ಭಜರಂಗಿ ಚಿತ್ರ ಚಂದನವನದಲ್ಲಿ ಅಬ್ಬರಿಸಿದಂತಹ ಸಿನಿಮಾ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಶೈಲಿಯಲ್ಲಿ ಮೂಡಿಬಂದ ಚಿತ್ರ. ಕತೆಯಲ್ಲಾಗಲೀ ಚಿತ್ರಕತೆಯಲ್ಲಾಗಲೀ ಸಿನಿರಸಿಕರ ಆಸೆಗೆ ನೀರೆಯದಂತೆ ಸಿದ್ದವಾದ ಸಿನಿಮಾವನ್ನು ಜನ ಮೆಚ್ಚಿದ್ದರು ಇದರ ಜೊತೆಗೆ ಈ ಚಿತ್ರದ ಪ್ರತಿಯೊಂದು ಹಾಡುಗಳೂ ಕೂಡ ಸಿನಿರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು, ಇಷ್ಟೆಲ್ಲಾ ಲಕ್ಷಣಗಳಿರುವ ಭಜರಂಗಿ ಚಿತ್ರ ಅದ್ದೂರಿ ಪ್ರದರ್ಶನವನ್ನು ಕಂಡು ಯಶಸ್ವಿಯಾಗಿತ್ತು. ಜೊತೆಗೆ ಇದರ ಸ್ವೀಕ್ವೆಲ್ ನ ನಿರೀಕ್ಷೆಯನ್ನು ಕೂಡ ಹೆಚ್ಚಿಸಿತ್ತು. ಅದರಂತೆ ಭಜರಂಗಿಯ ಸ್ವೀಕ್ವೆಲ್ ಎಂಬಂತೆ ಬರುತ್ತಿದೆ ಭಜರಂಗಿ -2 ಚಿತ್ರ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಜನ ಮನ್ನಣೆಯನ್ನು ಪಡೆಯುತ್ತಿದೆ.
ಭಜರಂಗಿ, ವಜ್ರಕಾಯ ನಂತ್ರ ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ನಲ್ಲಿ ಬರ್ತಿರೋ ಹ್ಯಾಟ್ರಿಕ್ ಸಿನಿಮಾ ಭಜರಂಗಿ-2. ಜಯಣ್ಣ ಮತ್ತು ಭೋಗೇಂದ್ರ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಪ್ರತಿ ಫ್ರೇಮ್ನಲ್ಲೂ ಅದ್ಧೂರಿತನ ಎದ್ದು ಕಾಣ್ತಿದೆ. ಭಾರಿ ಬಜೆಟ್ನಲ್ಲಿ ಭಜರಂಗಿಯ ಫ್ಯಾಂಟಸಿ ಪ್ರಪಂಚವನ್ನ ಕಟ್ಟಿಕೊಡ್ತಿದ್ದಾರೆ. ದೊಡ್ಡ ದೊಡ್ಡ ಸೆಟ್ಗಳನ್ನ ನಿರ್ಮಿಸಿ, ನೂರಾರು ಕಲಾವಿದರನ್ನ ವಿಭಿನ್ನ ಗೆಟಪ್ನಲ್ಲಿ ತೋರಿಸಿದೆ. ಮಂತ್ರವಾದಿ ಅವತಾರದಲ್ಲಿ ಶ್ರುತಿ, ನಾಯಕಿಯಾಗಿ ಭಾವನಾ, ಖಳನಟರಾಗಿ ಚೆಲುವ ರಾಜ್ ಮತ್ತು ಲೋಕಿ ದರ್ಶನ ಕೊಟ್ಟಿದ್ದಾರೆ.
ಭಜರಂಗಿ-2 ಟೀಸರ್ಗೆ ಸ್ಯಾಂಡಲ್ವುಡ್ ಮಾತ್ರವಲ್ಲದೇ ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ನಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಪರಭಾಷಾ ಚಿತ್ರ ರಸಿಕರು, ಫಿಲ್ಮ್ ಮೇಕರ್ಸ್, ಕ್ರಿಟಿಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಶೇರ್ ಮಾಡಿ ಹಾಡಿ ಹೊಗಳಿದ್ದಾರೆ. ಇದನ್ನೆಲ್ಲಾ ಎಡಿಟ್ ಮಾಡಿ ಸ್ಪೆಷಲ್ ವೀಡಿಯೋ ಮಾಡಿ ರಿಲೀಸ್ ಮಾಡಿದೆ ಭಜರಂಗಿ ಟೀಂ.
