ಕೊರೊನಾ ಮತ್ತು ಲಾಕ್​ಡೌನ್​ನಿಂದ ಇಡೀ ಚಿತ್ರರಂಗ ಬಂದ್​ ಆಗಿದೆ. ತಮ್ಮ ನೆಚ್ಚಿನ ಸ್ಟಾರ್​ಗಳನ್ನ ತೆರೆಮೇಲೆ ನೊಡೋಕ್ಕಾಗದೇ ಅಭಿಮಾನಿಗಳು ಕೂಡ ನಿರಾಶೆಯಾಗಿದ್ದಾರೆ. ಆದರೆ, ಶಿವಣ್ಣನ ಅಭಿಮಾನಿಗಳಿಗೆ ಇಲ್ಲೊಂದು ಸ್ವೀಟ್ ನ್ಯೂಸ್ ಇದೆ. ಅವರ ಬರ್ಥ್ ಡೇ ಪ್ರಯುಕ್ತ ಫ್ಯಾನ್ಸ್ ಸ್ಪೆಷಲ್​ ಗಿಫ್ಟ್ ಕೊಡ್ತಿದ್ದಾರೆ. ಅಷ್ಟಕ್ಕೂ ಆ ಸ್ಪಷಲ್ ಏನು ಅಂತೀರ ಇಲ್ಲಿದೆ ನೋಡಿ..?

 

ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಶೂಟಿಂಗ್​ ರಿಲೀಸ್​ ಇಲ್ಲದೇ, ಸ್ಟಾರ್​ಗಳು ಮನೆಯಲ್ಲಿಯೇ ಕಾಲ ಕಳೆಯೋ ಹಾಗಾಗಿದೆ. ಇತ್ತ ಅಭಿಮಾನಿಗಳು ಕೂಡ ನೆಚ್ಚಿನ ಹೀರೋಗಳನ್ನ ನೋಡೋಕ್ಕಾಗದೇ ನಿರಾಶೆಯಲ್ಲಿದ್ದಾರೆ. ಸಿನಿಮಾ ರಿಲೀಸ್​ ಅಷ್ಟೇ ಅಲ್ಲಾ. ಅವರ ಬರ್ತ್​ಡೇ ಸೆಲೆಬ್ರೇಷನ್​ ಕೂಡ ಮಿಸ್​ ಮಾಡಿಕೊಳ್ತಿದ್ದಾರೆ ಫ್ಯಾನ್ಸ್.

 

ಸದ್ಯ ಈಗ ಇಡೀ ಕರುನಾಡೇ ಕಾಯ್ತಿರೋದು ಹ್ಯಾಟ್ರಿಕ್ ಹೀರೋ ಶಿವಣ್ಣನ ಹುಟ್ಟುಹಬ್ಬದ ಸಂಭ್ರಮಕ್ಕೆ. ಜುಲೈ 12 ಅಂದ್ರೆ ಮುಂದಿನ ತಿಂಗಳು ಸೆಂಚೂರಿ ಸ್ಟಾರ್ ಹುಟ್ಟುಹಬ್ಬ. ಆದರೆ, ಈ ಕೊರೊನಾ ಮತ್ತು ಲಾಕ್​ಡೌನ್​ನಿಂದ ಈ ಬಾರಿ ಶಿವಣ್ಣನ ಹುಟ್ಟುಹಬ್ಬಕ್ಕೆ ಬ್ರೇಕ್​ ಬೀಳಲಿದೆ. ಹೆಚ್ಚು ಜನ ಸೇರಲು ಅವಕಾಶವಿಲ್ಲದ ಕಾರಣ , ಪ್ರತಿವರ್ಷದಂತೆ ಈ ವರ್ಷ ಅಭಿಮಾನಿಗಳು ಗ್ರ್ಯಾಂಡ್​ ಆಗಿ ಹುಟ್ಟುಹಬ್ಬ ಆಚರಿಸೋಕ್ಕೆ ಸಾಧ್ಯವಿಲ್ಲ.

 

ಈ ಬಾರಿ ಶಿವಣ್ಣನ ಬರ್ತ್​ಡೇ ಸೆಲೆಬ್ರೇಟ್ ಮಾಡೋಕ್ಕಾಗಲ್ಲ ಅಂತ ಬೇಸರದಲ್ಲಿರೋ ಅಭಿಮಾನಿಗಳಿಗೆ ಭಜರಂಗಿ 2 ಚಿತ್ರತಂಡದಿಂದ ಸ್ಪೆಷಲ್​ ಗಿಫ್ಟ್​ವೊಂದು ಸಿಗಲಿದೆ. ಜುಲೈ 12 ರಂದು ಶಿವಣ್ಣನ ಬತ್​ಡೇ ಪ್ರಯುಕ್ತ , ನಿರ್ದೇಶಕ ಹರ್ಷ, ತಮ್ಮ ಭಜರಂಗಿ 2 ಚಿತ್ರದ ಸ್ಪೆಷಲ್​ ವಿಡಿಯೋವೊಂದನ್ನ ಶಿವಣ್ಣನ ಅಭಿಮಾನಿಗಳಿಗೆ ನೀಡ್ತಿದ್ದಾರೆ. ಇದು ಟೀಸರೂ ಅಲ್ಲ. ಟ್ರೈಲರೂ ಅಲ್ಲ. ಭಜರಂಗಿ 2 ಚಿತ್ರದ ಜಾನರ್​ ಮತ್ತು ಶಿವಣ್ಣನ ಲುಕ್​ ಮಾತ್ರ ಈ ವಿಡಿಯೋದಲ್ಲಿ ರಿವೀಲ್​ ಆಗಲಿದೆ. ಸುಮಾರು ಒಂದೂವರೆ ನಿಮಿಷದ ಈ ಸ್ಪೆಷಲ್​ ವಿಡಿಯೋ ಜುಲೈ 12 ರಂದು ಹೇಗೆ, ಎಷ್ಟು ಗಂಟೆಗೆ ರಿಲೀಸ್​ ಆಗುತ್ತೆ ಅನ್ನೋದನ್ನ ಸದ್ಯದಲ್ಲೇ ಅನೌನ್ಸ್​ ಮಾಡಲಿದ್ದಾರೆ ನಿರ್ದೇಶಕ ಎ.ಹರ್ಷ.

 

ಭಜರಂಗಿ ಸಿನಿಮಾದ ಶೂಟಿಂಗ್​ ಆಲ್​ಮೋಸ್ಟ್​ ಕೊನೆಯ ಹಂತದಲ್ಲಿದೆ. ಇನ್ನು 10 ದಿನಗಳ ಚಿತ್ರೀಕರಣ ಮುಗಿಸಿದ್ರೆ ಅಲ್ಲಿಗೆ ಭಜರಂಗಿ 2 ಶೂಟಿಂಗ್ ಕಂಪ್ಲೀಟ್ ಆಗುತ್ತೆ. ಚಿತ್ರದ ಪ್ರಮುಖ ಭಾಗವಾದ ಕ್ಲೈಮಾಕ್ಸ್,್ ಇಂಟರ್​ವಲ್ ಬ್ಲಾಕ್​ ಎಲ್ಲದರ ಚಿತ್ರೀಕರಣ ಮುಕ್ತಾಯವಾಗಿದೆ. 300, 500 ಜನ ಭಾಗವಹಿಸಿದ್ದ ಸೀಕ್ವೆನ್ಸ್​ಗಳು ಕಂಪ್ಲೀಟ್ ಆಗಿದೆ. ಇನ್ನೇನಿದ್ರು ಶಿವಣ್ಣನ 3 ದಿನಗಳ ಚಿತ್ರೀಕರಣ, ಉಳಿದ ಕ್ಯಾರೆಕ್ಟರ್​ಗಳ 8 ದಿನಗಳ ಚಿತ್ರೀಕರಣ ಬಾಕಿಯಿದೆ.

 

ಈ ಹಿಂದೆ ಕೂಡ ಭಜರಂಗಿ ಚಿತ್ರದ ಫಸ್ಟ್ ಲುಕ್​ ರಿಲೀಸ್​ ಆಗಿದ್ದು,ಅದ್ಬುತವಾದ ರೆಸ್ಪಾನ್ಸ್​ ಪಡೆದುಕೊಂಡಿತ್ತು. ಭಜರಂಗಿ ಸೂಪರ್​ ಸಕ್ಸಸ್​ ಬೆನ್ನಲ್ಲೇ ಭಜರಂಗಿ 2 ಚಿತ್ರಕ್ಕೂ ನಿರೀಕ್ಷೆ ಹೆಚ್ಚಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಡಿಸೆಂಬರ್​ ಅಥವಾ ಜನವರಿ ವೇಳೆಗೆ ಭಜರಂಗಿ 2 ತೆರೆಗೆ ಬರ್ಲಿದೆ.

 

మరింత సమాచారం తెలుసుకోండి: