ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ಎಂತಲೇ ಕರೆಯಿಸಿಕೊಳ್ಳುವ ದುನಿಯಾ ವಿಜಯ್ ಇದೀಗ ಸವದತ್ತಿ ಎಲ್ಲಮ್ಮ ದೇವಿಯ ಕ್ಷೇತ್ರದಲ್ಲಿ ಉದೋ ಉದೋ ಎನ್ನುತ್ತಿದ್ದಾರೆ. ಯಾಕೆ ಗೊತ್ತಾ? ಈ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ. 
ನಟ 'ದುನಿಯಾ' ವಿಜಯ್‌ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ಸಲಗ' ಚಿತ್ರದ ಶೂಟಿಂಗ್ ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ. ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಇದೀಗ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಚಿತ್ರತಂಡ ಭೇಟಿ ನೀಡಿ, ಅಲ್ಲಿಯೂ ಶೂಟಿಂಗ್ ಮಾಡಿಕೊಂಡು ಬಂದಿದೆ ಚಿತ್ರತಂಡ. 'ಸಲಗ'ಕ್ಕೆ ಬಂಡವಾಳ ಹೂಡುತ್ತಿರುವುದು ನಿರ್ಮಾಪಕ ಕೆ.ಪಿ. ಶ್ರೀಕಾಂತ್‌. ಈ ಹಿಂದೆ ಅವರು 'ಟಗರು' ಚಿತ್ರವನ್ನು ನಿರ್ಮಿಸಿದ್ದರು. ಆ ಸಿನಿಮಾದ ಚಿತ್ರೀಕರಣ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಶೂಟಿಂಗ್ ಮಾಡಲಾಗಿತ್ತು. ಇದೀಗ ಅವರ ನಿರ್ಮಾಣದ ಎರಡನೇ ಸಿನಿಮಾದ ಶೂಟಿಂಗ್ ಸಹ ಅಲ್ಲಿಯೇ ನಡೆದಿದೆ. ಈ ಕುರಿತು ಚಿತ್ರೀಕರಣದ ಫೋಟೋ-ವಿಡಿಯೋಗಳನ್ನು 'ದುನಿಯಾ' ವಿಜಯ್‌ ಹಂಚಿಕೊಂಡಿದ್ಧಾರೆ. 'ಇವತ್ತು ಸವದತ್ತಿ ಎಲ್ಲಮ್ಮನ ಗುಡಿಯಲ್ಲಿ ಸಲಗದ ಚಿತ್ರೀಕರಣ ನಿಮಿತ್ತ ನನ್ನ ಇಡೀ ತಂಡದಿಂದ ಅಮ್ಮನ ಆಶೀರ್ವಾದ ಪಡೆಯಲಾಯಿತು.' ಎಂದು ವಿಜಯ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. 
ಸ್ಯಾಂಡಲ್ ವುಡ್ ನ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, 'ಆಗ 'ಟಗರು, ಈಗ 'ಸಲಗ'. ಸವದತ್ತಿ ಯಲ್ಲಮ್ಮನ ಆಶೀರ್ವಾದವಿಲ್ಲದೆ ನಮ್ಮ ವೀನಸ್ ಎಂಟರ್‌ಟೇನ್‌ಮೆಂಟ್‌ ಸಿನಿಮಾಗಳ ಶೂಟಿಂಗ್‌ ಕಂಪ್ಲೀಟ್‌ ಆಗುವುದಿಲ್ಲ' ಎಂದಿದ್ದಾರೆ. ಭೂಗತ ಲೋಕದ ಕಥೆಯನ್ನು ಈ ಸಿನಿಮಾ ಒಳಗೊಂಡಿದ್ದು, 'ಡಾಲಿ' ಧನಂಜಯ ಖಡಕ್‌ ಪೊಲೀಸ್‌ ಅಫೀಸರ್ ಸಾಮ್ರಾಟ್ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ. ವಿಜಯ್‌ಗೆ ನಾಯಕಿಯಾಗಿ ಸಂಜನಾ ಆನಂದ್‌  ನಟಿಸುತ್ತಿದ್ದಾರೆ. 'ಟಗರು' ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್‌ ರಾಜ್ ಈ ಸಿನಿಮಾದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡುತ್ತಿದ್ದಾರೆ.  ಸಲಗ ಚಿತ್ರವೂ ಅರ್ಥಪೂರ್ಣ ಸಂದೇಶವನ್ನು  ಒಳಗೊಂಡಿದೆ, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. 


మరింత సమాచారం తెలుసుకోండి: