ರಾಜಕುಮಾರ್ ಕುಟುಂಬದ ಒಬ್ಬೊಬ್ಬರೇ ಸಿನಿ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ಈಗಾಗಲೇ ರಾಘವೇಂದ್ರ ರಾಜ್​ ಕುಮಾರ್ ಅವಾರ ಮಗ ವಿನಯ್ ರಾಜ್​ಕುಮಾರ್ ಅವರು ಹೀರೋ ಕೆಲವು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ, ಇನ್ನು ಅವರ ತಮ್ಮ ಯುವರಾಜ್​ ಕುಮಾರ್ ಸಹ ನಾಯಕ ಆಗುವ ಸಿದ್ಧತೆಯಲ್ಲಿ ಇದ್ದಾರೆ. 


ಇದೀಗ ಹೊಸ ವಿಷ್ಯ ಏನಪ್ಪ ಅಂದರೆ, ಅಣ್ಣಾವ್ರ ಮಗಳು ಪುರ್ಣಿಮಾ ಹಾಗೂ ನಟ ರಾಮ್ ಕುಮಾರ್ ಅವರ ಪುತ್ರ ಧೀರೆನ್ ರಾಜ್​ಕುಮಾರ್, ದಾರಿ ತಪ್ಪಿದ ಮಗ ಚಿತ್ರದೊಂದಿಗೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಹೀಗೆ ರಾಜ್ ಕುಟುಂಬದ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ.


ಇದೇ ತರಹ ಶಿವರಾಜ್​ ಕುಮಾರ್ ಪುತ್ರಿ ನಿವೇದಿತಾ ಕೂಡ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಹೇಟ್ ಯೂ ರೋಮಿಯೋ ಎಂಬ ವೆಬ್​ ಸಿರೀಸ್ ಮೂಲಕ ನಿರ್ಮಾಪಕಿ ಆಗ್ತಾ ಇದಾರೆ. ಇದಿಷ್ಟೇ ಅಲ್ಲ, ರಾಜ್ ಕುಟುಂಬದ ಮತ್ತೊಂದು ಕುಡಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅವಾರೇ ಧನ್ಯಾ ಕುಮಾರ್. 


ಅಷ್ಟಕ್ಕೂ ಧನ್ಯಾ ಅವರು ಅಭಿನಯಿಸುತ್ತಿರುವ ಚಿತ್ರ ಮದುವೆಯ ಮಮತೆಯ ಕರೆಯೋಲೆ. ಈ ಚಿತ್ರದ ನಾಯಕ ಸೂರಜ್ ಗೌಡ. ಈ ಹೊಸ ಚಿತ್ರದಲ್ಲಿ ಧನ್ಯಾ ಕುಮಾರ್ ಅವರು ಬಣ್ಣ ಹಚ್ಚಲಿದ್ದಾಳೆ.
 


మరింత సమాచారం తెలుసుకోండి: