ಚಿತ್ರರಂಗದಲ್ಲಿಯೇ  ಸಂಚಲನ ಸೃಷ್ಟಿಸಿ, ತನ್ನದೇ ಸ್ಟೈಲ್ ಮೂಲಕ ಹೆಸರಾದ ನಟ ರಜನಿಕಾಂತ್. ಇವರ  ಸಿನಿಮಾ ಹೇಗೆ ಇರಲಿ ಬಿಡುಗಡೆಗೂ ಮುನ್ನವೇ ಬಾರಿ ಹವಾ ಸೃಷ್ಟಿಯಾಗುತ್ತದೆ. ಈ ಕಾರಣಕ್ಕಾಗಿಯೇ 2016ರಲ್ಲಿ ಬಿಡುಗಡೆಗೊಂಡಿದ್ದ ಕಬಾಲಿ ಸಿನಿಮಾ ಪ್ರೇಕ್ಷಕರ ಮನ ಗೆಲ್ಲದಿದ್ದರೂ ಕೋಟಿಗಟ್ಟಲೆ ಹಣ ಬಾಚಿತ್ತು.  ಚಿತ್ರಕಥೆ ಗಿಂತಲೂ ಅವರ ನಟನೆ ಶೈಲಿಗೆ ಮಾರು ಹೋಗುವ ಪ್ರೇಕ್ಷಕರೆ ಹೆಚ್ಚು. 


ಪ್ರಸ್ತುತ ದರ್ಬಾರ್ ಚಿತ್ರದ ಫಸ್ಟ್ ಲುಕ್ ಕೂಡ ಬಣ್ಣದ ಲೋಕದಲ್ಲಿ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿದೆ. ಈ ಚಿತ್ರ 2020ರಲ್ಲಿ ತೆರೆಗೆ ಅಪ್ಪಳಿಸುವ ನಿರೀಕ್ಷೆಯಿದೆ ಎ ಆರ್ ಮುರುಗದಾಸ್ ನಿರ್ದೇಶನದಡಿ ಸಿದ್ಧಗೊಳ್ಳುತ್ತಿರುವ ಈ ಚಿತ್ರದಲ್ಲಿ ನಯನತಾರ ಸುನಿಲ್ ಶೆಟ್ಟಿ ಯೋಗಿ ಬಾಬು ಮುಖ್ಯಭೂಮಿಕೆಯಲ್ಲಿದ್ದಾರೆ. ಸಚಿನ್ ತುಪಾಕಿ ಕತ್ತೆ ಮತ್ತು ಸರ್ಕಾರ ಮೊದಲ ಯಶಸ್ವಿ ಚಿತ್ರಗಳನ್ನು ನೀಡಿರುವ ಹಿರಿಮೆ ಮುರುಗದಾಸ್ ಅವರದು ಅದಕ್ಕಾಗಿಯೇ ಮುರುಗದಾಸ್ ಮತ್ತು ರಜಿನಿ ಕಾಂಬಿನೇಷನಡಿ ಮೂಡಿಬರಲಿರುವ ಈ ಸಿನಿಮಾ ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ ಎರಡೂವರೆ ದಶಕಗಳ ನಂತರ ರಜನಿಕಾಂತ್ ಮತ್ತೆ ಪೊಲೀಸ್ ವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ.


ಇದರಲ್ಲಿನ ಅವರ ಅದ್ಭುತ ನಟನೆ ರಜನಿಗೆ ಬಾಲಿವುಡ್ನಲ್ಲಿ ಅವಕಾಶದ ಬಾಗಿಲು ತೆರೆದಿತ್ತು. 1986 ರಲ್ಲಿ ತೆರೆಕಂಡಿದ್ದ ಹಿಂದಿಯ ದೋಸ್ತಿ ದುಷ್ಮನಿ ಚಿತ್ರದಲ್ಲಿ ರಜನಿ ಮತ್ತೆ ಖಾಕಿ ಖದರ್ ಪ್ರದರ್ಶಿಸಿದರು ಜಿತೇಂದ್ರ ಮತ್ತು ರಿಶಿಕಪೂರ್ ಇದರಲ್ಲಿ ನಟಿಸಿದ್ದರು. 1991 ರಲ್ಲಿ ಕೆಸಿ ಬೋಕಡಿಯ ನಿರ್ದೇಶನದ ಹಿಂದಿಯ ಫುಲ್ ಬನೆ ಅಂಗಾರೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಿದರು.

ಇದರಲ್ಲಿ ರಜನಿಗೆ ಜೋಡಿಯಾಗಿದ್ದ ರೇಖಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು ಆ ಮೂಲಕ ಬಿ ಟೌನ್ ನಲ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು ಅದೇವರ್ಷ ಅನಿಲ್ ಶರ್ಮಾ ನಿರ್ದೇಶನದಡಿ ತೆರೆಕಂಡಿದ್ದ ಪರಿಸ್ಥಿ ಚಿತ್ರದಲ್ಲಿಪೊಲೀಸ್ ಅಧಿಕಾರಿಯಾಗಿ ಮಿಂಚು ಹರಿಸಿದ್ದರು.ಪ್ರಸ್ತುತ ದರ್ಬಾರ್ ಚಿತ್ರಕ್ಕಾಗಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಅದು ಹೇಗೆ ಮೋಡಿ ಮಾಡಲಿದೆ ಎಂಬುದು ಕಾದುನೋಡಬೇಕಾಗಿದೆ. 


మరింత సమాచారం తెలుసుకోండి: