ಬೆಂಗಳೂರು: ಸಲಗ ಹೌದು ಇದು ದುನಿಯಾ ವಿಜಿ ನಿರ್ದೇಶನದ ಮೊದಲ ಸಿನಿಮಾವಾಗಿದ್ದು, ಪಕ್ಕ ಮಾಸ್ ಸಿನಿಮಾದ ಅಂಶಗಳನ್ನು ಇಟ್ಟುಕೊಂಡು ನಿರ್ಮಿಸಲಾದ ಸಿನಿಮಾ ಇದು. ಅದರಲ್ಲೂ ದುನಿಯಾ ವಿಜಿ ಆಕ್ಷನ್ ಕಟ್ ಹೇಳುವುದರ ಜೊತೆಗೆ ಅವರೇ ಅಭಿನಯಿಸಿರುವುದು ಈ ಸಿನಿಮಾದ ಮತ್ತೊಂದು ವಿಶೇಷತೆಯಾಗಿದೆ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿ ಕೊಂಡಿರುವ ಸಲಗ ಚಿತ್ರರಂಗದಲ್ಲಿ ಗೀಳಿಡಲು ಸಿದ್ದವಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ವಿಜಯ್ ನಟನೆ, ನಿರ್ದೇಶನದ ಸಲಗ ಚಿತ್ರ ಬಿಡುಗಡೆಯಾಗಬೇಕಿತ್ತು. ಅದರೆ ಕೋವಿಡ್ ೧೯ ದಿಂದ ಇಡೀ ದೇಶ ಲಾಕ್ ಡೌನ್ ಆಗಿರುವುದರಿಂದ ಈ ಚಿತ್ರದ ಬಿಡುಗಡೆ ಕೂಡಾ ಮುಂದಕ್ಕೆ ಹೋಗಿದೆ. ಹಾಗಾಗಿ, ಚಿತ್ರತಂಡ ಕೂಡಾ ಚಿತ್ರದ ಕೆಲಸವನ್ನು ತುಂಬಾ ಕೂಲ್ ಆಗಿ ಮಾಡುತ್ತಿದೆ.
ಸದ್ಯ ಚಿತ್ರದ ರೀರೆಕಾರ್ಡಿಂಗ್ ನಡೆಯುತ್ತಿದೆ. ಸಲಗ ಒಂದು ಮಾಸ್ ಸಿನಿಮಾವಾಗಿದ್ದು, ಚಿತ್ರದ ಮಾಸ್ ದೃಶ್ಯಗಳಿಗೆ ಜಯ್ ರೀರೆಕಾರ್ಡಿಂಗ್ ಮಾಡಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಉತ್ತಮ ಸಂಗೀತವನ್ನು ನೀಡಿ ಈ ಬಾರಿ ಸಿನಿ ಅಭಿಮಾನಿಗಳ ಹೃದಯ ಮುಟ್ಟುವ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ
ಎಲ್ಲಾ ಓಕೆ, ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಲಾಕ್ ಡೌನ್ ತೆರವಿನ ಬಳಿಕ. ಲಾಕ್ ಡೌನ್ ತೆರವಿನ ಬಳಿಕ ಸಲಗ ಚಿತ್ರ ಬಿಡುಗಡೆಯಾಗಲಿದೆ. ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕೆ ಕಾರಣವೂ ಇದೆ. ಮುಖ್ಯವಾಗಿ ವಿಜಯ್ ಚಿತ್ರ ಬಿಡುಗಡೆಯಾಗದೇ ದೊಡ್ಡ ಗ್ಯಾಪ್ ಆಗಿದೆ. ಇದಕ್ಕಿಂತ ಹೆಚ್ಚಾಗಿ ವಿಜಯ್ ತಮ್ಮ ಇಷ್ಟು ವರ್ಷಗಳ ಅನುಭವದೊಂದಿಗೆ ನಿರ್ದೇಶನಕ್ಕಿಳಿದಿದ್ದಾರೆ. ಹಾಗಾಗಿ ವಿಜಯ್ ನಿರ್ದೇಶನದ ಮೊದಲ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಮೇಕಿಂಗ್ ವಿಡಿಯೋ ಹಾಗೂ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ಅದರಲ್ಲೂ ಚಿತ್ರದ ಸೂರಿಯಣ್ಣ? ಹಾಡು ವೈರಲ್ ಆಗಿದ್ದು, ಮಾಸ್ ಪ್ರಿಯರ ಮನ ಗೆದ್ದಿದೆ. ಇದೊಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ವಾಗಿದ್ದು, ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಅಂಡರ್ ವರ್ಲ್ಡ್ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಲವ್ ಸ್ಟೋರಿಯೂ ಬ್ಲೆಂಡ್ ಆಗಿದ್ದು, ಆದು ಸಂಜನಾ ಲವ್ ಯು ಸಂಜನಾ ಹಾಡಿನಲ್ಲಿಸಾಬೀತಾಗಿದೆ. ಟಗರು ಸಿನಿಮಾದಲ್ಲಿ ಡಾಲಿಯಾಗಿ ಅಬ್ಬರಿಸಿದ್ದ ಧನಂಜಂಯ್ ಇಲ್ಲಿ ಸಲಗದಲ್ಲಿ ಎಸಿಪಿ ಸಾಮ್ರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಧನಂಜಯ್ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ.
click and follow Indiaherald WhatsApp channel