ಉಪ್ಪಿ ಅಭಿನಯದ ಐ ಲವ್ ಯೂ  ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಜಾದು ಮಾಡುತ್ತಿದೆ. ಕಳೆದ ಮೂರ್ನಾಲ್ಕು ವಾರಗಳಿಂದ ಐ ಲವ್ ​​ಯು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಿನಿಮಾ ನಂಬಿ ದುಡ್ಡು ಹಾಕಿದವರಿಗೆ ಹಾಕು ಸಿನಿಮಾಗಾಗಿ ಕೆಲಸ ಮಾಡಿದವರ ಮುಖದ ಮೇಲೆ ನಗು ಮೂಡಿದೆ ಅಂತೆ. 


ಉಪೇಂದ್ರ ಅವರ ಹವಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ,, ಪಕ್ಕದ ತೆಲಂಗಾಣ ಹಾಗೂ ಆಂದ್ರದಲ್ಲೂ ಹವಾ ಇದೆ. ಇದೇ ಕಾರಣಕ್ಕೆ ಐ ಲವ್ ಯೂ ಚಿತ್ರವನ್ನು ತೆಲುಗು ಭಾಷೆಯಲ್ಲಿಯೂ ರಿಲೀಸ್ ಮಾಡಲಾಗಿತ್ತು. ಜೂನ್ 14ರಂದು ಕರ್ನಾಟಕದಲ್ಲಿ 325 ಚಿತ್ರಮಂದಿಗಳಲ್ಲಿ ತೆರೆಕಂಡಿತ್ತು. ರಿಲೀಸ್ ಆದ ಎಲ್ಲ ಚಿತ್ರಮಂದಿಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. 


ಇನ್ನು ಪಕ್ಕದ ಆಂಧ್ರ ಹಾಗೂ ತೆಲಂಗಾಣದಲ್ಲಿಯೂ 225 ಚಿತ್ರ ಮಂದಿರಗಳಲ್ಲಿ ಐ ಲವ್ ಯೂ ಚಿತ್ರ ತೆರೆ ಕಂಡಿತ್ತು. ಅಲ್ಲಿಯೂ ಕೂಡ ಇದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಐ ಲವ್ ಯೂ ಚಿತ್ರದಿಂದ ಕನ್ನಡ ಚಿತ್ರಕ್ಕೆ ಪಕ್ಕದ ರಾಜ್ಯದಲ್ಲಿ ಒಳ್ಳೆ ರಿಸ್ಪಾನ್ಸ್ ಸಿಕ್ಕಿದೆ ಅನ್ನೋದು ಸಂತಸದ ವಿಚಾರ. 


మరింత సమాచారం తెలుసుకోండి: