ಕನ್ನಡದ ಖ್ಯಾತ ಖಳನಟ ಸುದೀರ್ ಅವರು ಅಗಲಿ ಇಂದಿಗೆ ಬರೋಬ್ಬರಿ  20 ವರ್ಷಗಳು ತುಂಬಿದವು. ಅವರು ಜೂನ್ 13, 1999 ರಲ್ಲಿ ಸುದೀರ್ ಅವರು ಇಹಲೋಕ ಬಿಟ್ಟು ಹೋಗಿದ್ದರು. ಆದರೆ ಅಭಿಮಾನಿಗಳ ಹೃದಯದಲ್ಲಿ ಸುದೀರ್ ಇನ್ನೂ ಅಜರಾಮರರಾಗಿ ಇದ್ದಾರೆ ಅನ್ನೋದು ಸತ್ಯ. 

 

ನಿರ್ದೇಶಕ ತರುಣ್ ಸುದೀರ್ ಅವರು ತಮ್ಮ ಅಪಗೊ ಅಗಲಿದ ನೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 'ನೀನುಬಿರುವ ಧೈರ್ಯದಲಿ ಯಾರೊಂದಿಗೂ ನಾ ಸೋಲಲ್ಲ. ನಿನ್ನ ಪ್ರೀತಿ ಮುಂದೆ ಏನಿಲ್ಲ. ಅಪ್ಪ I love u pa.. ' ಎಂದು ಚೌಕ ಚಿತ್ರದ ಹಾಡಿನ ಮೂಲಕ‌ ಅಪ್ಪ ಸುದೀರ್ ಅವರಿಗೆ ನಮಿಸಿದ್ದಾರೆ. 

 

ಸುದೀರ್ ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದ ಜನಪ್ರಿಯ ಖ್ಯಾತ ಖಳನಟ. ಇವರ ಇಬ್ಬರೂ ಪುತ್ರರು ಇಂದು ಕನ್ನಡದ ಖ್ಯಾತ ನಿರ್ದೇಶಕರಾಗಿದ್ದಾರೆ. ತರುಣ್ ಸುದೀರ್ ಅವರು ಚೌಕ ಸಿನಿಮಾ ಬಳಿಕ, ರಾಬರ್ಟ್ ಸಿನಿಮಾ ಶುರು ಮಾಡಿದ್ದಾರೆ.

 

మరింత సమాచారం తెలుసుకోండి: