ಕೊರೋನಾ ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸಿ ಅಧಿಕವಾದ ಸಾವುನೋವುಗಳು ಸಂಭವಿಸುವಂತೆ ಮಾಡಿದೆ ಇದರಿಂದ ವಿಶ್ವದ ಅಭಿವೃದ್ಧಿ ರಾಷ್ಟ್ರಗಳೇ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿರುವಾಗ ಇನ್ನ ಅಭಿವೃದ್ಧಿ ಶೀಲ ರಾಷ್ಟ್ರಗಳನ್ನು ಬಿಡುತ್ತದೆಯೇ ಇದರಂತೆ ಭಾರತವೂ ಕೂಡ ಸಾಕಷ್ಟು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದ್ದು, ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗದೇ ಪ್ರಧಾನಿ ಮೋದಿಯವರು ಕೋವಿಡ್-೧೯ ನಿಧಿಯನ್ನು ಸ್ಥಾಪಿಸಿ ಸಹಕರಿಸುವಂತೆ ಕೋರಿದ್ದರು.  ಇದಕ್ಕೆ ಬೆಂಬಲ ನೀಡಿದ ನಾನಾ ಗಣ್ಯರು ಉದ್ಯಮಿಗಳು, ಸಿನಿ ತಾರೆಯರು, ಕ್ರೀಡಾ ಪಟುಗಳು ಹೀಗೆ ವಿವಿಧ ದಾನಿಗಳು ತಮ್ಮ ಕೈಲಾದಷ್ಟು ದೇಣಿಗೆಯನ್ನು ನೀಡಿದ್ದಾರೆ ಇದರ ಜೊತೆಗೆ ಮತ್ತೊಂದು ಮೂಲದಿಂದ ದೇಣಿಗೆಯನ್ನು ಸ್ವೀಕರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಅಷ್ಟಕ್ಕೂ ಆ ಮೂಲ ಯಾವುದು ಎಂಬುದರ ಬಗ್ಗೆ ಇಲ್ಲಿದೆ ಡೀಟೇಲ್ಸ್..

 

ಕೋವಿಡ್-19 ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಭಾರತದಲ್ಲೂ ಕೂಡ ಕರೊನಾ ಕರಿಛಾಯೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಾ ಹೋಗುತ್ತಿದೆ. ಇದರ ಪರಿಣಾಮವಾಗಿಯೇ ದೇಶದಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿದ್ದು, ಆರೋಗ್ಯ ಮಾತ್ರವಲ್ಲ ಆರ್ಥಿಕ ಪರಿಸ್ಥಿತಿಯ ಮೇಲೂ ದೊಡ್ಡ ಹೊಡೆತ ನೀಡಿದೆ.

 

ಕರೊನಾ ಪಿಡುಗನ್ನು ತೊಲಗಿಸಲು ಕೈಜೋಡಿಸುವಂತೆ ಮಾರ್ಚ್ 28 ರಂದು ಪ್ರಧಾನಿ ಮೋದಿ ಎಂ ಕೇರ್ಸ್ ಪರಿಹಾರ ನಿಧಿಯನ್ನು ಘೋಷಿಸಿದರು. ಇದೊಂದು ಸಾವರ್ಜನಿಕ ಚಾರಿಟಬಲ್ ಟ್ರಸ್ಟ್ ಆಗಿದ್ದು, ಇದಕ್ಕೆ ಪ್ರಧಾನಿ ಮೋದಿಯವರೇ ಮುಖ್ಯಸ್ಥರಾಗಿದ್ದಾರೆ. ಇದರಲ್ಲಿ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ವಿತ್ತ ಸಚಿವರು ಸದಸ್ಯರಾಗಿದ್ದಾರೆ. ಕರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಮಾಡಬಯಸುವವರು ತಮ್ಮ ಕೈಲಾದಷ್ಟನ್ನು ಪರಿಹಾರ ನಿಧಿಗೆ ನೀಡಬಹುದಾಗಿದೆ. ಈ ಗಾಗಲೇ ಈ ನಿಧಿಗೆ ಸಾಕಷ್ಟು ಹಣ ಸಂದಾಯವಾಗಿದೆ.

 

ಇನ್ನು ಮುಂದಿನ ದಿನಗಳಲ್ಲಿ ಪಿಎಂ ಕೇರ್ಸ್ ಪರಿಹಾರ ನಿಧಿಗೆ ವಿದೇಶಿ ದೇಣಿಗೆಯನ್ನು ಸ್ವೀಕರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ.

 

ವಿಶ್ವದ ನಾಯಕರು ಕೂಡ ಇದೇ ಹಾದಿಯಲ್ಲಿದ್ದಾರಾ ಎಂದು ಖಚಿತಪಡಸಿಕೊಳ್ಳಲು ಇಂದು ಪ್ರಮುಖ 10 ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಚರ್ಚಿಸಿದ್ದಾರೆ. ಈ ವಿಚಾರದಲ್ಲಿ ಒಂದು ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಲು ವಿಶ್ವದ ನಾಯಕರನ್ನು ಪ್ರಧಾನಿ ಒತ್ತಾಯಿಸಿದ್ದಾರೆ.

 

ಈಗಾಗಲೇ ಪ್ರಧಾನಿ ಕಾರ್ಯಾಲಯಕ್ಕೆ ದೇಣಿಗೆ ಹರಿದುಬರುತ್ತಿದ್ದು, ಸಂದಿಗ್ಧ ಸಮಯದಲ್ಲಿ ಸರ್ಕಾರ ಆರ್ಥಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಜನರು ಸಹಾಯಾಸ್ತ ಚಾಚಿದ್ದಾರೆ. ನಿಮಗೂ ದೇಣಿಗೆ ನೀಡುವ ಮನಸ್ಸಿದ್ದರೆ, pmindia.gov.in ಮತ್ತು donate to PM CARES Fund ವೆಬ್ಸೈಟ್ಗೆ ಭೇಟಿ ನೀಡಿ ಹಣ ಸಂದಾಯ ಮಾಡಬಹುದಾಗಿದೆ.

 

మరింత సమాచారం తెలుసుకోండి: