ಮಂಡ್ಯ: ಅನರ್ಹರು ಕೇವಲ ತಮ್ಮ ವೈಯಕ್ತಿಕ ಆಸೆಗಾಗಿ ಕ್ಷೇತ್ರದ ಮತದಾರರನ್ನು ಮರೆತು ರಾಜೀನಾಮೆ ನೀಡಿದ್ದಾರೆ. ಅವರಿಗೆ ನೈತಿಕತೆ ಇಲ್ಲ. ಅವರು ಸ್ವಾರ್ಥಿ ಗಳು ಎನ್ನುವ ಎಷ್ಟೋ ಜನರಿಗೆ ಈ ಅನರ್ಹ ಶಾಸಕ ಉತ್ತರಿಸಿದ್ದಾರೆ. ಜೊತೆಗೆ ಜೆಡಿಎಸ್ ಗೆ ಸವಾಲಾಕಿದ್ದಾರೆ. 


ನಾನು ನನ್ನ ಅರ್ಧ ಆಸ್ತಿಯನ್ನು ನನ್ನ ಕ್ಷೇತ್ರಕ್ಕೆ ಬರೆದು ಕೊಡುತ್ತೇನೆ. ನೀವು ಅರ್ಧ ಆಸ್ತಿಯನ್ನು ಬರೆದುಕೊಡಿ ಎಂದು ದಳಪತಿಗಳಿಗೆ ಸವಾಲು ಹಾಕಿದ್ದಾರೆ. ಕೆ.ಆರ್‌.ಪೇಟೆಗೆ ರಾಜಕೀಯ ಮಾಡಲು ನೀವು ಬರ್ತಾ ಇದೀರಾ? ನೀವು ನಿಮ್ಮ ಅರ್ಧ ಆಸ್ತಿ ಬರೆಯಿರಿ. ನಾನು ಅರ್ಧ ಆಸ್ತಿ ಬರೆಯುತ್ತೇನೆ ಎಂದಿದ್ದಾರೆ. ಅದು ಯಾರು ಅಂತ ನಾವ್ ಹೇಳ್ತೀವಿ ಕೇಳಿ. 
ಅದು ಬೇರಾರು ಅಲ್ಲ, ಆಪರೇಷನ್ ಕಮಲದ ಕೋಟಿ ರೂಪಾಯಿಗಳ ಒಪ್ಪಂದ ಬಿಚ್ಚಿಟ್ಟ  ಅನರ್ಹ ಶಾಸಕ ನಾರಾಯಣಗೌಡ. ಸುಮ್ಮನೆ ನಾರಾಯಣಗೌಡ ಗೆದ್ದರೂ ಸೋತರೂ ಮುಂಬೈಗೆ ಹೋಗ್ತಾನೆ ಎಂದು ಹೇಳುತ್ತೀರಿ. ನಾನು ಹೋದರೂ ಅದು ಹೊಟ್ಟೆಪಾಡಿಗೆ ಹೋಗೋದು. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಮದುವೆಯಾಗಿದ್ದಾಳೆ. ಇನ್ನೊಬ್ಬಳು ಉನ್ನತ ವ್ಯಾಸಂಗ ಮಾಡ್ತಾ ಇದ್ದಾಳೆ. ನನ್ನ ಹಿರಿಯ ಮಗಳು ನನ್ನ ಅಕೌಂಟ್‌ಗೆ ಎರಡು ಲಕ್ಷ ರು. ಹಾಕ್ತಾ ಇದ್ದಾಳೆ. ನನಗೆ ಇನ್ನೇನು ಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ. ರಾಜೀನಾಮೆಗೂ ಮುನ್ನ ಬಿಎಸ್‌ವೈ ಜೊತೆ ಮಾತುಕತೆ ನಡೆಸಿದ್ದೆ ಎಂದು ನಾರಾಯಣಗೌಡ ಹೇಳಿಕೆ ನೀಡಿದ ಮರು ಕ್ಷಣವೇ ಮಾತುಕತೆ ನಡೆದಿದ್ದು ರಾಜೀನಾಮೆ ನಂತರ ಎಂದು ಉಲ್ಟಾಹೊಡೆದಿದ್ದಾರೆ. ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ರಾಜೀನಾಮೆ ಬಳಿಕ ಈ ಮಾತುಕತೆ ನಡೆದಿದೆ. ರಾಜೀನಾಮೆಗೂ ಮುನ್ನ ಅಲ್ಲ ಎಂದು ಸ್ಪೋಟಕ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.


ಇದರ ಮೂಲಕ ಅತೃಪ್ತ ರಲ್ಲೂ ತಮ್ಮ ಕ್ಷೇತ್ರಗಳ ಜವಾಬ್ದಾರಿಯಿದೆ. ಆ ಜವಾಬ್ದಾರಿ ಯಿಂದಲೇಮ ಅಭಿವೃದ್ಧಿ ಮಾಡಬೇಕೆಂದೇ  ಇಷ್ಟೇಲ್ಲಾ   ನಡೆದಿದೆಯಾ ಎಂಬುದು ಬಯಲಾಗುತ್ತಿವೆ. ಇದೀಗ ಅರ್ಧ ಆಸ್ತಿ ಬರೀರಿ  ಎಂದು ಕ್ಷೇತ್ರಕ್ಕಾಗಿ ಎಂದು ದಳಪತಿಗಳ ವಿರುದ್ಧ ಗುಡುಗಿದ್ದಾರೆ.


మరింత సమాచారం తెలుసుకోండి: