ಬಾಲಿವುಡ್ ಬಾದ್ ಶಾ.. ಈ ವರ್ಷದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಕಳೆದ ವರ್ಷ ತೆರೆ ಕಂಡಿದ್ದ ಶಾರುಖ್ ಖಾನ್ ಅವರ ಝೀರೋ ಚಿತ್ರ ಬಾಕ್ಸ್ ಆಫೀಸ್‌ ನಲ್ಲಿ ಮಕಾಡೆ ಮಲಗಿತ್ತು ನೋಡಿ. ಯಾಕೆಂದರೆ ಶಾರುಕ್ ಅವರ ಹೀರೋಯಿಂ ಬಿಟ್ಟು ಒಂದು ಭಿನ್ನವಾದ ಅಭಿನಯಕ್ಕೆ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು. ಆದರೆ ಪ್ರೇಕ್ಷರು ಈ ರೀಯ ಹೊಸ ಅವತಾರದಲ್ಲಿ ಶಾರುಖ್ ಅವರನ್ನು ನೋಡಲಿಲ್ಲ. ಹೀಗಾಗಿ ಈ ಚಿತ್ರ ಮಕಾಡೆ ಮಲಗಿ ಬಿಟ್ಟಿತು. 

ಈ ಚಿತ್ರ ಯಶಸ್ಸ ಕಾಣದೇ ಹೋಯಿತು ಅನ್ನೋದು ಶಾರುಖ್ ಅವರಿಗೆ ಸಹಜವಾಗಿ ಬೇಸರ ತರಿಸಿತು. ಯಾಕೆಂದರೆ ಭಿನ್ನವಾದ ಅಭಿನಯಕ್ಕೆ ಶಾರುಕ್ ಪ್ರಯತ್ನ ಪಟ್ಟಿದ್ದರು. ಆದರೆ ಅಭಿಮಾನಿಗಳು ಅದನ್ನು ಸ್ವೀಕರಿಸಿಲಿಲ್ಲ ಅನ್ನೋ ನೋವು ಕಾಡಿತು. ಹೀಗಾಗಿ ಶಾರುಕ್ ಇದೀಗ ತಮ್ಮ ಸಿನಿಮಾ ನಿರ್ಮಾಣದತ್ತ ತಮ್ಮ ಸಮಯ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಕುಟುಂಬದ ಜೊತೆಗೂ ಅವರು ಕಾಲ ಕಳೆಯುತ್ತಿದ್ದಾರೆ. 


ಈ ಮಧ್ಯೆ ಒಂದು ಸಿನಿಮಾದಲ್ಲಿಯೂ ಅವರು ಅತಿಥಿ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ. ಹೌದು, ಹೀರೋ ಆಗಿದ್ದವರು. ಅತಿಥಿ ಪಾತ್ರವನ್ನು ಮಾಡುವಂತ ಪರಿಸ್ಥಿತಿ ಬಂದು ಬಿಡ್ತಾ ಅಂದ್ಕೊತೀರಾ? ಹೌದು, ಕಾಲ ಅನ್ನೋದು ಹೀಗೆ ಇರೋದಿಲ್ಲ ಅಂತಾರಲ್ಲ, ಅದು ಸುಳ್ಳಲ್ಲ ನೋಡಿ. ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ಈ ವರ್ಷವೇ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿಯೇ ಶಾರುಕ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇಡೀ ಸಿನಿಮಾದಲ್ಲಿ ಶಾರುಖ್​ ಅವಾರ ಅತಿಥಿ ಪಾತ್ರ ತುಂಬಾನೇ ಪ್ರಮುಖ ಎಂದು ಮೂಲಗಳು ತಿಳಿಸಿವೆ. ಆದರೆ ಈ ವಿಚಾರಕ್ಕೆ ಮಾತ್ರ ಶಾರುಖ್ ಈ​ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ನಿಮಗೆ ಗೊತ್ತಿರಬಹುದು ಈ ಮೊದಲು ಆಲಿಯಾ ಭಟ್​ ಜೊತೆ ಶಾರುಖ್ ಬಣ್ಣ ಹಚ್ಚಿದ್ರು. ಅದು​ 'ಡಿಯರ್​ ಜಿಂದಗಿ' ಸಿನಿಮಾದಲ್ಲಿ. ಹೌದು, ನಂತರ ರಣಬೀರ್​ ನಟನೆಯ 'ಯೇ ದಿಲ್​ ಹೇ ಮುಷ್ಕಿಲ್​' ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. 


ಇದೀಗ ವಿಶೇಷ ಏನಪ್ಪ ಅಂದರೆ, ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಬ್ಬರೂ ಇರೋ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚುವ ಅವಕಾಶ, ಒನ್ಸ್ ಅಗೇನ್ ಅತಿಥಿ ಪಾತ್ರದಲ್ಲಿ ಮಿಂಚುವ ಅವಕಾಶ ದೊರಕಿದೆ. ಇದೇ ಕಾರಣಕ್ಕೆ ಶಾರುಕ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಅನ್ನೋದು ವಿಶ್ವಾಸಾರ್ಹನೀಯ ಮೂಲದಿಂದ ಬಂದ ಮಾಹಿತಿ.


మరింత సమాచారం తెలుసుకోండి: