ಕೊರೋನಾ ವೈರಸ್ ನಿಂದಾಗಿ ದೇಶದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿತ್ತು ಈ ಸಂದರ್ಭದಲ್ಲಿ ಕೊರೋನಾ ಮಕ್ಕಳಿಗೆ ಬಹು ಬೇಗನೆ ಹರಡುತ್ತದೆ ಎಂಬ ದೃಷ್ಟಿಯಿಂದ ಈಕ್ರಮವನ್ನು ಜಾರಿಗೆ ತರಲಾಗಿತ್ತು.  ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಆನ್ ಲೈನ್ ಶಿಕ್ಷಣವನ್ನು ಆರಂಭಿಸಿತ್ತು. ಪ್ರಸ್ತುತ ಕೊರೋನಾ ಮೇಲಿರುವ ಭಯ ಕಡಿಮೆಯಾಗುತ್ತಿರುವುದರಿಂದ ಶಾಲಾ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.  


 


ಹೌದುದೇಶ ಮತ್ತು ಪ್ರಪಂಚದಲ್ಲಿ ಹರಡಿರುವ ಕರೋನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಈ ಸಾಂಕ್ರಾಮಿಕ ರೋಗದಿಂದ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದೆ. ಈ ಪರಿಸ್ಥಿತಿಗಳ ಮಧ್ಯೆ ಮತ್ತೆ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಸೆಪ್ಟೆಂಬರ್ 1 ರಿಂದ ನವೆಂಬರ್ 14 ರವರೆಗೆ ಹಂತಹಂತವಾಗಿ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯುವ ಯೋಜನೆಯನ್ನು ಕೇಂದ್ರ ಸಿದ್ಧಪಡಿಸಿದೆ.




ಕರೋನಾ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ಮಂತ್ರಿಗಳ ಸಮಿತಿಯನ್ನು ಸಚಿಸಿದೆ ಅಂತ ತಿಳಿದು ಬಂದಿದ್ದು, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರ ನೇತೃತ್ವದಲ್ಲಿ ಮಂತ್ರಿಗಳು ಸಭೆ ಸೇರಿದ್ದು, ಸಭೆಯಲ್ಲಿ ಯೋಜನೆಯ ವಿಧಾನಗಳನ್ನು ಮಂತ್ರಿಗಳ ಗುಂಪಿಗೆ ಜೋಡಿಸಲಾದ ಕಾರ್ಯದರ್ಶಿಗಳ ಗುಂಪು ಚರ್ಚಿಸಿದೆ. ಈ ಸಂದರ್ಭದಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯುವ ಬಗ್ಗೆ ಚರ್ಚೆ ನಡೆಸಿತು ಎನ್ನಲಾಗಿದೆ. ಖಾಸಗಿ ಮಾಧ್ಯಮವೊಂದರ ಪ್ರಕಾರ ಶಾಲೆಗಳನ್ನು ತೆರೆಯುವ ನಿರ್ಧಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಈ ತಿಂಗಳ ಅಂತ್ಯದೊಳಗೆ ನೀಡಬಹುದು ಎನ್ನಲಾಗಿದ್ದು, ಅಂತಿಮ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳ ಮೇಲೆ ಬಿಡಲಾಗುತ್ತದೆ ಎನ್ನಲಾಗಿದೆ.




ಜುಲೈನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಪರವಾಗಿಲ್ಲ ಅಂತ ತಿಳಿದು ಬಂದಿದ್ದು, ಇಂತಹ ಪರಿಸ್ಥಿತಿಯಲ್ಲಿ, ಶಾಲೆಗಳು ತೆರೆಯದ ಕಾರಣ ಬಡವರು ಮತ್ತು ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಇಲ್ಲದ ಮಕ್ಕಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರಗಳು ತಿಳಿಸಿರುವ ಹಿನ್ನಲೆಯಲ್ಲಿ ಶಾಲೆಗಳು ಮತ್ತೆ ಶುರುವಾಗಲಿದೆ ಎನ್ನಲಾಗುತ್ತಿದೆ. ಕಡಿಮೆ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳು ಉನ್ನತ ವ್ಯಾಸಂಗ ವಿದ್ಯಾರ್ಥಿಗಳನ್ನು ಮರಳಿ ಕಾಲೇಜಿಗೆ ಕರೆ ತರುವ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿವೆ ಅಂತ ತಿಳಿದು ಬಂದಿದೆ.




ವರದಿಗಳ ಪ್ರಕಾರ, ಹಂತ ಹಂತವಾಗಿ ಶಾಲೆಗಳನ್ನು ತೆರೆಯಲಾಗುವುದು ಎನ್ನಲಾಗಿದೆ. ಉದಾಹರಣೆ : 10ನೇ ತರಗತಿಯಲ್ಲಿ ಎ, ಬಿ, ಸಿ, ಡಿ ಎಂಬ ನಾಲ್ಕು ವಿಭಾಗಗಳಿದ್ದರೆ, ಎ ಮತ್ತು ಸಿ ವಿಭಾಗದ ಅರ್ಧದಷ್ಟು ಮಕ್ಕಳು ಒಂದು ದಿನ ಬರುತ್ತಾರೆ. ನಂತರ ಸಿ, ಡಿ ವಿಭಾಗದ ಅರ್ಧದಷ್ಟು ಮಕ್ಕಳು ಇತರ ದಿನ. ಉಳಿದ ಮಕ್ಕಳಿಗೆ, ದಿನವನ್ನು ಇದೇ ರೀತಿಯಲ್ಲಿ ನಿಗದಿಪಡಿಸಲಾಗುತ್ತದೆ. ಇದಲ್ಲದೆ ಶಾಲೆಗಳು ಸಹ ಶಿಫ್ಟ್‌ಗಳಲ್ಲಿ ನಡೆಯಲಿವೆ. ಇದರಲ್ಲಿ ಮೊದಲ ಶಿಫ್ಟ್ ಬೆಳಿಗ್ಗೆ 8 ರಿಂದ 11 ರವರೆಗೆ ಮತ್ತು ಎರಡನೇ ಶಿಫ್ಟ್ ಬೆಳಿಗ್ಗೆ 12 ರಿಂದ ಮಧ್ಯಾಹ್ನ 3 ರವರೆಗೆ ಇರುತ್ತದೆ. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇಕಡಾ 33 ಕ್ಕೆ ಸೀಮಿತಗೊಳಿಸಲು ಶಾಲೆಗಳಿಗೆ ಸೂಚಿಸಲಾಗುವುದು.

మరింత సమాచారం తెలుసుకోండి: