ಬೆಂಗಳೂರು: ರಾಜ್ಯ ರಾಜಕೀಯ ದಲ್ಲಿ ಸರ್ಕಾರ ಉರುಳಿಸ ಬೇಕೆಂದು 5 ಬಾರಿ ವಿಫಲರಾದ ನಂತರ 6ನೇ ಭಾರಿಗೆ ಯಶಸ್ವಿಯಾಯಿತು. 17 ಅತೃಪ್ತರನ್ನು ಕೊನೆಗೂ ರಾಜೀನಾಮೆ ಬಿ. ಎಸ್. ವೈ ಕೊಡಿಸಿಯೇ ಬಿಟ್ಟರು. ಇವರಿಗೆ ಕೋಟಿ ಕೋಟಿ ಆಫರ್ ಇತ್ತು. ಇದರಲ್ಲಿ ಒಬ್ಬರಾದ ಎಂ. ಟಿ. ಬಿಗೆ ಕೋಟಿ ಆಫರ್ ಗಳ ಗಿಪ್ಟ್  ಅನ್ನು ಪಿ. ಎಸ್. ವೈ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದ ಜನತೆಗೆ 100 ಕೋಟಿ ರೂಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಸ್ಥಳೀಯ ಸಂಸದ ಬಿ.ಎನ್.ಬಚ್ಚೇಗೌಡರು ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಸ್ಥಳೀಯರು ಹೊಸಕೋಟೆಗೆ ಕಾವೇರಿ ನೀರು ಮತ್ತು ಮೇಟ್ರೋ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಕೂಡ ನಡೆಸಿ ವೇದಿಕೆ ಕಾರ್ಯಕ್ರಮಕ್ಕೆ ಬಿಸಿ ಮುಟ್ಟಿಸಿದರು. ಹೀಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚನೆಗೆ ಸಹಕರಿಸಿದ ಅನರ್ಹರಿಗೆ ಭರ್ಜರಿ ಗೀಫ್ಟ್ ನೀಡುವ ಮೂಲಕ ಋಣ ತೀರಿಸಲು ಮುಂದಾಗಿದ್ದಾರೆ.  


ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ಹೋಬಳಿ ವ್ಯಾಪ್ತಿಯ 30ಕೆರೆಗಳಿಗೆ ಏತ ನೀರಾವರಿ 100ಕೋಟಿ ರೂಗಳ ಯೋಜನೆಗೆ ಚಾಲನೆ ನೀಡಲು ಪಟ್ಟಣಕ್ಕೆ ಆಗಮಿಸಿದಾಗ ಅದ್ದೂರಿಯಾಗಿ ಎಂಟಿಬಿ ನಾಗರಾಜ್ ಬರ ಮಾಡಿಕೊಂಡರು. ಬೃಹತ್ ಸೇಬಿನ ಹಾರಹಾಕುವ ಮೂಲಕ ಬರ ಮಾಡಿಕೊಂಡರು. ಮುಖ್ಯಮಂತ್ರಿಗಳ ಜೊತೆ ಆಗಮಿಸಿದ್ದ ಸಚಿವ, ಆರ್. ಅಶೋಕ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಹಾಗೂ ಕೆಂಪೇಗೌಡರ ಪುತ್ಥಳಿ ಮಾಲಾರ್ಪಣೆ ಮೂಲಕ ಗೌರವ ಸೂಚಿಸಿ ವೇದಿಕೆಯಲ್ಲಿ ಆಸೀನರಾದರು.

ಕೆ.ಆರ್.ಪುರಂನ ಎಸ್ ಟಿ ಪಿಯಿಂದ ಅನುಗೊಂಡನಹಳ್ಳಿ ಹೋಬಳಿಯ  30 ಕೆರೆಗಳಿಗೆ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿ ತಾಲೂಕಿನ ಅಭಿವೃದ್ಧಿಗೆ ತಮ್ಮ ಸರ್ಕಾರ ಪೂರ್ಣ ಸಹಕಾರ ನೀಡುವ ಭರವಸೆ ನೀಡಿ ಮತ್ತೊಮ್ಮೆ ಎಂ.ಟಿ.ಬಿ.ನಾಗರಾಜ್ ರವರನ್ನು ಆಯ್ಕೆ ಮಾಡುವಂತೆ ನೆರೆದಿದ್ದವರಿಗೆ ಕರೆ ನೀಡುವ ಮೂಲಕ ಸಂಸದ ಬಚ್ಚೇಗೌಡರಿಗೆ ನೇರ ಸಂದೇಶ ರವಾನಿಸಿದರು. ಎಂ.ಟಿ.ಬಿ.ನಾಗರಾಜ್ ರವರ ಎಲ್ಲಾ ಬೇಡಿಕೆಗಳಿಗೂ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದರು.




మరింత సమాచారం తెలుసుకోండి: