ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಶುಕ್ರವಾರವಷ್ಟೇ ತೆರೆತಂಡಿರುವ ತರ್ಡ್ ಕ್ಲಾಸ್ ಹೈಕ್ಲಾಸ್ ಚಿತ್ರವಾಗಿ ಹೊರಹೊಮ್ಮಿದೆ. ಪೂರ್ಣ ಹೊಸಬರ ಸಿನಿಮಾ ಅನ್ನೊದಕ್ಕಿಂತ ಈ ಚಿತ್ರದ ಹೊಸ ಮನಸುಗಳ ಹೊಸ ಸಿನಿ ಪ್ರಯತ್ನ ಎನ್ನಬಹುದು. ನಮ್ ಜಗದೀಶ್ ನಾಯಕ ನಟನಾಗಿ ನಟಿಸಿರುವ ತರ್ಡ್ ಕ್ಲಾಸ್ ಸಿನಿಮಾ ಇದೀಗ ಬಾರಿ ಹಿಟ್ ಪಡೆಯುವ ಮುನ್ಸೂಚನೆಗಳು ಗೋಚರಿಸಿವೆ. 
 
ಅಶೋಕ್ ದೇವ್ ಕಲ್ಪನೆಯಲ್ಲಿ ನಮ್ ಜಗದೀಶ್ ನಿರ್ಮಾಣ ಮತ್ತು ನಟನೆಯಲ್ಲಿ ಮೂಡಿಬಂದಿರುವ ಸಿನಿಮಾ ಜೊತೆಗೆ ಸಮಾಜ ಸೇವೆಯಿಂದಲೂ ಸ್ಯಾಂಡಲ್​ ವುಡ್ ​​ನಲ್ಲಿ ಗಮನ ಸೆಳೆಯುತ್ತ ಬಂದಿರುವ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಸಾಮಾಜಿಕ ಕಳಕಳಿ ಜೊತೆಗೆ ಪ್ರಚಾರ ಮಾಡುತ್ತಾ ಥಿಯೇಟರ್ ಅಂಗಳಕ್ಕೆ ಬಂದಿದ್ದು , ರಿಲೀಸ್ ದಿನವೂ ಮಗದೊಂದು ಸಾಮಾಜಿಕ ಕಳಕಳಿ ಯುಳ್ಳ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದೆ.
 
ಹೌದು, ಶಾಕ್ ಆದರೂ ನಂಬಲೇ ಬೇಕಾದ ವಿಷಯ ವಿದು. ಸಂಪೂರ್ಣ ರಾಜ್ಯಾದ್ಯಂತ ಮೊದಲ ದಿನ ಮೊದಲ ಪ್ರದರ್ಶನ ಫುಲ್ ಫ್ರೀ. ಆದ್ರೆ ಸಿನಿಮಾ ನೋಡಿ ಹೊರ ಬಂದವರು ಸಿನಿಮಾ ಇಷ್ಟವಾಗಿದಲ್ಲಿ ಅಂಧ ಮತ್ತು ಅನಾಥ ಮಕ್ಕಳಿಗೆ ಕೈಲಾದ ದೇಣಿಗೆ ನೀಡುವ ವ್ಯವಸ್ಥೆಯನ್ನು ಚಿತ್ರತಂಡ ಮಾಡಿದ್ದು ಸಾಮಾಜಿಕ ಕಳಕಳಿಯ ಮೂಲಕ ಪ್ರೇಕ್ಷಕರ ಮನಗೆದ್ದಿದೆ. 
 
ಇದೊಂದು ಅಪ್ಪ ಮಗಳ ಬಾಂದವ್ಯದ ಜೊತೆಗೆ ಒಂದು ಪ್ರಾಮಾಣಿಕ ಪ್ರೇಮಿಯ ಕಥೆ ಮತ್ತು ವ್ಯಥೆ. ಸ್ಟೋರಿ ಸರಳ ವಾಗಿದ್ದರು ಕ್ಲೈಮ್ಯಾಕ್ಸ್ ಅದ್ಭುತ ವಾಗಿದೆ ಅನ್ನೋದು ನೋಡುಗ ಪ್ರೇಕ್ಷಕರ ಅಭಿಪ್ರಾಯ. ನಮ್ ಜಗದೀಶ್ ನಿರ್ಮಾಣದ ಜೊತೆಗೆ ಅಚ್ಚುಕಟ್ಟಾದ ನಟನೆಯನ್ನು ಮಾಡಿದ್ದಾರೆ.. ನಾಯಕಿ ರೂಪಿಕಾ ನಟನೆಯ ಅವಕಾಶವಿರೋ ಪಾತ್ರವೂ ಅದ್ಭುತವಾಗಿ ಮೂಡಿಬಂದಿದೆ.
 
ಸಿನಿಮಾ ಗ್ರ್ಯಾಂಡ್ ಆಗಿ ಮೂಡಿಬಂದಿದೆ. ಆದ್ರೆ ಕಥೆ ರೋಟಿನ್ ಆಯ್ತು , ಸಿನಿಮಾದ ವೇಗವು ಸ್ವಲ್ಪ ನಿಧಾನವಿದೆ. ಅದನ್ನು ಬಿಟ್ರೆ ಹೊಸಬರ ಪ್ರಯತ್ನ ಅಚ್ಚುಕಟ್ಟಾಗಿದೆ. ದುಡ್ಡು ಕೊಟ್ಟು ನೋಡೋರಿಗೆ ಒಂದೊಳ್ಳೆ ಸಂದೇಶ ಸಾರುವ ಮನೋರಂಜನೆ. ವಾರಾಂತ್ಯಕ್ಕೆ ಚಿತ್ರ ಭರ್ಜರಿ ಮನರಂಜನೆ ನೀಡುವುದು ಖಚಿತವಾಗಿದೆ.

మరింత సమాచారం తెలుసుకోండి: