ಬಿಜೆಪಿ ನಾಯಕರು ಇದೀಗ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಇದರ ಬಗ್ಗೆ ಟೀಕೆ ವ್ಯಕ್ತವಾಗುತ್ತಿವೆ. ಈ ಕುರಿತು ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ್ ಯಡಿಯೂರಪ್ಪ ಅವರ ಬರ ಅಧ್ಯಯನ ಪ್ರವಾಸ ರಾಜಕೀಯ ಗಿಮಿಕ್ ಎಂದಿದ್ದಾರೆ. ಈ ಕುರಿತು ಮತ್ತಷ್ಟು ಡಿಟೇಲ್ಸ್ ಇಲ್ಲಿದೆ.
ಬಿಜೆಪಿಯವರು ಇಷ್ಟು ದಿನಗಳ ಕಾಲ ಆಪರೇಶನ್ ಕಮಲ ಮಾಡೋಕೆ ಪ್ರಯತ್ನ ಪಟ್ಟರು. ಅದು ಜಾರಿ ಆಗಲಿಲ್ಲ. ಇದೀಗ ಬರ ಅಧ್ಯಯನ ಎಂಬ ಗಿಮಿಕ್ ಆರಂಭಿಸಿದ್ದಾರೆ. ನಾಳೆ ನಾಡಿದ್ದು ಮುಂಗಾರು ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಸಂದರ್ಭದಲ್ಲಿ ಬಿಜೆಪಿಯ ಬರ ಅಧ್ಯಯನ ನಾಟಕ ಎಂದು ವ್ಯಂಗ್ಯವಾಡಿದರು.
ಆಪರೇಶನ್ ಕಮಲ ವಿಫಲ ಆಗಿರೋದೇ ಇದಕ್ಕೆ ಕಾರಣ. ಹೀಗಾಗಿ ಕಮಲದ ನಾಯಕರಿಗೆ ಏನು ಮಾಡಬೇಕು ಎಂದು ತಿಳಿಯದೇ ಈ ನಾಟಕ ಆಡುತ್ತಿದ್ದಾರೆ. ಈ ನಾಟಕ ಕೂಡ ಬಹು ದಿನಗಳ ಕಾಲ ಉಳಿಯಲ್ಲ ಎಂದು ಹೇಳಿದ್ದಾರೆ.
click and follow Indiaherald WhatsApp channel