ಹೊಸಬರೇ ಸೇರಿ ಮಾಡಿರೋ ಚಿತ್ರವೇ ಹಫ್ತಾ. ಈ ಚಿತ್ರ ಇನ್ಬೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ. ಇದಕ್ಕೂ ಮುನ್ನ ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸಿದೆ. ಹೀಗಾಗಿ ಸಿನಿ ಪ್ರೇಕ್ಷಕರಲ್ಲಿ ಒಂದಿಷ್ಟು ನಿರೀಕ್ಷೆಯನ್ನು ಈ ಚಿತ್ರ ಹುಟ್ಟಿ ಹಾಕಿದೆ.
ಹಫ್ತಾ ಚಿತ್ರ ನೂರೈವತ್ತೂ ಹೆಚ್ಚು ಥೀಯಟರ್ ಗಳಲ್ಲಿ ತೆರೆ ಕಾಣುತ್ತಿದೆ. ಚಿತ್ರದ ಟ್ರೇಲರ್ ನೋಡಿ ಅನೇಕರು ಶುಭ ಹಾರೈಸಿದ್ದಾರೆ. ರಕ್ಷಿತ ಶೆಟ್ಟಿ, ಸತೀಶ್ ನೀನಾಸಂ ಹಾಗೂ ಪ್ರಜ್ವಲ್ ಸೇರಿದಂತೆ ಅನೇಕರು ಈ ಚಿತ್ರದ ಕೆಲಸ ಮೆಚ್ಚಿಕೊಂಡಿದ್ದಾರೆ ಎಂದು ಚಿತ್ರ ನಿರ್ದೇಶಕ ಪ್ರಕಾಶ್ ಅಭಿಪ್ರಾಯ.
ಹಫ್ತಾ ಅಂದರೆ ಇದೊಂದು ಭೂಗತವಲೋಕದ ಚಿತ್ರ ಅಂತ ಸಹಜವಾಗಿ ಗೊತ್ತಾಗುತ್ತೆ. ಹೌದು, ಇದೊಂದು ಭೂಗತವಲೋಕದ ಚಿತ್ರವೇ. ಆದರೆ ಹೊವು ವಿಶೇಷತೆಗಳನ್ನು ಚಿತ್ರದಲ್ಲಿ ಹೇಳಲಾಗಿದೆ.
click and follow Indiaherald WhatsApp channel