ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಶನಿವಾರದೊಳಗೆ ನೂತನ ಸಚಿವರ ಖಾತೆ ಹಂಚಿಕೆ ಮಾಡುತ್ತೇನೆ ಎಂದು ನೂತನ ಸಚಿವರ ಪ್ರಮಾಣ ವಚನ ದಿನ ಹೇಳಿದ್ದರು. ಅದ್ಯಾಕೋ ಅದು ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ. ಅದೂ ಕೂಡ ದೆಹಲಿಗೆ ತೆರಳದೇ, ಬೆಂಗಳೂರಿನಲ್ಲೇ ಫೈನಲ್ ಮಾಡಿದ್ದಾರೆ. 
 
ನೂತನ ಸಚಿವರು ಬಲಿಷ್ಠ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ನಮಗೆ ಈ ಖಾತೆನೆ ಬೇಕು ಎಂದು ಸಿಎಂ ಮೇಲೆ ಒತ್ತಡ ಹಾಕ್ತಿದ್ದಾರೆ. ಇಂತಹದ್ದೇ ಖಾತೆ ಕೊಡಿ ಎಂದು ಪಟ್ಟು ಹಿಡಿದಿರೋದು ಯಡಿಯೂರಪ್ಪಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ದೆಹಲಿಗೆ ತೆರಳಿ ಹೈಕಮಾಂಡ್​ ಜತೆ ಚರ್ಚಿಸಿ ಖಾತೆ ಅಂತಿಮಗೊಳಿಸ್ತಾರೆ ಎಂದು ಹೇಳಲಾಗ್ತಿತ್ತು. ಆದರೆ, ಇದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದು, ಇವತ್ತು ಎರಡನೇ ಶನಿವಾರ, ದೆಹಲಿಗೆ ಹೋಗಲ್ಲ. ಸೋಮವಾರ ಖಾತೆ ಹಂಚಿಕೆ ಮಾಡ್ತೀನಿ ಎಂದು ಬಿ. ಎಸ್ ಯಡಿಯೂರಪ್ಪ ಹೇಳಿದರು.
 
ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ನೂತನ ಸಚಿವರೆಲ್ಲ ಕಣ್ಣಿಟ್ಟಿದ್ದಾರೆ. ಈ ಖಾತೆಗೆ ಎಸ್‌.ಟಿ ಸೋಮಶೇಖರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರಂತೆ. ಅಲ್ಲದೇ, ಗೃಹ ಖಾತೆ ಬಿ.ಸಿ ಪಾಟೀಲ್ ಅವರು ಲಾಬಿ ಮಾಡ್ತಿದ್ದಾರೆ ಎಂದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್ ನಮ್ಮಲ್ಲಿ ಯಾವುದೇ ಲಾಬಿ ಇಲ್ಲ. ಖಾತೆ ಕ್ಯಾತೆ ಇಲ್ಲ ಎಂದಿದ್ದಾರೆ. ಆದರೂ ಮುಖ್ಯಮಂತ್ರಿಗೆ ಭಾರೀ ಒತ್ತಡ ತರುತ್ತಿದ್ದಾರೆ. 
 
ಬೆಂಗಳೂರು ಸಚಿವರಾದ ಬೈರತಿ ಬಸವರಾಜು, ಕೆ. ಗೋಪಾಲಯ್ಯ, ಎಸ್‌.ಟಿ ಸೋಮಶೇಖರ್, ಆರ್. ಅಶೋಕ್ ಮತ್ತು ವಿ. ಸೋಮಣ್ಣ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಇದೆಲ್ಲ ಪುಷ್ಟಿಗೆ ಕಾರಣವಾಗಿದೆ. ಇದೆಕ್ಕೆಲ್ಲ ಕಾರಣ, ಸಿಎಂ ಯಡಿಯೂರಪ್ಪ ಅವರು ಈ ಹಿಂದೆ ದೆಹಲಿಗೆ ತೆರಳಿ ಖಾತೆ ಫೈನಲ್ ಮಾಡುತ್ತೇನೆ ಎಂದಿದ್ರು. ಆದರೆ, ಈಗ ದೆಹಲಿಗೆ ತೆರಳದೆ ಖಾತೆ ಹಂಚಿಕೆ ಮಾಡುತ್ತೇನೆ ಎಂದಿರೋದು ಮತ್ತೆ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.
 
 
 

మరింత సమాచారం తెలుసుకోండి: