ಚಾಲೆಂಜಿಂಗ್
ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ
ಚಿತ್ರದ ಗುಂಗಿನಲ್ಲಿ ಇದ್ದಾರೆ. ಈ ಚಿತ್ರ ಸಕ್ಸಸ್
ಆಗಿದೆ ಎಂದು ಹೇಳಲಾಗುತ್ತಿದೆ. ಚಿತ್ರ
ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕುರುಕ್ಷೇತ್ರ ಮೂವಿ ದರ್ಶನ್ ಅವರ 50ನೇ ಸಿನಿಮಾ.
ಆದರೆ ಇದೀಗ ದರ್ಶನ್ ಅವರು
ರಾಬರ್ಟ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ
ಚಿತ್ರದ ಮೊದಲ ಹಂತದ ಚಿತ್ರೀಕರಣ
ಮುಗಿಸಿರುವ ರಾಬರ್ಟ್ ಚಿತ್ರ ಇದೀಗ
ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ರಾಬರ್ಟ್ ಚಿತ್ರ ದರ್ಶನ್ ಅವರಿಗೆ ವಿಶೇಷ ಚಿತ್ರ.
ಈಗಾಗಲೇ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ನಿದ್ದೆಗೆಡಿರುವ ರಾಬರ್ಟ್ ಈಗ ಟೀಸರ್ ಗಾಗಿ ಎದುರು ನೋಡುತ್ತಿದ್ದಾರೆ. ಹಾಗಾದರೆ ದರ್ಶನ್ ಅವರಿಗೆ ನಾಯಕಿಯಾಗಿ ಯಾರು ಅಭಿನಯ ಮಾಡುತ್ತಿದ್ದಾರೆ ಅನ್ನೋದನ್ನು ನೋಡಿದರೆ ನಿಮಗೆ ಆಶ್ಚರ್ಯ ಆಗುತ್ತದೆ. ರಾಬರ್ಟ್ ಮೆಹರಿನ್ ಪಿರ್ಜಾನಾ ದರ್ಶನ್ ಅವರ ಜೊತೆ ಅಭಿನಯಿಸುತ್ತಿದ್ದಾರೆ. ಹೌದು ಇವರು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ನಟಿ. ಮೆಹರಿನ್ ಪಿರ್ಜಾದಾ ಅವರು ಇದೀಗ ಡಿ ಬಾಸ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ರಾಬರ್ಟ್ ಚಿತ್ರದ ನಾಯಕಿಯರ ವಿಚಾರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಇದೀಗ ಮೆಹರಿನ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ತಿಂಗಳು ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಇನ್ನೇನು ಮುಂದಿನ ತಿಂಗಳಲ್ಲಿ ಈ ನಟಿ ರಾಬರ್ಟ್ ಚಿತ್ರತಂಡವನ್ನು ಸೇರಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಮೆಹರಿನ್ ಅವರು ಕನ್ನಡ ಚಿತ್ರ ಅಭಿಮಾನಿಗಳಿಗೆ ಮುಂದೆ ಬರುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.
ದರ್ಶನ್ ಅವರು ಕುರುಕ್ಷೇತ್ರ ಚಿತ್ರದಿಂದ ಇದೀಗ ಮತ್ತಷ್ಟು ಹವಾ ಮಾಡುತ್ತಿದ್ದಾರೆ. ಕರ್ನಾಟಕದದಲ್ಲಿ ಚಿತ್ರವು ಭರ್ಜರಿಯಾಗಿ ಓಡುತ್ತಿದೆ. ದರ್ಶನ್ ಅಭಿಮಾನಿಗಳು ಇದೀಗ ಖುಷಿ ಆಗುತ್ತಿದೆ. ರಾಬರ್ಟ್ ಚಿತ್ರದ ಮೂಲಕ ದರ್ಶನ್ ಅವರು ಮತ್ತೊಮ್ಮೆ ತೆರೆ ಮೇಲೆ ತಮ್ಮ ಹವಾ ಸೃಷ್ಟಿಸುವ ಸಾಧ್ಯತೆ ಕಾಣುತ್ತಿದೆ.
ದರ್ಶನ್ ಅವರು ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರವು ನಿರೀಕ್ಷೆ ಮಾಡಿದ ಮಟ್ಟಿದೆ ಯಶಸ್ಸು ಸಿಕ್ಕಿಲ್ಲ ಎನ್ನುವ ವಿಮರ್ಶೆ ಕೇಳಿ ಬರುತ್ತಿದೆ. ಯಾಕೆಂದರೆ ಈ ಚಿತ್ರವು ಸ್ಯಾಂಡಲ್‌ವುಡ್ ಲೋಕದಲ್ಲಿಯೇ ಅತಿ ಹೆಚಚ್ಚು ಬಜೆಟ್ ಹಾಕಿದ ಚಿತ್ರ ಎನ್ನಲಾಗಿದೆ. ಮುನಿರತ್ನ ಅವರು ಕುರುಕ್ಷೇತ್ರ ಚಿತ್ರಕ್ಕೆ ಬಂಢವಾಳ ಹೂಡಿದ್ದರು.
click and follow Indiaherald WhatsApp channel