ಟೀಸರ್ ನೋಡಿ ಪರಭಾಷೆಯ ಪ್ರೊಡ್ಯೂಸರ್ಸ್, ಡಿಸ್ಟ್ರಿಬ್ಯೂಟರ್ಸ್ ಫಿದಾ ಆಗಿದ್ದಾರೆ. ಫೋನ್ ಮಾಡಿ ಚಿತ್ರತಂಡಕ್ಕೆ ಅಭಿನಂದನೆ ತಿಳಿಸ್ತಿದ್ದಾರೆ. ಜೊತೆಗೆ ಡಬ್ಬಿಂಗ್ ರೈಟ್ಸ್ಗಾಗಿ ವಿಚಾರಿಸ್ತಿದ್ದಾರೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ನಿರ್ದೇಶಕರು ಯೂನಿವರ್ಸಲ್ ಸಜ್ಬೆಕ್ಟ್ ರೆಡಿ ಮಾಡ್ಕೊಂಡು, ಅದನ್ನ ಅಷ್ಟೆ ಅದ್ಧೂರಿಯಾಗಿ ಕಟ್ಟಿಕೊಡ್ತಿದ್ದು, ಮುಂದೆ ಬೇರೆ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗುವ ಸುಳಿವು ಸಿಕ್ತಿದೆ.
ನರ ರಾಕ್ಷಸರಿಂದ ಶೋಷಣೆಗೆ ಸಿಲುಕಿದವರನ್ನ ಕಾಯುವ ರಕ್ಷಕ ಭಜರಂಗಿಯಾಗಿ ಶಿವರಾಜ್ಕುಮಾರ್ ಮಿಂಚಿದ್ದಾರೆ. ವಿಭಿನ್ನ ಗೆಟಪ್ನಲ್ಲಿ ಶಿವಣ್ಣ ಪ್ರೇಕ್ಷಕರಿಗೆ ಥ್ರಿಲ್ ಕೊಡೋಕ್ಕೆ ಬರ್ತಿದ್ದಾರೆ. ಭಜರಂಗಿ ಮತ್ತು ವಜ್ರಕಾಯ ಚಿತ್ರಗಳಿಗಿಂತ ಭಜರಂಗಿ-2 ಭಾರೀ ಕುತೂಹಲ ಕೆರಳಿಸಿದೆ.
ಕೇವಲ ಒಂದು ವಾರದ ಶೂಟಿಂಗ್ ಅಷ್ಟೆ ಬಾಕಿಯಿತ್ತು. ಅಷ್ಟರಲ್ಲಿ ಕೊರೊನಾ ಹಾವಳಿ ಶುರುವಾಗಿ ಶೂಟಿಂಗ್ ನಿಂತು ಹೋಗಿದೆ. ಟೀಸರ್ಗೆ ಸಿಕ್ಕಿರೋ ಪ್ರತಿಕ್ರಿಯೆ ಚಿತ್ರತಂಡದ ಹುಮ್ಮಸ್ಸು ಹೆಚ್ಚುವಂತೆ ಮಾಡಿದೆ. ಆದಷ್ಟು ಬೇಗ ಶೂಟಿಂಗ್ ಕಂಪ್ಲೀಟ್ ಮಾಡಿ, ಚಿತ್ರವನ್ನ ಪ್ರೇಕ್ಷಕರ ಮುಂದೆ ತರುವ ಲೆಕ್ಕಾಚಾರ ನಡೀತಿದೆ. ಈ ಗ್ಯಾಪ್ನಲ್ಲಿ ಭಜರಂಗಿ-2 ಟ್ರೈಲರ್ ಮತ್ತು ಸಾಂಗ್ಸ್ ಸದ್ದು ಮಾಡಲಿದೆ.
click and follow Indiaherald WhatsApp channel