ಭಾರತದ ಲಡಾಕ್ ನಲ್ಲಿ ಗಡಿ ವಿವಾಧಕ್ಕೆ ಸಂಬಂದ ಪಟ್ಟಂತೆ ಚೀನಾ ನಡೆಸಿದ ದಾಳಿಯಿಂದಾಗಿ ಭಾರತದ 20 ಜನ ಯೋಧರು ಹುತಾತ್ಮರಾಗಿದ್ದಾರೆ, ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಚೀನಾದ ಆರ್ಥಿಕತೆಗೆ  ಪೆಟ್ಟನ್ನು ನೀಡಲು ಕೇಂದ್ರ ಸರ್ಕಾರ ಚೀನೀ ಆಪ್ ಗಳ ಮೇಲೆ  ಭಾರತದಲ್ಲಿ ನಿಷೇಧವನ್ನು ಹೇರಿತ್ತು. ಆದರೆ ನಮಗೆಲ್ಲಾ ತಿಳಿದಿರುವುದು ಕೇವಲ ಲಡಾಕ್ ನ ಗಡಿ ವಿವಾಧಕ್ಕೆ ಮಾತ್ರ ಚೀನೀ ಆಫ್ ಗಳಿಗೆ ನಿಷೇಧವನ್ನು ಹೇರಲಾಗಿದೆ ಎಂದು ಆದರೆ ಕೇಂದ್ರ ಸರ್ಕಾರದ ಉದ್ದೇಶ ಬೇರೆಯದೇ ಆಗಿದೆ.. ಅಷ್ಟಕ್ಕೂ ಆ ಉದ್ದೇಶ ಏನು ಗೊತ್ತಾ..?

 

ಲಡಾಖ್​ ಉದ್ವಿಗ್ನತೆ ಹಿನ್ನೆಲೆಯಲ್ಲಿ ಭಾರತ ಚೀನಾ ಮೂಲದ 59 ಆಯಪ್​ಗಳನ್ನು ನಿರ್ಬಂಧಿಸಿದೆ. ಚೀನಾ ವಿರುದ್ಧ ಸರ್ಕಾರ ಕೈಗೊಂಡಿರುವ ಒಂದು ಸಣ್ಣ ಕ್ರಮದಂತೆಯೂ, ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಉದ್ದೇಶ ಇರುವಂತೆ ತೋರಬಹುದು. ಆದರೆ, ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ವಾಸ್ತವದಲ್ಲಿ ಇದರ ಹಿಂದೆ ಭಾರಿ ಉದ್ದೇಶವೇ ಅಡಗಿದೆ. ರಾಜಕೀಯ ಮತ್ತು ಮಿಲಿಟರಿ ಬಳಕೆಗಾಗಿ ಮಾಹಿತಿಯನ್ನು ಕಳವು ಮಾಡದಂತೆ ತಡೆಯುವುದು ಇದರ ಉದ್ದೇಶವಾಗಿದೆ.

 

ಚೀನಾ ಕಮ್ಯುನಿಸ್ಟ್​ ಪಾರ್ಟಿ ಇದೀಗ ಮಿಲಿಟರಿ-ಸಿವಿಲಿಯನ್​ ಫ್ಯೂಷನ್​ ಎಂಬ ಹೊಸ ತಂತ್ರ ರೂಪಿಸಿಕೊಂಡಿದೆ. ಇದರ ಪ್ರಕಾರ ಭಾರತದ ಬಹುಮುಖೀಯ ನಾಗರಿಕ ಮೂಲಸೌಕರ್ಯಗಳನ್ನು ಹೊಕ್ಕು ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತಕ್ಕೆ ಹಿನ್ನೆಡೆ ಉಂಟು ಮಾಡುವ ದುರುದ್ದೇಶವನ್ನು ಹೊಂದಿದೆ. ಅದರ ಈ ತಂತ್ರಗಾರಿಕೆಯನ್ನು ವಿಫಲಗೊಳಿಸಲು ಆಯಪ್​ಗಳನ್ನು ನಿರ್ಬಂಧಿಸುವ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು.

 

ಚೀನಾದ ತಂತ್ರಗಾರಿಕೆಯ ಪ್ರಕಾರ ಟಿಕ್​ಟಾಕ್​ ಮತ್ತು ಯುಸಿ ಬ್ರೌಸರ್​ ಅನ್ನು ಬಳಸಿಕೊಂಡು ಭಾರಿ ಪ್ರಮಾಣದ ಮಾಹಿತಿಯನ್ನು ಕಲೆ ಹಾಕಿ, ಅದನ್ನು ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳಿಗೆ ಬಳಸುವುದು ಚೀನಾದ ಹುನ್ನಾರವಾಗಿತ್ತು. ಉದಾಹರಣೆಗೆ ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯನ್ನು ಟಿಕ್​ಟಾಕ್​ನ ಬಾಟ್​ಗಳು ಕದ್ದಿದ್ದವು. ಇದು ಭಾರತದ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿತ್ತು.

 

ಏನಿದು ಮಿಲಿಟರಿ-ಸಿವಿಲಿಯನ್​ ಫ್ಯೂಷನ್​: ಮಾವೋ ಅವಧಿಯಿಂದಲೂ ಚೀನಾ ಮಿಲಿಟರಿ-ಸಿವಿಲಿಯನ್​ ಫ್ಯೂಷನ್​ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಆದರೆ, ಕ್ಸಿ ಜಿನ್​ಪಿಂಗ್​ ಅಧ್ಯಕ್ಷರಾದ ಬಳಿಕ ಈ ಕಾರ್ಯಕ್ರಮ ಮೊತ್ತೊಂದು ಹಂತಕ್ಕೆ ಹೋಗಿದೆ. ಇದರ ಪ್ರಕಾರ ನಾಗರಿಕ ತಂತ್ರಜ್ಞಾನಗಳು, ಶಿಕ್ಷಣ, ಮನರಂಜನೆ ಮತ್ತು ಸಂಶೋಧನಾ ಕ್ಷೇತ್ರಗಳೆಲ್ಲವನ್ನೂ ಭದ್ರತೆ ಮತ್ತು ಮಿಲಿಟರಿ ವಲಯಕ್ಕೆ ತಂದು ಅನ್ವೇಷಣೆಯಲ್ಲಿ ತೊಡಗುವುದು, ಪೀಪಲ್ಸ್​ ಲಿಬರೇಷನ್​ ಆರ್ಮಿಗಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಚೀನಾದ ರಾಷ್ಟ್ರೀಯ ಭದ್ರತೆಯ ಕಾರ್ಯಸೂಚಿಯನ್ನು ಮುಂದುವರಿಸುವುದು ಆಗಿದೆ.

 

మరింత సమాచారం తెలుసుకోండి: