ಭಾರತದಿಂದ ಸಾಕಷ್ಟು ಪ್ರಮಾಣದಲ್ಲಿ ಬೇರೆ ಬೇರೆ ದೇಶಗಳಿಗೆ ರಪ್ತಾಗಿದ್ದ ಹೈಡ್ರೋಕ್ಲೋರೊಕ್ವಿನ್ ಔಷಧಿಯು ಕೊರೋನಾ ವೈರಸ್ ವಿರುದ್ಧ ಹೋರಾಡುವಂತಹ ಒಂದು ಅತ್ಯುತ್ತಮ ಔಷ‍ಧ ಎಂದು ತಿಳಿದ ಮೇಲೆ ಜಾಗತಿಕ ಮಟ್ಟದಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿತ್ತು ಹಾಗಾಗಿ ಭಾರತವೂ ಕೂಡ ಬೇಡಿಕೆ ಇಟ್ಟ ಎಲ್ಲಾ ರಾಷ್ಟ್ರಗಳಿಗೆ ಹೈಡ್ರೋ ಕ್ಲೊರೋಕ್ವಿನ್ ಔಷಧಿಯನ್ನು ಕಳಿಸಿಕೊಟ್ಟಿತು, ಆದರೆ ಈಗ ಇಂಗ್ಲೆಂಡ್  ಇದಕ್ಕೆ ವಿರುದ್ಧವಾದಂತಹ ಮಾಹಿತಿಯನ್ನು ನೀಡಿ ಹೈಡ್ರೋಕ್ಲೊರೋ ಕ್ವೀನ್ ಔಷಧಿಯನ್ನು ರೋಗಿಗಳಿಗೆ ಕೊಡುವುದನ್ನು ನಿಲ್ಲಿಸಿದೆ.

 

ಹೌದು ಮಲೇರಿಯಾ ವಿರುದ್ಧ ಬಳಸುತ್ತಿದ್ದ ಡ್ರಾಕ್ಸಿಕ್ಲೋಹೈರೋಕ್ವಿನ್‌ ಔಷಧವು ಕೋವಿಡ್ ಚಿಕಿತ್ಸೆಗೆ ಗೇಮ್‌ ಚೇಂಜರ್‌ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಬಳಿಕ ಇದಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಬಂದಿದೆ. ಆದರೆ ಈಗ ಪರಿಸ್ಥಿತಿ ಬದ ಲಾಗಿದ್ದು, ಈ ಔಷಧವು ಕೋವಿಡ್ ರೋಗಕ್ಕೆ ಪರಿಣಾಮಕಾರಿಯಾಗಿಲ್ಲ ಮತ್ತು ಕೊರೊನಾ ವಿರುದ್ಧದ ಚಿಕಿತ್ಸೆಗೆ ಪ್ರಯೋಜನವಾಗದು ಎಂದು ಅದರ ಬಳಕೆಯನ್ನು ಇಂಗ್ಲಂಡ್‌ ನಿಲ್ಲಿಸಿದೆ.

 

ಇದು ಕೋವಿಡ್‌ -19ಗೆ ಚಿಕಿತ್ಸೆಯಲ್ಲ. ಇದು ಕೋವಿಡ್ ವೈರಸ್‌ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ಇದರ ಬಗ್ಗೆ ಚೇತರಿಕೆ ಪ್ರಯೋಗ ಸಂಶೋಧನೆ ನಡೆಸುತ್ತಿರುವ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಮಾರ್ಟಿನ್‌ ಲಾಂಡ್ರೆ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.


ನಮ್ಮ ಪ್ರಯೋಗದಿಂದ ಈ ಔಷಧವು ಕೋವಿಡ್ ಚಿಕಿತ್ಸೆಗೆ ನಿಷ್ಪ್ರಯೋಜಕ ಎಂದು ತಿಳಿದ ಬಳಿಕ ವಿಶ್ವಾದ್ಯಂತ ಇದರ ಬಳಕೆಯನ್ನು ನಿಲ್ಲಿಸಬಹುದು ಹಾಗೂ ಚಿಕಿತ್ಸೆಯ ವಿಧಾನದಲ್ಲಿ ಹೊಸ ಬದಲಾವಣೆ ಉಂಟಾಗಬಹುದು ಎಂದಿದ್ದಾರೆ.

 

ವಿಶ್ವಾದ್ಯಂತ ಸುಮಾರು 6.4 ದಶಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿ, ಸುಮಾರು 4,00,000 ಜನರ ಸಾವಿಗೆ ಕಾರಣ ವಾಗಿರುವ ಕೊರೊನಾ ವಿರುದ್ಧ ಹೋರಾಡಲು ಹೈಡ್ರಾಕ್ಸಿಕ್ಲೋರೋಕ್ವಿನ್‌ ಶಕ್ತವಾದರೆ ಅದು ಅಗ್ಗದ ಮತ್ತು ವ್ಯಾಪಕವಾಗಿ ಲಭ್ಯ ವಿರುವ ಔಷಧವಾಗಬಹುದು ಎಂದು ಟ್ರಂಪ್‌ ನೀಡಿದ ಬೆಂಬಲವು ಈ ಔಷಧಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಿತ್ತು.

ಕಳೆದ ತಿಂಗಳಿನ ವೈದ್ಯಕೀಯ ಜರ್ನಲ್‌ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಔಷಧದ ಪರಿಣಾಮದ ಬಗ್ಗೆ ಸಂಶಯ ಮೂಡಿದೆ ಹಾಗೂ ಅದರ ದತ್ತಾಂಶ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ ಬಳಿಕ ಈ ಔಷಧದ ಕೋವಿಡ್‌ – 19 ಅಧ್ಯಯನವನ್ನು ನಿಲ್ಲಿಸಲಾಯಿತು. ಇಂಗ್ಲಂಡ್‌ನ‌ಲ್ಲಿ ಈ ಔಷಧವನ್ನು ಬಳಸುವುದನ್ನೂ ಸ್ಥಗಿತಗೊಳಿಸಲಾಯಿತು.

 

ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ಶಾಸ್ತ್ರದ ಪ್ರೊಫೆಸರ್‌ ಲಾಂಡ್ರಿ ಅವರು , ಈ ಔಷಧವು ಕೋವಿಡ್‌ 19 ಚಿಕಿತ್ಸೆಗೆ ಬಳಕೆಯಾಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ ಮತ್ತು ಸಾಕಷ್ಟು ಪ್ರಯೋಗ ನಡೆಸಿದರೂ ವಿಶ್ವಾಸಾರ್ಹ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ರ್‍ಯಾಂಡಂ ಆಗಿ ಈ ಔಷಧದ ಪ್ರಾಥಮಿಕ ಪರೀಕ್ಷೆಯ ವರದಿಯು ಕೋವಿಡ್ ಗುಣಪಡಿಸಲು ಪೂರಕವಾಗಿ ಕಂಡು ಬಂದಿಲ್ಲ. ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ರೋಗಿಗಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಇದು ಶಕ್ತವಾಗಿಲ್ಲ ಎಂದು ಅವರು ಹೇಳಿದ್ದಾರೆ. ಒಂದೊಮ್ಮೆ ನೀವು ಆಸ್ಪತ್ರೆಗೆ ದಾಖಲಾಗಿದ್ದರೆ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧ ತೆಗೆದುಕೊಳ್ಳಬೇಡಿ ಎಂದಿದ್ದಾರೆ.

 

మరింత సమాచారం తెలుసుకోండి: