇಶನ್ ಮಿಟ್ರಾನ್ ಗುಗೂಲ್ ಪ್ಲೇಸ್ಟೋರ್ ನಲ್ಲಿ ರೇಟಿಂಗ್‌ನಲ್ಲಿ ಟಿಕ್‌ಟಾಕ್ ಅನ್ನು ಮೀರಿಸುತ್ತಿದೆ. ಇಲ್ಲಿಯವರೆಗೆ, ಟಿಕ್ ಟಾಕ್ ಮತ್ತು ಯೂಟ್ಯೂಬ್ ಮಾತ್ರ ಗೂಗಲ್ ಪ್ಲೇ ಸ್ಟೋರ್ ರೇಟಿಂಗ್‌ನಲ್ಲಿ ಸ್ಪರ್ಧಿಸುತ್ತಿದ್ದವು. ಆದರೆ ಇತ್ತೀಚಿನ ವರದಿಯ ಪ್ರಕಾರ, ಮಿಟ್ರಾನ್ ಆಯಪ್ ಗುಗೂಲ್ ರೇಟಿಂಗ್‌ನಲ್ಲಿ ಟಿಕ್ ಟಾಕ್ ಮತ್ತು ಯೂಟ್ಯೂಬ್ ಅನ್ನು 4.7 ರೇಟಿಂಗ್‌ನೊಂದಿಗೆ ಟ್ರೆಂಡಿಂಗ್ ನಲ್ಲಿದೆ.
ಅಷ್ಟೇ ಅಲ್ಲದೇ ಟಿಕ್‌ಟಾಕ್ ಗೆ ಪ್ಲೇ ಸ್ಟೋರ್ ರೇಟಿಂಗ್ 1 ಕ್ಕೆ ಇಳಿದಿದೆ. ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಟಿಕ್‌ಟಾಕ್‌ಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಟಿಕ್‌ಟಾಕ್ ಪ್ರಸ್ತುತ ಪ್ಲೇಸ್ಟೋರ್‌ನಲ್ಲಿ 1.4 ರೇಟಿಂಗ್ ಹೊಂದಿದೆ. ಮಿಟ್ರಾನ್ ಆಯಪ್ ಗೆ ಪ್ಲೇ ಸ್ಟೋರ್ ನಲ್ಲಿ 4.7 ರೇಟಿಂಗ್‌ನೊಂದಿಗೆ 5 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳೊಂದಿಗೆ ಮುನ್ನುಗ್ಗುತ್ತಿದೆ.
ಮಿಟ್ರಾನ್ 4.7 ರೇಟಿಂಗ್ ಹೊಂದಿರುವ ಟ್ರೆಂಡಿಂಗ್ ಅಪ್ಲಿಕೇಶನ್‌ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಅಲ್ಪಾವಧಿಯಲ್ಲಿಯೇ 5 ಮಿಲಿಯನ್ ಗೂ ಹೆಚ್ಚು ಬಳಕೆದಾರರನ್ನು ಗಳಿಸಿದೆ.
ಮಿಟ್ರಾನ್ ಹೇಗೆ ಕಾರ್ಯನಿರ್ವಹಿಸುತ್ತದೆ
ಮಿಟ್ರಾನ್ ಕೂಡಾ ಟಿಕ್‌ಟಾಕ್‌ನಂತೆಯೇ ಹಲವಾರು ಸಾಧನಗಳೊಂದಿಗೆ (ರೇಂಜ್ ಆಫ್ ಟೂಲ್ಸ್) ಮಿಟ್ರಾನ್ ಕಾರ್ಯನಿರ್ವಹಿಸುತ್ತದೆ. ಫಿಲ್ಟರ್ ಆಯ್ಕೆಯ ಮೂಲಕ ನೀವು ಶಾಟ್ ವೀಡಿಯೊಗಳನ್ನು ಸಂಪಾದಿಸಬಹುದು ಮತ್ತು ಅವುಗಳನ್ನು ಈ ವೀಡಿಯೊ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಬಹುದು.
ಟಿಕ್‌ಟಾಕ್‌ನಂತೆಯೇ, ಮಿಟ್ರಾನ್ ಬಳಕೆದಾರರು ತಮ್ಮಲ್ಲಿರುವ ಮಲ್ಟಿಮೀಡಿಯಾ ಲೈಬ್ರರಿ ಕಂಟೆಂಟ್ ಗೆ ವೈಡ್ ಲೈಬ್ರರಿ ಹೊಂದಿದೆ. ಈ ಅಪ್ಲಿಕೇಶನ್‌ನಲ್ಲಿ ನೀವು ಹೊಸ ವೀಡಿಯೊಗಳನ್ನು ಸಹ ರಚಿಸಬಹುದು ಮತ್ತು ಜನಪ್ರಿಯ ಸಂಗೀತ ತುಣುಕುಗಳು ಅಥವಾ ಚಲನಚಿತ್ರ ಸಂವಾದಗಳನ್ನು ಸಿಂಕ್ರೊನೈಸ್ ಮಾಡಬಹುದು.
ಎಲ್ಲಾ ಫೋನ್ಗಳಲ್ಲಿ ಮಿಟ್ರಾನ್ ಕಾರ್ಯನಿರ್ವಹಿಸುತ್ತದೆಯೇ?
ಇದು ಪ್ರಸ್ತುತ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾತ್ರ ಲಭ್ಯವಿದೆ. ಅಲ್ಲದೆ, ನೀವು ಈ ಆಯಪ್ ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಿನಿಮಮ್ ಸ್ಪೇಸ್ ಇದ್ದರೆ ಸಾಕು.
ಏಕೆಂದರೆ ಇದು ಕೇವಲ 8 ಎಂಬಿ ಗಾತ್ರದಲ್ಲಿದೆ. ಅಂತೆಯೇ, ಆಂಡ್ರಾಯ್ಡ್ 5.0 ಹೊಂದಿರುವ ಯಾವುದೇ ಸ್ಮಾರ್ಟ್ ಫೋನ್ ನಲ್ಲಿ ಓ ಆಯಪ್ ಅನ್ನು ಡೌನ್‌ಲೋಡ್ ಮಾಡಲಾಗುತ್ತದೆ. ಆದಾಗ್ಯೂ, ಇದಕ್ಕೆ ಐಒಎಸ್ ಪ್ರವೇಶವನ್ನು ನೀಡಲಾಗಿಲ್ಲ. ಪ್ಲೇ ಸ್ಟೋರ್ ನಲ್ಲಿ ಐಒಎಸ್ ಪ್ರವೇಶವನ್ನು ಯಾವಾಗ ಪ್ರಾರಂಭಿಸಬೇಕು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.
click and follow Indiaherald WhatsApp channel