ನವದೆಹಲಿ: ಕೊರೋನಾ ವೈರಸ್ ಹೆಚ್ಚಾದ ಹಿನ್ನಲೆಯಲ್ಲಿ ಇಡೀ ದೇಶಕ್ಕೆ ಮಾಡಲಾಗಿದ್ದ ಲಾಕ್ ಡೌನ್ ನಿಂದ ಯಾವುದೇ ಪ್ರಯೋಜನ ಕಾಣದ ಸರ್ಕಾರ ಮತ್ತೆ 15  ದಿನಗಳ ಕಾಲ ಲಾಕ್ ಡೌನ್  ಘೋಷಣೆಯನ್ನು ಮಾಡಲಿದ್ಯಂತೆ. ಅಷ್ಟಕ್ಕೂ ಎಲ್ಲಿಯ ವರೆಗೆ ಮುಂದುವರೆಯಬಹುದು ಈ ಲಾಕ್ ಡೌನ್. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

 

ಇಡೀ ವಿಶ್ವವೇ ಕೊರೋನಾ ವಿರುದ್ಧ ಮಂಡಿ ಊರುವಂತಹ ಪರಿಸ್ಥಿತಿ ಬಂದಿದ್ದರೂ ಕೂಡ ವಿಶ್ವದ ಅನೇಕ ರಾಷ್ಟ್ರಗಳ ಕೊರೋನಾ ವೈರಸ್ ವಿರುದ್ಧ ಹೋರಾಟವನ್ನು ಮಾಡುತ್ತಲೇ ಇದೆ. ಹೀಗಿದ್ದರೂ ಕೂಡ ವಿಶ್ವದಲ್ಲಿ ಈ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆಯನ್ನು ನೋಡಿದರೆ ಸುಮಾರು ಲಕ್ಷದ ಗಡಿಯನ್ನು ದಾಟಿದೆ.. ಹಾಗಾಗಿ ಎಲ್ಲಾ ರಾಷ್ಟ್ರಗಳು ಇದರ ವಿರುದ್ಧ ಟೊಂಕ ಕಟ್ಟಿ ಹೋರಾಟಕ್ಕೆ ಸಿದ್ದವಾಗಿದೆ.  ಅದೇ ರೀತಿ ಭಾರತದಲ್ಲೂ ಕೂಡ ಕೊರೋನಾ ವೈರಸ್ ಹರಡುವುದನ್ನು ತಪ್ಪಿಸಲು ಏಪ್ರಿಲ್ 21 ರವರೆಗೆ ಲಾಕ್ ಡೌನ್ ಘೋಷಣೆಯನ್ನು ಮಾಡಿತ್ತು ಆದರೆ ಕೊರೋನಾ ಹರಡುವ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗದ್ದನ್ನು ಕಂಡ ಸರ್ಕಾರ ಲಾಕ್ ಡೌನ್ ವೇಳೆಯನ್ನು ಮುಂದುವರಿಸುವ ಯೋಜನೆಯನ್ನು ಹಾಕಿಕೊಂಡಿದೆ.

 

ಸರ್ಕಾರದ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಕೊರೋನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನ್ನು ಏ.30 ವರೆಗೆ ವಿಸ್ತರಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮಾ.25 - ಏ.14 ವರೆಗೆ 3ವಾರಗಳ ಲಾಕ್ ಡೌನ್ ನ್ನು ಘೋಷಿಸಿದ್ದರು. ಈ ಲಾಕ್ ಡೌನ್ ನ್ನು ಇನ್ನೂ2  ವಾರಗಳ ಕಾಲ, ಅಂದರೆ ಏ.30 ವರೆಗೆ ವಿಸ್ತರಣೆ ಮಾಡಲಾಗುತ್ತದೆ.

 

ಏ.30 ರ ನಂತರ, ಮೇ.1  ರಿಂದ ಲಾಕ್ ಡೌನ್ ಮುಕ್ತಾಯಗೊಂಡರೂ ಸಹ ಸಾರ್ವಜನಿಕ ಜೀವನ ಹಿಂದಿನ ಸ್ಥಿತಿಗೆ ಮರಳುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.

 

ಸರ್ಕಾರ ಯೋಜನೆ ಮಾಡಿರುವ ಪ್ರಕಾರ ಮೊದಲು ಮೇ.೦೫ ರಂದು ಧಾರ್ಮಿಕ ಪ್ರದೇಶಗಳು ಪುನಾರಂಭಗೊಳ್ಳಲಿದೆ, ಮೇ. ೦7 ರಂದು ಹಣ್ಣು ಮತ್ತು ತರಕಾರಿ ಮಾರ್ಕೆಟ್ ಗಳು ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಣೆ ಮಾಡಲಿವೆ.

 

ಮೇ.15 ರಿಂದ ರೈಲು, ದೇಶಿ ವಿಮಾನಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಮೇ ತಿಂಗಳ ಮೂರನೇ ವಾರದಲ್ಲಿ ಸಿನಿಮಾ ಹಾಲ್, ಮಾಲ್ ಗಳು ತೆರೆಯಲಿವೆ. ಮೇ ಅಂತ್ಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ.

 

ಇನ್ನು ಅಂತಾರಾಷ್ಟ್ರೀಯ ವಿಮಾನಗಳನ್ನು ಜುಲೈ.30  ರಿಂದ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಇವೆಲ್ಲವನ್ನೂ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಲಾಕ್ ಡೌನ್ ಗೆ ಸಂಬಂಧಿಸಿದಂತೆ ಏ.12 ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

 

 

 

మరింత సమాచారం తెలుసుకోండి: