ಸಿಂಧುಲೋಕನಾಥ್ ಅನ್ನೋ ನಟಿ ಇದೀಗ ಮತ್ತೆ ಸುದ್ದಿಯಾಗಿದ್ದಾಳೆ. ಈ ಬಾರಿ ಅದು ಸಿನಿಮಾ ವಿಷಯಕ್ಕಲ್ಲ. ಬದಲಾಗಿ ಆಹಾರ ಪದಾರ್ಥದ ಬ್ರ್ಯಾಂಡ್ ವಿಷಯವಾಗಿ. ಈಕೆ ಪರಿಚಯ ಚಿತ್ರದ ಮೂಲಕ ಕನ್ನಡ ಸಿನಿ ರಂಗಕ್ಕೆ ಪರಿಚಯವಾದಳು, ನಂತರ ಈಗಾಗಲೇ ಹತ್ತು ವರ್ಷಗಳ ಕಾಲ ಸಿನಿ ರಂಗದಲ್ಲಿ ಪ್ರಯಾಣ ಮಾಡಿದ್ದಾಳೆ.
ಕಳೆದ ವರ್ಷವಷ್ಟೇ ಸಿಂಧೂ ಲೋಕನಾಥ್ ಮದುವೆ ಆಗಿದ್ದರು, ನಂತರು ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಕೃಷ್ಣ ಅಜೇಯ್ ರಾವ್ ಅವರ ಜೊತೆ ಕೃಷ್ಣ ಟಾಕೀಸ್ ನಲ್ಲಿ ನಾಯಕಿಯಾಗಿ ಪ್ರೇಕ್ಚಕರ ಮುಂದೆ ಬರಲಿದ್ದಾಳೆ.
ಇದರ ಜೊತೆ ಜೊತೆಗೆ ತಮ್ಮ ಬಿಡುವಿನ ವೇಳೆಯಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದೇ ರಾಸಾಯನಿಕ ಮುಕ್ತ ಸಾವಯವ ಆಹಾರ ಪದಾರ್ಥಗಳ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಸಿಂಪೋಲಿ ಮೈನ್ ಅನ್ನೋ ಒಂದು ಆರ್ಗ್ಯಾನಿಕ್ ಬ್ರ್ಯಾಂಡ್ ಹೆಸರಿನ ಸಾವಯವ ಪದಾರ್ಥಗಳನ್ನು ಮಾರುಉಕಟ್ಟೆಗೆ ತಂದಿದ್ದಾರೆ.
click and follow Indiaherald WhatsApp channel