ಐಎಂಎ ಸಂಸ್ಥೆಯ ಅಧ್ಯಕ್ಷ ಮನ್ಸೂರ್ ಖಾನ್ ಹೆಸರಿನಲ್ಲಿ ಇದೀಗ ಮತ್ತೊಂದು ಆಡಿಯೋ ವೈರಲ್ ಆಗಿದೆ. ಹೌದು, ಈ ಆಡಿಯೋದಲ್ಲಿ ರೋಷನ್ ಬೇಗ್, ಬಿಬಿಎಂಪಿ ಸದಸ್ಯ ಶಕೀಲ್ ಅಹ್ಮದ್ ಮೇಲೆ ಹಾಗೂ ರಾಹೀಲ್ ಎನ್ನುವವರ ವಿರುದ್ಧ ಆರೋಪಗಳನ್ನು ಮಾಡಲಾಗಿದೆ.
ಅಷ್ಟಕ್ಕೂ ಈ ಆಡಿಯೋದಲ್ಲಿ ಏನಿದೆ?
'ನಾನು ಸಾಯಲು ಮುಂದಾಗಿದ್ದೇನೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ಬೆಂಗಳೂರಿನಲ್ಲಿ ಜೀವಂತವಾಗಿ ಇದ್ದೇನೆ. ನಾನೂ ಮತ್ತು ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ಜನರು ಹೂಡಿಕೆ ಮಾಡಿದ ಹಣವನ್ನು ಆಭರಣ, ವಜ್ರ ಹಾಗೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ಹೂಡಿಕೆ ಮಾಡಿದ್ದೇನೆ. ನಾನು ಜನರಿಂದ ಪಡೆದ ಹಣವನ್ನು ವಾಪಾಸ್ ಮಾಡುತ್ತೇನೆ'
- ಇದು ಐಎಂಎ ಅಧ್ಯಕ್ಷನ ಹೆಸರಿನಲ್ಲಿ ಸದ್ಯಕ್ಕೆ ಮತ್ತೊಂದು ಬಾರಿ ವೈರಲ್ ಆಗಿರುವ ಆಡಿಯೋ.
ಆದರೆ ಸತ್ಯಾಸತ್ಯತೆ ಏನು ಅನ್ನೋದನ್ನು ಸರಿಯಾದ ತನಿಖೆಯ ನಂತರವೇ ತಿಳಿಯಬಹುದು.
click and follow Indiaherald WhatsApp channel