ಗಾಂಧಿನಗರದಲ್ಲಿ ಹರಿದಾಡಿದ ಸುದ್ದಿ ನಿಜಕ್ಕೂ ಸತ್ಯವೇ? ಅಥವಾ ಇದು ಉಹಾಪೋಹವೇ ಎಂದು ಪರಿಶೀಲಿಸಿದರೆ, ಸುಧಾರಾಣಿ ಇದನ್ನು ಅಲ್ಲಗಳೆದಿದ್ದಾರೆ. ತಮ್ಮ ಮಗಳು ಇದೀಗ 12 ನೇ ತರಗತಿ ಮುಗಿಸಿದ್ದು, ತನ್ನ ಮುಂದಿನ ಶಿಕ್ಷಣಕ್ಕೆ ಆಕೆ ಸಜ್ಜಾಗುತ್ತಿದ್ದಾಳೆ. ಸಿಬಿಎಸ್‌ಸಿ ನಲ್ಲಿ ಒಳ್ಳೆಯ ಅಂಕಗಳನ್ನು ತೆಗೆದಿದ್ದಾಳೆ. ಹೀಗಾಗಿ ಆಕೆಗೆ ಇದೀಗ ಸಿನಿಮಾ ಕುರಿತು ಯಾವದೇ ಆಸಕ್ತಿ ಇಲ್ಲ ಎಂದಿದ್ದಾರೆ.
ಸದ್ಯಕ್ಕೆ ಶ್ರೀನಿಧಿ ರಾವ್ ಅದ್ಯಾವ ಕೋರ್ಸ್ ತೆಗೆದುಕೊಂಡರೆ ಒಳ್ಳೆಯದು ಮತ್ತು ಯಾವ ಕಾಲೇಜು ಸೇರಿಕೊಳ್ಳಬೇಕು ಎನ್ನುವುದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದಾಳೆ ಹೊರತು ಸಿನಿಮಾ ಕುರಿತು ಅಲ್ಲ. ಹೀಗಾಗಿ ನನ್ನ ಮಗಳು ಸಿನಿಮಾ ಮಾಡುತ್ತಿದ್ದಾಳೆ ಅನ್ನೋ ಸುದ್ದಿ ನೋಡಿ ನನಗೂ ನಂಬೋಕೆ ಆಗಲಿಲ್ಲ. ಕೆಲವರು ಸುಖಾಸುಮ್ಮನೇ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಕೇವಲ ಶ್ರೀನಿದಿ ರಾವ್ ಗೆ ಅಷ್ಟೇ ಅಲ್ಲ, ಅವರ ಕುಟುಂಬಕ್ಕೂ ಆಕೆಯನ್ನು ಸಿನಿಮಾ ರಂಗಕ್ಕೆ ತರೋಕೆ ಮನಸಿಲ್ಲ. ಹೀಗಾಗಿ ಶ್ರೀನಿಧಿ ರಾವ್ ಸಿನಿಮಾ ರಂಗಕ್ಕೆ ಬರೋದು ಡೌಟು. ಆದರೆ ಕೆಲವರು ಇಲ್ಲ ಸಲ್ಲದನ್ನು ರೂಮರ್ಸ್ ಹಬ್ಬಿಸಿ ಈ ರೀತಿ ಗಾಳಿ ಸುದ್ದಿಯನ್ನು ಹರಿ ಬಿಟ್ಟಿದ್ದಾರೆ ಅನ್ನೋದು ಇದೀಗ ಬಹಿರಂಗವಾಗಿ
click and follow Indiaherald WhatsApp channel