ಸುದೀಪ್ ಗೂ ಕ್ರಿಕೆಟ್ ಗೂ ಅವಿನಾಭಾವ ಸಂಬಂಧ. ಸಿನಿಮಾದ ಜೊತೆಗೆ ಕ್ರಿಕೆಟ್ ಅಂದ್ರೆ ಸುದೀಪ್ ಗೆ ತುಂಬ ಇಷ್ಟ. ಕ್ರಿಕೆಟ್ ತವರು ಎಂದೇ ಖ್ಯಾತಿ ಆಗಿರೋ ಇಂಗ್ಲೆಂಡ್ ನಲ್ಲಿ ಇದೀಗ ವರ್ಲ್ಡ್ ಕಪ್ ಅಬ್ಬರವೂ ಜೋರಾಗಿದೆ. ಈ ಹಿಂದೆಯೇ ಸುದೀಪ್ ಶೂಟಿಂಗ್ ಗೆ ಬ್ರೇಕ್ ಹಾಕಿ ಇಂಗ್ಲೆಂಡ್ ಗೆ ತಮ್ಮ ಕ್ರಿಕೆಟ್ ತಂಡವನ್ನು ಕರೆದೊಯ್ದಿದ್ದರು.

 

 

ಹೌದು, ಇಂಗ್ಲೆಂಡಿನಲ್ಲಿ ಪ್ರತಿ ವರ್ಷವೂ ಸಹ ಕಾರ್ಪೋರೇಟ್ ಲೀಗ್ ನಡೆಯುತ್ತಿದೆ. ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ವೃತ್ತಿ ನಿರತರೂ ನಡೆಸುವ ಈ ಲೀಗ್ ನಲ್ಲಿ ಸುದೀಪ್ ತಂಡ ಭಾಗಿಯಾಗಿದೆ. ಈ ಲೀಗ್ ನ ಮೊದಲ ಪಂದ್ಯದಲ್ಲಿ ಸುದೀಪ್ ತಂಡ ಗೆದ್ದು ಬೀಗಿದೆ. 

 

 

ಸುದೀಪ್ ಹಾಗೂ ಚಿತ್ರತಂಡದವರು ಮೊದಲ ಪಂದ್ಯ ಗೆದ್ದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ. ಈ ಗೆಲುವನ್ನು ಅಕಾಲಿಕವಾಗಿ ನಿಧನರಾದ ತಙಡದ ಸದಸ್ಯ ದ್ರುವ ಶರ್ಮಾ ಅವರಿಗೆ ಅರ್ಪಿಸಿದ್ದಾರೆ.

 

మరింత సమాచారం తెలుసుకోండి: