ಭಾರತ ಸರ್ಕಾರ ಕೈಗೊಂಡಿರುವಂತಹ ಆತ್ಮ ನಿರ್ಭಾರ ಯೋಜನೆಯ ಮೂಲಕ ಭಾರತ ದೇಶ ಬೇರೆ ದೇಶದವರ ಮೇಲೆ ಅವಲಂಬಿತವಾಗದೆ ತನ್ನ ಶಕ್ತಿಯ ಮೂಲಕ ಬೆಳೆಯುವ ಮೂಲಕ ಸರ್ಕಾರ ದೇಶೀ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯೆತೆಯನ್ನು ನೀಡುವ ದೃಷ್ಟಿಯಿಂದ ದೇಶದಲ್ಲಿ ಆರಂಭಿಸಲಾಗುವ ಹೊಸ ಹೊಸ ಉದ್ಯಮಗಳಿಗೆ ಕೇಂದ್ರ ಸರ್ಕಾರ ಸಹಾಯವನ್ನು ನೀಡುತ್ತಿದೆ. ಈ ಮೂಲಕ ಭಾರತದಲ್ಲಿ 11.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಬಿಡಿಭಾಗಗಳ ಉತ್ಪಾದನೆಯನ್ನು ಮಾಡುವ ಗುರಿಯನ್ನು ಹೊಂದಿದೆ.



 

 ಹೌದು ಮುಂದಿನ ಐದು ವರ್ಷಗಳಲ್ಲಿಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್‌ಐ) ಯೋಜನೆಯಡಿ ಭಾರತದಲ್ಲಿ 11.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.



"ಪಿಎಲ್‌ಐ ಯೋಜನೆಯಡಿ, ಸುಮಾರು 22 ಕಂಪನಿಗಳು ಅರ್ಜಿ ಸಲ್ಲಿಸಿವೆ. ಈ ಕಂಪನಿಗಳು ಮುಂಬರುವ ಐದು ವರ್ಷಗಳಲ್ಲಿ ಭಾರತದಲ್ಲಿ 11.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಮತ್ತು ಬಿಡಿಭಾಗಗಳನ್ನು ಉತ್ಪಾದಿಸಲಿವೆ, ಅದರಲ್ಲಿ 7 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗುವುದು" ಎಂದು ಸಚಿವರು ಹೇಳಿದ್ದಾರೆ.




ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿಶಂಕರ್ ಪ್ರಸಾದ್ ಈ ಕಂಪನಿಗಳು ಮೂರು ಲಕ್ಷ ನೇರ ಮತ್ತು ಸುಮಾರು ಒಂಬತ್ತು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದರು. ಆದರೆ ಇದೇ ವೇಳೆ ಈ ಯೋಜನೆ ಯಾವುದೇ ದೇಶದ ವಿರುದ್ಧವಾಗಿಲ್ಲ. ಇದು ಭಾರತ ಸಕಾರಾತ್ಮಕವಾಗಿದೆ ಎಂದು ಹೇಳುವ ಯೋಜನೆಯಾಗಿದೆ. "ನಾನು ಯಾವುದೇ ದೇಶದ ಹೆಸರನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ನಮ್ಮ ಭದ್ರತೆ, ಗಡಿರೇಖೆಯ ದೇಶಗಳಿಗೆ ಸಂಬಂಧಿಸಿದಂತೆ ನಮಗೆ ನಮ್ಮದೇ ನಿಯಮಾವಳಿಗಳಿದೆ"




ಮೊಬೈಲ್ ಫೋನ್ (ಇನ್‌ವಾಯ್ಸ್ ಮೌಲ್ಯ 15,000 ಮತ್ತು ಅದಕ್ಕಿಂತ ಹೆಚ್ಚಿನ) ವಿಭಾಗದಲ್ಲಿ ಅರ್ಜಿ ಸಲ್ಲಿಸಿರುವ ಅಂತರರಾಷ್ಟ್ರೀಯ ಮೊಬೈಲ್ ಫೋನ್ ಉತ್ಪಾದನಾ ಕಂಪನಿಗಳ ಪೈಕಿ ಸ್ಯಾಮ್‌ಸಂಗ್, ಫಾಕ್ಸ್‌ಕಾನ್ ಹೊನ್ ಹೈ, ರೈಸಿಂಗ್ ಸ್ಟಾರ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್. ಸಹ ಸೇರಿದೆ. ಇವುಗಳಲ್ಲಿ, ಫಾಕ್ಸ್‌ಕಾನ್ ಹೊನ್ ಹೈ, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಎಂಬ ಮೂರು ಕಂಪನಿಗಳು ಆಪಲ್ ಐಫೋನ್ ನ ಗುತ್ತಿಗೆ ತಯಾರಿಕಾ ಕಂಪನಿಗಳಾಗಿದೆ.




"ಮುಂದಿನ ಐದು ವರ್ಷಗಳಲ್ಲಿ, ಈ ಯೋಜನೆಯಡಿಯಲ್ಲಿ ಒಟ್ಟು 11.5 ಲಕ್ಷ ಕೋಟಿ ರೂ.ಗಳ ಉತ್ಪಾದನೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟು ಉತ್ಪಾದನೆಯಲ್ಲಿ, ಮೊಬೈಲ್ ಫೋನ್ (ಇನ್ವಾಯ್ಸ್ ಮೌಲ್ಯ 15,000 ಮತ್ತು ಅದಕ್ಕಿಂತ ಹೆಚ್ಚಿನ) ವಿಭಾಗದ ಅಡಿಯಲ್ಲಿರುವ ಕಂಪನಿಗಳು 9 ರೂ. ಲಕ್ಷ ಕೋಟಿ, ಮೊಬೈಲ್ ಫೋನ್ (ದೇಶೀಯ ಕಂಪನಿಗಳು) ವಿಭಾಗದ ಅಡಿಯಲ್ಲಿರುವ ಕಂಪನಿಗಳು ಸುಮಾರು 2 ಲಕ್ಷ ಕೋಟಿ ರೂ. ಉತ್ಪಾದನೆ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ನಿರ್ದಿಷ್ಟ ಎಲೆಕ್ಟ್ರಾನಿಕ್ ಘಟಕಗಳ ವಿಭಾಗದವರು 45,000 ಕೋಟಿ ರೂ.ಗಳ ಉತ್ಪಾದನೆಯ ಪ್ರಸ್ತಾವನೆ ಸಲ್ಲಿಸಿದ್ದಾರೆ"




ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಪಿಎಲ್‌ಐ ಯೋಜನೆ ಮತ್ತು ಇತರ ಉಪಕ್ರಮಗಳು ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಸ್ಪರ್ಧಾತ್ಮಕ ತಾಣವನ್ನಾಗಿ ಮಾಡಲು ಸಹಾಯ ಮಾಡುತ್ತದೆ ಮತ್ತು ಆತ್ಮನಿರ್ಭರ್ ಭಾರತ್‌ಗೆ ಉತ್ತೇಜನ ನೀಡುತ್ತದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. "ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಅವರ ದೂರದೃಷ್ಟಿಯ ಉಪಕ್ರಮಗಳಾದ 'ಡಿಜಿಟಲ್ ಇಂಡಿಯಾ' ಮತ್ತು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಗಳಿಂದ ಕಳೆದ ಐದು ವರ್ಷಗಳಲ್ಲಿ ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿದೆ" ಸಚಿವರು ಹೇಳಿದರು.

మరింత సమాచారం తెలుసుకోండి: