ನಿನ್ನೆ (ಮಂಗಳವಾರ) ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಬಾಕ್ಸಿಂಗ್ ಪೋಸ್ಟರ್ ಬಿಡುಗಡೆ ಆಗಿ ಸಖತ್ ಸದ್ದು ಮಾಡಿದೆ. ಅದಾದ ಮೇಲೆ ಇಂದು (ಬುಧವಾರ) ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ಕೂಡ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ನಾಳೆ ರಕ್ಷಿತ್ ಶೆಟ್ಟಿ ಸದ್ದು ಮಾಡಲಿದ್ದಾರೆ.
ಹೌದು, ನಾಳೆ ರಕ್ಷಿತ್ ಶೆಟ್ಟಿಗೆ ವಿಶೇಷ ದಿನ. ಜನ್ಮದಿನ. ಹೀಗಾಗಿ ನಾಳೆಯೇ ರಕ್ಷಿತ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ ಚಿತ್ರದ 2ನೇ ಟೀಸರ್ ಬಿಡುಗಡೆ ಆಗುತ್ತಿದೆ. ರಕ್ಷಿತ್ ಶೆಟ್ಟಿ ಜನ್ಮದಿನದಂದು ಚಿತ್ರತಂಡ ಈ ರೀತಿ ವಿಶೇಷ ಉಡುಗೊರ ನೀಡುತ್ತಿದೆ.
ಶ್ರೀಮನ್ನಾರಾಯಣ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಹಿಟ್ ಆಗಿದೆ. ರಕ್ಷಿತ್ ಶೆಟ್ಟಿ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಪಕ್ಕಾ ಮನೋರಂಜನೆಯ ಚಿತ್ರವಾಗಿದ್ದು, ಶಾನ್ವಿ ಶ್ರೀವಾಸ್ತವ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.
ಶ್ರೀಮನ್ನಾರಾಯಣ ಚಿತ್ರವನ್ನು ಸಚಿನ್ ನಿರ್ದೇಶನ ಮಾಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ ಹಾಗೂ ಕೆ.ಹೆಚ್. ಪ್ರಕಾಶ ಗೌಡ ಅವರು ಬಂಡವಾಳ ಹಾಕಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
click and follow Indiaherald WhatsApp channel