ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟನಾಗಿ ಅಷ್ಟೇ ಅಲ್ಲದ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸಾಧು ಕೋಕಿಲಾ ಅವರು ಇದೀಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅನುಕೂಲ ಆಗಲು ಅತ್ಯಾಧುನಿಕ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ ನಿರ್ಮಿಸಿದ್ದಾರೆ.
ಹೌದು ಇದರ ಹೆಸರು, ಲೂಪ್ ಎಂಟರ್ಟೈನ್ಮೆಂಟ್ ಸ್ಟುಡಿಯೋ. ಈ ಸ್ಟುಡಿಯೋ ಅನ್ನು ಇತ್ತೀಚೆಗೆ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಸಾಧು ಕೋಕಿಲಾ ಅವರಲ್ಲಿ ವಿಶೇಷ ಪ್ರತಿಭೆ ಇದೆ. ಅವರು ನಿರ್ದೇಶನ ಮಾಡಿರುವ ಸಂಗೀತವನ್ನು ನಾನು ಹಾಡಿದ್ದೇನೆ' ಎಂದಿದ್ದಾರೆ.
ಲೂಪ್ ಎಂಟರ್ಟೈನ್ಮೆಂಟ್ ಸ್ಟುಡಿಯೋ ಅನ್ನು ಸಾಧು ಕೋಕಿಲಾ ಪುತ್ರ ಸುರಾಗ್ ಹಾಗೂ ಸಂಕಲನಕಾರ ಜೋನಿ ಹರ್ಷ ಮೇಲುಸ್ತುವಾರಿಯಲ್ಕಿಬಿದು ನಿರ್ಮಾಣ ಆಗಿದೆ. ಇಲ್ಲಿ ಡಬ್ಬಿಂಗ್, ರೀ ರೆಕಾರ್ಡಿಂಗ್, ಗ್ರಾಫಿಕ್ಸ್, ವಿಎಫ್ಎಕ್ಸ್ ಸೇರಿದಂತೆ ಚಿತ್ರ ನಿರ್ಮಾಣಕ್ಕೆ ಸಂಭಂಧಿಸಿದ ಕೆಲಸಗಳು ಒಂದೇ ಸೂರಿನಡಿ ನಡೆಯಲಿವೆ ಎನ್ನಲಾಗಿದೆ.
click and follow Indiaherald WhatsApp channel