ದಂಡುಪಾಳ್ಯ, ಸೌಂತ್ ಸಿನಿ ಇಂಡಸ್ಟ್ರಿಯಲ್ಲಿಯೇ ಈ ಹೆಸರು ಕೇಳಿದ್ರೆ ಎದೆ ಒಮ್ಮೊ ಗಡಗಡ ಎಂದು ನಡುಗುತ್ತದೆ. ಹೌದು, ದಂಡುಪಾಳ್ಯ ಚಿತ್ರವ ನೋಡಿ ಒಂದು ಎರಡನ್ನು ಥಿಯೇಟರ್ ಗಳಲ್ಲಿಯೇ ಮಾಡಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ದಂಡು ಪಾಳ್ಯದ ಹವಾ ಇತ್ತು. ದರೋಡೆ, ರೇಪ್, ಮರ್ಡರ್ ಈಗೆ ಚಿತ್ರದ ತುಂಬೆಲ್ಲಾ ಬೀಕರತೆ ಹೊಂದಿದ್ದ ಗ್ಯಾಂಗಿನ ಚಿತ್ರಕಥೆಯಿದು. ಒಂದಲ್ಲಾ, ಎರಡಲ್ಲಾ  ಬರೋಬ್ಬರಿ ಮೂರು ಭಾಗಗಳಾಗಿ ತೆರೆ ಕಂಡು ಇದು ನಿಜವಾಗಿಯೂ ನಡೆದಿದಿಯೇ ಎಂಬ ಊಹಾತ್ಮಕ ಗಾಸಿಪ್ ಗಳನ್ನು ಎಬ್ಬಿಸಿದ ಚಿತ್ರವಿದು. ಇದೀಗ ಮತ್ತೇ ದರೋಡೆ ಮಾಡಲು ಬರುತ್ತಿದೆ ದಂಡುಪಾಳ್ಯ ಗ್ಯಾಂಗ್. ಆಶ್ಚರ್ಯವಾದರೂ ನಂಬಲೇ ಬೇಕಾದ ವಿಷಯವಿದು. 


'ದರೋಡೆಕೋರರ ಗ್ಯಾಂಗ್ ಎಂದಾಗ, ಅದು ಸಾಕಷ್ಟು ನೈಜತೆಗೆ ಹತ್ತಿರವಾಗಿರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ಕಲಾವಿದರಿಗೆ ತಲೆ ಸ್ನಾನ ಮಾಡದಂತೆ, ಕಟಿಂಗ್, ಶೇವಿಂಗ್ ಮಾಡಿಸದಂತೆ ಹೇಳಿದ್ದೆವು. ಅದನ್ನೆಲ್ಲ ಅವರು ಪಾಲಿಸಿದ್ದಾರೆ. ಪಾತ್ರಕ್ಕಾಗಿ ಒಂದು ವರ್ಷ ತಯಾರಿ ಮಾಡಿಕೊಂಡಿದ್ದಾರೆ. ಅವರೆಲ್ಲರ ಸಹಕಾರದಿಂದಲೇ ಈ ಸಿನಿಮಾ ಇಷ್ಟು ಚೆನ್ನಾಗಿ ಬರಲು ಸಾಧ್ಯವಾಯಿತು' ಎನ್ನುತ್ತಾರೆ ನಿರ್ಮಾಪಕ ವೆಂಕಟ್‌. 'ಚಿತ್ರತಂಡದ ಎಲ್ಲ ಕಲಾವಿದರಿಗೂ ಮೆಚ್ಚುಗೆ ನೀಡಬೇಕು. ನಾವು ಶೂಟಿಂಗ್ ಮಾಡಿದ ಸ್ಥಳದಲ್ಲಿ ತುಂಬ ಬಿಸಿಲು ಇತ್ತು. ಮೀನನ್ನು ಕಾದ ಎಣ್ಣೆಗೆ ಹಾಕಿದ್ದಾರೆ ಹೇಗಿರುತ್ತದೋ ಹಾಗೇ ಎಲ್ಲರು ಆಗಿದ್ದರು. ಆದರೂ, ಒಂದೇ ಒಂದು ದಿನವು ನಮಗೆ ಕಷ್ಟವಾಗುತ್ತಿದೆ ಎಂದು ಒಬ್ಬರು ದೂರು ಹೇಳಲಿಲ್ಲ. ನಮ್ಮ ಸಿನಿಮಾ ಅತ್ಯುತ್ತಮವಾಗಿ ಮೂಡಿಬರಲು ಸುಮನ್‌ ರಂಗನಾಥ್‌ ಅವರ ಬೆಂಬಲವೂ ಜಾಸ್ತಿ ಇದೆ' ಎಂದು ವೆಂಕಟ್‌ ಹೇಳುತ್ತಾರೆ.


ಈ ಚಿತ್ರಕ್ಕೆ ಕೆ.ಟಿ. ನಾಯಕ್‌ ನಿರ್ದೇಶನ ಮಾಡಿದ್ದರೆ, ಆರ್.ಗಿರಿ ಛಾಯಾಗ್ರಹಣ ಮಾಡಿದ್ದಾರೆ. ಸುಮನ್ ರಂಗನಾಥ್ 'ದಂಡುಪಾಳ್ಯಂ 4'ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸಂಜೀವ್ ಕುಮಾರ್, ಬ್ಯಾನರ್ಜಿ, ರಾಕ್‌ಲೈನ್ ಸುಧಾಕರ್, ಅರುಣ್, ವಿಠ್ಠಲ್ ರಂಗಾಯಣ, ಜೀವ, ಬುಲೆಟ್ ಸೋಮು ಪೋಷಕ ಪಾತ್ರಗಳಲ್ಲಿದ್ದಾರೆ. ನಿರ್ಮಾಪಕ ವೆಂಕಟ್ ಕೂಡ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಐಟಂ ಹಾಡೊಂದಕ್ಕೆ ಮುಮೈತ್ ಖಾನ್ ಹೆಜ್ಜೆ ಹಾಕಿದ್ದು ಚಿತ್ರದ ಹೈಪನ್ನು ಮತ್ತಷ್ಟು ಹೆಚ್ಚಿಸಿದೆ.


మరింత సమాచారం తెలుసుకోండి: