ನಟ ರಿಷಿ ನಿಮಗೆಲ್ಲ ಗೊತ್ತಿರಬಹುದು. ಆಪರೇಶನ್ ಅಲಮೇಲಮ್ಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ನಂತರ ಕವಲು ದಾರಿ ಸಿನಿಮಾದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಇದೀಗ ತಮ್ಮ ಮೂರನೇ ಚಿತ್ರವನ್ನು ರಿಷಿ ಅನೌನ್ಸ್ ಮಾಡಿದ್ದಾರೆ.
(ರಿಷಿ)
ರಿಷಿ ಅಭಿನಯಿಸುತ್ತಿರುವ ಮೂರನೇ ಚಿತ್ರದ ಹೆಸರು 'ಸಾರ್ವಜನಿಕರಿಗೆ ಸುವರ್ಣಾವಕಾಶ' ಈ ಚಿತ್ರದಲ್ಲಿ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ಚಿತ್ರಕಥೆ ಹಾಗೂ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಜನಾರ್ಧನ್ ಚಿಕ್ಕಣ್ಣ ಹಾಗೂ ಹರಿಕೃಷ್ಣ ಸಂಭಾಷಣೆ ಬರೆದಿದ್ದಾರೆ.
(ಕವಲುದಾರಿಯಲ್ಲಿ ರಿಷಿ)
ಈ ಆಧುನಿಕ ಯುಗದಲ್ಲಿ ಎಲ್ಲರೂ ಒಂದು ವಸ್ತುವಿಗೆ ಆಸೆ ಪಡೋದು ಸಹಜ. ಹೀಗೆ ತನ್ನ ಪ್ರೇಯಸಿ ಒಂದು ವಾಸ್ತುವಿಗಾಗಿ ಆಸೆ ಪಟ್ಟಾಗ ನಾಯಕನಟ ಏನು ಮಾಡುತ್ತಾನೆ ಅನ್ನೋದೇ ಚಿತ್ರದ ತಿರುಳು ಎನ್ನಲಾಗಿದೆ.
click and follow Indiaherald WhatsApp channel