ಬೆಂಗಳೂರು: ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೇಣುಕಾಚಾರ್ಯ, ಹೊನ್ನಾಳಿಯಲ್ಲಿ ನನಗೆ ಕಳೆದ ಚುನಾವಣೆಯಲ್ಲಿ ಒಬ್ಬ ಮುಸ್ಲಿಮರೂ ಮತ ಹಾಕಿಲ್ಲ. ಹೀಗಾಗಿ ಅವರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯದ ಜನರ ವಿರುದ್ಧ ಹೇಳಿಕೆಗೆ ಹಲವರು ಗರಂ ಹಾಗಿದ್ದಾರೆ. 
 
ಹೊನ್ನಾಳಿಯಲ್ಲಿ 4 ಚುನಾವಣೆ ಎದುರಿಸಿರುವ ನನಗೆ ಮುಸ್ಲಿಮರು ಮತ ಹಾಕುತ್ತಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ ಮುಸ್ಲಿಂ ಸಮುದಾಯದಿಂದ ಒಂದೂ ಮತ ಬಂದಿಲ್ಲ. ಅಭಿವೃದ್ಧಿ ಕೆಲಸ ಮಾಡಲು ನಾನು ಬೇಕು, ವೋಟು ಮಾತ್ರ ಕಾಂಗ್ರೆಸಿ ಗರಿಗೆ ಎಂಬುದು ಯಾವ ನ್ಯಾಯ? ಹೀಗಾಗಿ ಇನ್ನುಮುಂದೆ ನನ್ನ ಮತಕ್ಷೇತ್ರದಲ್ಲಿ ಈ ಸಮುದಾಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್‌ ಕೊಡುವುದಿಲ್ಲ. ಹೊನ್ನಾಳಿಯನ್ನು ಸಂಪೂರ್ಣ ಕೇಸರೀಕರಣ ಮಾಡುತ್ತೇನೆ,'' ಎಂದು ರೇಣುಕಾಚಾರ್ಯ ಘೋಷಿಸಿದ್ದಾರೆ. ಕೆಲವು ಮಸೀದಿಗಳು ಮದ್ದು ಗುಂಡು ಸಂಗ್ರಹ ಹಾಗೂ ಭಯೋತ್ಪಾದಕ ತಾಣಗಳಾಗಿದ್ದು, ಮದರಸಾ ಗಳಲ್ಲಿ ಮಕ್ಕಳ ಮೈಂಡ್‌ ವಾಷ್‌ ಮಾಡಿ ಭಯೋತ್ಪಾದಕರನ್ನು ಸೃಷ್ಟಿಸ ಲಾಗುತ್ತಿದೆ ಎಂದೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
 
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್‌ಐ ಹಾಗೂ ಎಸ್‌ಡಿಪಿಐ ನಿಷೇಧಿಸುವಂತೆ ಕೇಂದ್ರಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ, ಸಂಘ ಪರಿವಾರದ ಸಂಘಟನೆಗಳನ್ನೂ ನಿಷೇಧಿಸುವಂತೆ ಮಾಜಿ ಸಚಿವರಾದ ಯು.ಟಿ. ಖಾದರ್‌ ಮತ್ತು ಜಮೀರ್‌ ಅಹ್ಮದ್‌ ಒತ್ತಾಯಿಸು ತ್ತಿರುವುದು ದುರದೃಷ್ಟಕರ. ಸಂಘ ಪರಿವಾರದವರು ದೇಶವನ್ನ ಉಳಿಸೋ ಕೆಲಸ ಮಾಡ್ತಿದ್ದಾರೆ. ನೆರೆ ಸಂದರ್ಭಗಳಲ್ಲಿ ಸ್ವಯಂ ಸೇವಕರಂತೆ ತೊಡಗಿಸಿಕೊಂಡು, ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಇಂತಹ ಆಪಾದನೆ ಮಾಡುತ್ತಿರುವ ಈ ಇಬ್ಬರೂ ನಾಯಕರು ದೇಶದ್ರೋಹಿಗಳು ಎಂದಿದ್ದಾರೆ.
 
ನಮ್ಮ ರಾಷ್ಟ್ರದ ಮುಸ್ಲಿಮರು ನಿಜಕ್ಕೂ ಭಾರತೀಯರು ಎಂದಾದರೆ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಒಪ್ಪಬೇಕು. ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಮಸೀದಿಗಳಲ್ಲಿ ಪತ್ವಾ ಹೊರಡಿಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೂ ರಾಜಕೀಯ ಕಾರಣಕ್ಕಾಗಿ ಬೆಂಬಲವಾಗಿ ನಿಂತಿವೆ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

మరింత సమాచారం తెలుసుకోండి: