ಬೆಂಗಳೂರು: ರಾಜ್ಯ ಸಿನಿ ಮತ್ತು ಸೀರಿಯಲ್ ಸೈಟ್ ಗಳಲ್ಲಿ ಎಲ್ಲೆಲ್ಲೂ ಬೆಳಕಿನ ಹಬ್ಬ.  ಅಂದರೆ ದೀಪಾವಳಿ ನಾ ಅಂತ ಕೇಳಬೇಡಿ.ಬೆಳಕಿನ ಹಬ್ಬ ನಮ್ಮ ನಾಡಿನ ಮಾರಿ ಮರಿಯಳು ಬೆಳಕಿನ ಹಾಗೆ ಕಂಗೊಳಿಸುತ್ತಿದ್ದಾರೆ. ಇದೀಗ ಕಿರುತೆರೆಯಲ್ಲಿ ಅಗ್ನಿಯಂತೆ ಮಿಂಚುತ್ತಿದ್ದ ಇವರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ. 


 ‘ಕವಲು ದಾರಿ’ ಖ್ಯಾತಿಯ ನಟ ರಿಷಿ ಇಂದು ತಮ್ಮ ಗೆಳತಿಯನ್ನು ಮದುವೆಯಾಗಿದ್ದಾರೆ. ಇದೀಗ ಈ ಸಾಲಿಗೆ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿಯೊಬ್ಬರು ತಮ್ಮ ಗೆಳೆಯನನ್ನು ವರಿಸುವ ಮೂಲಕ ಸಪ್ತಪದಿ ತುಳಿದಿದ್ದಾರೆ. ಅದರ ಸಂಭ್ರಮ ಸಂತೋಷ ಗಳಿಗೆ ಅಲ್ಲಿ ಪಾರವೇ ಇರಲಿಲ್ಲ. ನಿಜಕ್ಕೂ ಆ ಮದುವೆ ಸ್ವರ್ಗದಲ್ಲೇ  ನಡೆದಂತಿತ್ತು. ನೀವೂ ಕೂಡ ಒಮ್ಮೆ ಆ ಸ್ವರ್ಗವನ್ನು ನೋಡಿ ಬಿಡಿ. ಹೌದು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಇಶಿತಾವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಶಿತಾವರ್ಷ ಎನ್ನುವುದಕ್ಕಿಂತ ಮಾಯಾ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಯಾಕೆಂದರೆ ಈಕೆ ಧಾರಾವಾಹಿಯಲ್ಲಿ ಮಾಯಾ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಮಾಯಾ ತಮ್ಮ ಬಹುಕಾಲದ ಗೆಳೆಯ ಮುರುಗಾನಂದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 


ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವ ಜೋಡಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಇಶಿತಾ ತಮ್ಮ ಮದುವೆಯ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.


ಮುರುಗಾನಂದ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಶಿತಾ ಕೂಡ ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಮುರುಗಾನಂದ್ ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ. ಇನ್ ಸ್ಟಾಂನಲ್ಲಿ ಪೋಟೋಸ್ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳಿಂದ ಲೈಕ್ ಕಾಮೆಂಟ್ಸ್ ಗಳ ಸುರಿಮಳೆಯೇ ಸುರಿಯಿತು. ನಿಜಕ್ಕೂ ಮಾಯಾ ಗೆ ಮಾಯಾ ರೀತಿಯಲ್ಲಿ ಶುಭಾಶಯಗಳು ಹರಿದು ಬಂದಿವೆಯಂತೆ. ಇದರಿಂದ ತಮ್ಮ ಮದುವೆಗೆ ಮತ್ತಷ್ಟು ಕಳೆ ಬಂದಿದೆ. ನಿಮ್ಮ ಶುಭಾ ಹಾರೈಕೆಗಳಿಗೆ ಅನಂತ ಧನ್ಯವಾದಗಳು ಎಂದು ಮೆಸೇಜ್ ಕೊಟ್ಟಿದ್ದಾರೆ.


మరింత సమాచారం తెలుసుకోండి: