ಬೆಂಗಳೂರು: ಕಳೆದ ಐದಾರು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸಿನಿಮಾ ಗಳು ಬಿಡುಗಡೆಯಾಗುತ್ತಿವೆ. ಹೌದು, ಅದು ಕೂಡ ವಿನೂತನ ಪ್ರಯತ್ನಗಳೊಂದಿಗೆ. ಆದಕ್ಕೆ ಇದೀಗ ಸ್ಯಾಂಡಲ್ ವುಡ್ ಗೆ 'ಆನೆಬಲ'ವು ಸೇರಿದೆ. ಹೌದು, ಏನಿದು ಗೊತ್ತಾ! ಆನೆಬಲ'ವು ಮುಂದೆ ಓದಿ... 
 
ಚಿತ್ರತಂಡವೊಂದು  ತನ್ನ ಶೀರ್ಷಿಕೆಯಾಗಿಯೇ ಆನೆಬಲವನ್ನಾಗಿಟ್ಟುಕೊಂಡು ಇದೀಗ ಟ್ರೇಲರ್ ಬಿಡುಗಡೆ ಮಾಡಿದೆ. ಸದ್ಯ ಈಗಾಗಲೇ ಸಿನೆಮಾದ ಎರಡು ಹಾಡುಗಳು ಸೂಪರ್​ ಹಿಟ್​ ಆಗಿದ್ದು ಚಿತ್ರತಂಡಕ್ಕೆ ಹೊಸ ಚೈತನ್ಯವನ್ನು ತಂದುಕೊಟ್ಟಿದೆ. ಚಿತ್ರತಂಡ ಸತತ ಎರಡು ವರ್ಷಗಳ ಪರಿಶ್ರಮದ ಫಲವೇ ಆನೆಬಲ. ಚಿತ್ರದ ಸಾಹಿತ್ಯ ಮತ್ತು ಸಂಗೀತ ಹಾಗೂ ಚಿತ್ರೀಕರಣವೇ ಫ್ರೆಸ್​​ ಅನಿಸುತ್ತಿದೆ. ಈ ತಿಂಗಳ ಕೊನೆಯಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಆನೆಬಲ ಚಲಚನಚಿತ್ರವು, ಈ ದಶಕದಲ್ಲಿ ಪ್ರಥಮ ಬಾರಿಗೆ ಯಾರು ಈವರೆಗೆ ಹೇಳಿರದ ಕತೆ-ಚಿತ್ರಕತೆಯನ್ನು ಹೊಂದಿರುವುದು ವಿಶೇಷವಾಗಿದ್ದು ಹಿಟ್ ಆಗುವ ಮುನ್ಸೂಚನೆ ನೀಡಿದೆ. 
 
ಇನ್ನು ಜನತಾ ಟಾಕೀಸ್ ಸಂಸ್ಥೆ ಮೂಲಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ನಿರ್ಮಿಸಿರುವ ಚಿತ್ರವು ಒಟ್ಟು ನಾಲ್ಕು ಹಾಡುಗಳನ್ನು ಹೊಂದಿದೆ, ಸಿದ್ಧಸೂತ್ರಗಳನ್ನು ಬದಿಗೊತ್ತಿ ನೈಜತೆಗೆ ಹೊತ್ತುಕೊಟ್ಟು ರಿಯಲ್​ ಆಗಿ ಜಾತ್ರೆಲಿ ಶೂಟ್ ಮಾಡಿದ್ದಾರೆ. ಹಾಗೇ ನೈಜತೆಯನ್ನು ಕಾಪಾಡಿಕೊಳ್ಳಲು ಗ್ರಾಮೀಣಾ ಪ್ರದೇಶದ ಕ್ರೀಡೆಯನ್ನು ಆಯೋಜಿಸಿ ಶೂಟ್ ಮಾಡಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದೆ. 
 
ಪ್ರಪ್ರಥಮ ಬಾರಿಗೆ ಕಥೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ಸೂನಗಹಳ್ಳಿ ರಾಜು ಅವರು ತಮ್ಮ ಚಿತ್ರದ ಬಗ್ಗೆ ಜನರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡದ ಹೆಸರಾಂತ ವಿಕಟಕವಿ ಎಂದೇ ಪ್ರಖ್ಯಾತಿ ಪಡೆದ ಸಾಹಿತಿ ಯೋಗರಾಜ್ ಭಟ್ ಮತ್ತು ಡಾ.ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಚಿತ್ರಕ್ಕಿದ್ದು, ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಮಾಡಿದ್ದಾರೆ. 
 
ಸದ್ಯ ಚಿತ್ರದ ತಾರಾಂಗಣದಲ್ಲಿ ಸಾಗರ್​, ರಕ್ಷಿತ್​, ಮಲ್ಲರಾಜು, ಉದಯ್​ ಶ್ವೇತಾ, ಹರೀಶ್ ಶೆಟ್ಟಿ, ಚಿರಂಜೀವಿ, ಮುತ್ತುರಾಜು, ಗೌತಮ್​ ಸೇರಿದಂತೆ ಮುಂತಾದವರು ಕಾಣಿಸಿಕೊಂಡಿದ್ದು ಇದೀಗ ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಪಡೆದಿದೆ.

మరింత సమాచారం తెలుసుకోండి: