ಚಿರಂಜೀವಿ ಸರ್ಜಾ ಅವರ ಹೊಸ ಸಿನಿಮಾ ಇನ್ನೇನು ಬಿಡುಗಡೆಗೆ ಇದ್ಧವಾಗಿದೆ. ಈ ಸಿನಿಮಾದ ಹೆಸರು ಸಿಂಗ. ಇವತ್ತು ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್ ನಲ್ಲಿ ಚಿರಂಜೀವಿ ಸರ್ಜಾ ಖಡಕ್ ಆಗಿ ಮಿಂಚಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. 

 

 

ಚಿರಂಜೀವಿ ಸರ್ಜಾ ಅವರು ಇದುವರೆಗೂ ಸಾಕಷ್ಟು ಮಾಸ್ ಲುಕ್ ನಲ್ಲಿ ನಟಿಸಿದ್ದಾರೆ. ಆದರೆ ಈ ಸಿಂಗ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ಇರೋ ರೌದ್ರ ಸ್ಪರ್ಶದ ಅವತಾರ ಬೇರೆಯದೇ ಇರಲಿದೆ. ಇದು ಪ್ರೇಕ್ಷಕರನ್ನು ಖಂಡಿತ ರಂಜಿಸಲಿದೆ.

 

 

ವಿಜಯ್ ಕಿರಣ್ ಅವರು ಸಿಂಗ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಹಿಂದೆ ಇವರು ರಾಮ್ ಲೀಲಾ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡಾ.ಕೆ.ರವಿವರ್ಮಾ ಹಾಗೂ ಪಳಿನಿ ರಾಜ್ ಅವರು ನಿರ್ಮಾಣ ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಚೇತನ್ ಹಾಡುಗಳನ್ನು ಬರೆದಿದ್ದಾರೆ. 

 

మరింత సమాచారం తెలుసుకోండి: