ಡಾ. ರಾಜಕುಮಾರ್ ಕುಟುಂಬದ ಹಲವರು ಈಗಾಗಲೇ ಹೀರೋ ಆಗಿ ತೆರೆ ಮೇಲೆ ಮಿಂಚುತ್ತಾ ಇದ್ದಾರೆ. ರಾಜ್ ಕುಟುಂಬದ ಮೂರನೇ ತಲೆ ಮಾರು ಕೂಡ ಚಿತ್ರರಂಗಕ್ಕೆ ಎಂಟ್ರಿಯಾಗಿದೆ. ಇದೀಗ ಮತ್ತೊಬ್ಬ ರಾಜ್ ಕುಟುಂಬದಿಂದ ತೆರೆ ಮೇಲೆ ಬರುತ್ತಿದ್ದಾರೆ.
ಹೌದು, ರಾಜ್ ಕುಮಾರ್ ಅವರ ಪತ್ನಿ, ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಎಸ್.ಎ.ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ ಅವರು ಇದೀಗ ಸಿನಿಮಾದಲ್ಲಿ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಚಿತ್ರರಂಗದ ಹಿನ್ಬೆಲೆ ಇರುವ ಸೂರಜ್ ರಾಜ್ ಕುಮಾರ್ ಇಲ್ಲಿಯತನಕ ಸಿನಿಮಾ ನೋಡಿಕೊಂಡು ಅಭಿನಯದ ಅಭ್ಯಾಸ ಮಾಡಿಕೊಂಡು ಬೆಳೆದವರು. ಕೆಲ ಕಾಲ ತೆರೆ ಮರೆಯಲ್ಲಿ ಒಂದಿಷ್ಟು ಸಮಯ ತಯಾರಿಯನ್ನು ಮಾಡಿಕೊಂಡಿದ್ದಾರೆ.
ಈ ಚಿತ್ರವನ್ನು ರಘೂ ಕೋವಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅಲ್ಲದೇ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಕರೆ ತರಲು ಸಿದ್ಧತೆ ನಡೆಸಿದ್ದಾರೆ.
click and follow Indiaherald WhatsApp channel