ಮೀಸಲಾತಿ ಹೋರಾಟ ಸ್ವಾತಂತ್ರ್ಯ ಬಂದು 6 ದಶಕಗಳ ಮೇಲಾದರೂ ನಿಲ್ಲುವಂತೆ ಕಾಣಿಸುತ್ತಿಲ್ಲ. ಇದೀಗ ವಾಲ್ಮೀಕಿ ಸಮುದಾಯದವರೂ ಮೀಸಲಾತಿ ಹೋರಾಟಕ್ಕೆ ಮುಂದಾಗಿದ್ದಾರೆ. ಹೌದು, ಸಮುದಾಯಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ.

ಗುರುಪೀಠದ ಶ್ರೀ ಪ್ರಸನ್ನಾನಂದಶ್ರೀ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಪಕ್ಷಾತೀತವಾಗಿ ಅದೇ ಸಮುದಾಯಯದ ಕೆಲವು ನಾಯಕರು ಕೈ ಜೋಡಿಸಿದ್ದಾರೆ. ಆದರೆ ಇದೀಗ ಪ್ರಸನ್ನಾನಂದಶ್ರೀ ಅವರು ಸ್ವಲ್ಪ ಖಾರವಾಗಿಯೇ ಸರ್ಕಾರಕ್ಕೆ ಛಾಟೀ ಬೀಸಿದ್ದಾರೆ. 


ಪ್ರಸನ್ನಾನಂದ ಸ್ವಾಮೀಜಿ ರಾಜ್ಯ ಮೈತ್ರಿ ಸರ್ಕಾರಕ್ಕೆ 2 ತಿಂಗಳ ಗಡುವು ನೀಡಿದ್ದಾರೆ. ಆದರೆ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸದಿದ್ದರೆ ಪಕ್ಷಾತೀತವಾಗಿ ವಾಲ್ಮೀಕಿ ಸಮುದಾಯದ 15ಮಂದಿ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಬೆದರಿಕೆ ಹಾಕಿದ್ದಾರೆ. 

ಅಷ್ಟೇ ಅಲ್ಲದೇ, ಒಂದು ವೇಳೆ ವಾಲ್ಮೀಕಿ ಸಮುದಾಯದ ರಾಜಜಕಾರಣಿಗಳು ರಾಜೀನಾಮೆ ನೀಡಿದ್ದೇ ಆದಲ್ಲಿ, ಆಗ ಕುಮಾರಸ್ವಾಮಿ ಅಲ್ಲ, ಅವರ ತಂದೆಯೂ ನಮ್ಮ ಮಾತನ್ನು ಕೇಳಬೇಕು ಎಂದು ಹೇಳಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರ ಇದೀಗ ಮೀಸಲಾತಿಯನ್ನು ಜಾರಿ ಮಾಡುತ್ತದೆಯೋ ಇಲ್ಲವೋ ಅನ್ನೋದನ್ನು ಕಾದು ನೋಡಬೇಕಿದೆ. 


మరింత సమాచారం తెలుసుకోండి: