ಕರ್ನಾಟಕ ಈಗಾಗಲೇ ಬರದಿಂದ ನಲಗುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ  ಗಾಯದ ಮೇಲೇ ಬರಿಯ ಎಳೆದಂತೆ ಆಗಲಿದೆ. ಹೌದು, ಕೇಂದ್ರದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬರುವವರೆಗೂ ರಾಜ್ಯಕ್ಕೆ ಯಾವುದೇ ರೀತಿಯ ಪರಿಹಾರದ ಪ್ಯಾಕೇಜ್‌ ಸಿಗುವುದು ಅನುಮಾನ ಎನ್ನಲಾಗಿದೆ. 


ನಿಮಗೆ ಗೊತ್ತಿದೆಯಾ? ಈ ಹಿಂದೆ ಹಿಂಗಾರು ಋತುವಿನ ವೇಳೆ ಬರದಿಂದ ಆಗಿರುವ ನಷ್ಟದ ಬಗ್ಗೆ ಕೇಂದ್ರ ಅಧ್ಯಯನ ನಡೆಸಿತ್ತು. ಅಲ್ಲದೆ, ಕೃಷಿ ಇಲಾಖೆಗೆ ವರದಿಯನ್ನೂ ನೀಡಿದ್ದು, ಈ ವರದಿಯನ್ನು ಎಚ್ಎಲ್ಸಿಗೆ ವರ್ಗಾವಣೆ ಆಗಿತ್ತು. ಗೃಹ ಇಲಾಖೆಯ ಅಡಿಯಲ್ಲಿ ಬರುವ ಉನ್ನತ ಅಧಿಕಾರಿಗಳ ಸಮಿತಿ (ಎಚ್ಎಲ್ಸಿ) ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆದರೆ, ಇದುವರೆಗೆ ಈ ಸಮಿತಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನೇನಿದ್ದರೂ ಹೊಸ ಸರ್ಕಾರ ಬಂದ ಮೇಲೆಯೇ ತೀರ್ಮಾನಿಸಲಾಗುತ್ತದೆ ಎನ್ನಲಾಗುತ್ತಿದೆ. 


ಆದರೆ ನಿಮಗೆ ಗೊತ್ತಿರಲಿ, ಈ ಸಮಿತಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈಗಿನ ಯಾವುದೇ ನೀತಿ ಸಂಹಿತೆ ಅಡ್ಡಿ ಉಂಟು ಮಾಡುವುದಿಲ್ಲ. ಆದರೂ, ಹೊಸ ಸರ್ಕಾರ ಬಂದ ಮೇಲೆಯೇ ನಿರ್ಧಾರ ತೆಗೆದುಕೊಳ್ಳಲು ಸಮಿತಿ ಮುಂದಾಗಿದೆ. ಇದರಿಂದ ರಾಜ್ಯದ ಜನರಿಗೆ ಗಯಾಯದ ಮೇಲೆ ಬರೆ ಎಳೆದಂತೆ ಆಗಿದೆ ಅನ್ನೋದು ಸುಳ್ಳಲ್ಲ.


మరింత సమాచారం తెలుసుకోండి: