ಮಾನವ ಎಷ್ಟು ಸ್ವಾರ್ಥಿ ಎಂದರೆ ತನ್ನ ಸ್ವಾರ್ಥ ಸಾಧನೆಗಾಗಿ ತನ್ನ ಯಾರನ್ನು ಬೇಕಾದರೂ ಕೊಡ ಕೊಲ್ಲಲು ಏಸುವುದಿಲ್ಲ, ಅಂತದರಲ್ಲಿ ಇನ್ನ ಮೂಕ ಪ್ರಾಣಿಗಳನ್ನು ಬಿಟ್ಟನೇ, ಈಗಾಗಲೇ ಸ್ವಾರ್ಥಕ್ಕಾಗಿ ಕಾಡುಗಳಲ್ಲಿದ್ದ ಮರಗಿಡಗಳನ್ನು ಕಡಿಇದು ಹಾಳು ಮಾಡಲಾಗಿದೆ, ಆದರೆ ಈ ಕಾಡುಗಳನ್ನೇ ನಂಬಿ ಬದುಕುತ್ತಿದ್ದ ಪ್ರಾಣಿಗಳು ತಮಗೆ ಆಸರೆ ಇಲ್ಲದಂತಾದಾಗ ನಾಡಿಗೆ ಬಂದು ಕೆಲವು ಅವಾಂತರವನ್ನು ಸೃಷ್ಟಿಸುತ್ತದೆ. ಆದರೆ ಮನುಷ್ಯ ನಾಡಿಗೆ ಬಂದ ಪ್ರಾಣಿಯನ್ನು ಕೊಂದು ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳುತ್ತಾನೆ ಆದರೆ ಪ್ರಾಣಿಗಳ ಬಗ್ಗೆ ಚಿಂತಿಸುವವರಾರು. ಪ್ರಾಣಿಗಳ ರಕ್ಷಣೆಯ್ನು ಮಾಡಲಾಗದಷ್ಟು ಮಾನವೀಯತೆಯನ್ನೂ ಕೂಡ ನಾವು ಕಾಪಾಡಿಕೊಂಡಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನೆನ್ನೆ ಕೇರಳದಲ್ಲಿ ಆನೆಯನ್ನು ಘೋರವಾಗಿ ಕೊಲೆಮಾಡಲಾಗಿದೆ. ಇದಕ್ಕೆ ದೇಶದಾದ್ಯಂತ ಜನ ಸಾಮಾನ್ಯರಿಂದ ಹಿಡಿದು ಉದ್ಯಮಿಗಳು ಸೇರಿ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೇರಳದಲ್ಲಿ ಗರ್ಭಿಣಿ ಆನೆಯ ಹತ್ಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಾಣಿ ಪ್ರಿಯರು ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಂಡ ಕಾರಿದ್ದಾರೆ. ಈ ಘಟನೆ ಖ್ಯಾತ ಉದ್ಯಮಿ ಹಾಗೂ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಕೂಡ ಅಸಮಾಧಾನ ತೋರಿದ್ದಾರೆ. ಇದೊಂದು ಹೀನ ಕೃತ್ಯ ಎಂದು ಜರಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರತನ್ ಟಾಟಾ, 'ಕೆಲವರು ಗರ್ಭಿಣಿ ಆನೆಯ ಬಾಯಲ್ಲಿ ಸ್ಫೋಟಕ ತುಂಬಿದ ಅನಾನಸ್ ಹಣ್ಣನ್ನು ಇಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿರುವುದು ಬೇಸರ ಮೂಡಿಸಿದೆ. ಮುಗ್ಧ ಪ್ರಾಣಿಗಳನ್ನು ಈ ರೀತಿ ಹತ್ಯೆ ಮಾಡುವುದು ಮತ್ತು ಮುನುಷ್ಯರ ಪೂರ್ವ ನಿಯೋಜಿತ ಕೊಲೆಗೂ ಯಾವುದೇ ವ್ಯತ್ಯಾಸವಿಲ್ಲ,' ಎಂದು ಹೇಳುವ ಮೂಲಕ ಇದೊಂದು ಘೋರ ಅಪರಾಧ ಎಂದಿದ್ದಾರೆ.
ಏನಿದು ಪ್ರಕರಣ:
ಕೇರಳದ ಪಾಲಕ್ಕಾಡ್ನ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ (ಎಸ್ವಿಎನ್ಪಿ) ಆನೆ ಗರ್ಭಿಣಿಯಾಗಿತ್ತು. ಮೇ 27ರಂದು 15 ವರ್ಷದ ಈ ಆನೆ ಹತ್ತಿರದಲ್ಲಿದ್ದ ಊರೊಳಗೆ ಪ್ರವೇಶಿಸಿತ್ತು. ಊರಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಆ ಆನೆಯನ್ನು ನೋಡಿ ಎಲ್ಲರೂ ಹೆದರಿ ಮನೆಯಲ್ಲಿ ಕುಳಿತಿದ್ದರು. ಆದರೆ, ಅವರಲ್ಲಿ ಯಾರೋ ಆನೆಗೆ ತಿನ್ನಲು ಪೈನಾಪಲ್ ಹಣ್ಣನ್ನು ನೀಡಿದರು. ಮೊದಲೇ ಹಸಿವಿನಿಂದ ಆಹಾರಕ್ಕಾಗಿ ಹುಡುಕಾಡುತ್ತಿದ್ದ ಆನೆ ಆ ಹಣ್ಣನ್ನು ತಿನ್ನುತ್ತಿದ್ದಂತೆ ಅದರೊಳಗಿದ್ದ ಮದ್ದುಗುಂಡು ಸ್ಫೋಟವಾಯಿತು. ಪೈನಾಪಲ್ ಹಣ್ಣಿನೊಳಗೆ ಸ್ಫೋಟಕವನ್ನು ತುಂಬಿದ್ದರಿಂದ ಆನೆಯ ಬಾಯಿಗೆ ತೀವ್ರ ಗಾಯವಾಗಿತ್ತು.
ತನಗೆ ಪ್ರಾಣ ಹೋಗುವಷ್ಟು ನೋವಾದರೂ ಆ ಆನೆ ಅಲ್ಲಿದ್ದ ಯಾರೊಬ್ಬರಿಗೂ ತೊಂದರೆ ಕೊಡಲಿಲ್ಲ, ಮನೆ-ಅಂಗಡಿಗಳಿಗೂ ಹಾನಿ ಮಾಡಲಿಲ್ಲ. ತನ್ನ ನೋವನ್ನು ನುಂಗಿಕೊಂಡು ಕಾಡಿನೊಳಗೆ ಸೇರಿಕೊಂಡ ಆನೆ ನಂತರ ವೆಲ್ಲಿಯಾರ್ ನದಿಯೊಳಗೆ ಇಳಿದು ತನ್ನ ಬಾಯಿ, ಸೊಂಡಿಲನ್ನು ನೀರಿನಲ್ಲಿಟ್ಟುಕೊಂಡು ನಿಂತಿತ್ತು. ಈ ವೇಳೆ ಅಲ್ಲಿಯೇ ಆನೆ ಮೃತಪಟ್ಟಿದೆ.
click and follow Indiaherald WhatsApp channel