ನಟಿ ಪೂಜಾ ಹೆಗ್ಡೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಪೂಜಾ ಅಭಿನಯದ ಮಹರ್ಷಿ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಪೂಜಾ ಹೆಗ್ಡೆಯ ಒಂದು ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 


ಹೌದು, ಈಜು ಕೊಳದಲ್ಲಿ ಹಳದಿ ಬಣ್ಣದ ಬಟ್ಟೆ ಧರಿಸಿ ಪೂಜಾ ಹೆಗಡೆ ಒಂದು ಫೋಟೊ ತೆಗೆಸಿಕೊಂಡಿದ್ದಾರೆ. ಈ ಚಿತ್ರವಂತೂ ಪಡ್ಡೆ ಹುಡುಗರ ಹೃದಯಯದಲ್ಲಿ ಕಿಚ್ಚನ್ನೇ ಹಚ್ಚಿದೆ. ಆದರೆ ಪೂಜಾ ಮಾತ್ರ ನೀರಿನಲ್ಲಿ ಕೂಲಾಗಿ ಕುಳಿತುಕೊಂಡಿದ್ದಾರೆ. 


ಈ ಚಿತ್ರವನ್ನು ಪೂಜಾ ಹೆಗ್ಡೆ ಅವರು ತಮ್ಮ INSTAGRAM ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ 7 ಲಕ್ಷಕ್ಕಿಂತ ಹೆಚ್ಚು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಪೂಜಾ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಚಿತ್ರವನ್ನೂ ಪೂಜಾ ಮಾಡುತ್ತಿದ್ದಾರೆ. 


ಮಂಗಳೂರಿನ ಮೂಲದವಳಾದ ಪೂಜಾ, ತುಳು ಮಾತೃಭಾಷೆಯನ್ನಾಗಿ ಪಡೆದವಳು ಅನ್ನೋದು ದಕ್ಷಿಣ ಕನ್ನಡದ ಜಿಲ್ಲೆಯವರ ಹೆಮ್ಮೆಯಾಗಿದೆ.  


మరింత సమాచారం తెలుసుకోండి: