ಹೊಸದಿಲ್ಲಿ: ನವದೆಹಲಿ, ಅಖಂಡ ಭಾರತದ ರಾಜಧಾನಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯದ ಆಡಳಿತ ಕೇಂದ್ರವಾಗಿರುವ ದೆಹಲಿ ಇದೀಗ ಅಕ್ಷರ ಸಹ ಹೊಗೆಯಿಂದ ಕಾಣದಾಗಿದೆ. ಅತಿಯಾದ ವಾಹನ ಮತ್ತು ಕಾರ್ಖಾನೆಗಳ ವಾಯುಮಾಲಿನ್ಯದಿಂದ ಮತ್ತುವಾಯುಗುಣಮಟ್ಟ ಕುಸಿತ ವಾಗಿದೆ. ಏಕೆಂದರೆ  ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಯೊಂದು ದಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ದೆಹಲಿ ಮುಖ್ಯಮಂತ್ರಿ  ಕೇಜ್ರಿವಾಲ್ ಕೂಡ ಶಾಲಾ ಮಕ್ಕಳು ಮತ್ತು ನಿವಾಸಿಗಳಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಪರಿಸರ ಮಾಲಿನ್ಯ ಪ್ರಾಧಿಕಾರ ನವೆಂಬರ್ 5ರವರೆಗೆ ದೆಹಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡದಂತೆ ಆದೇಶಿಸಿದೆ. ಜತೆಗೆ ಚಳಿಗಾಲದಲ್ಲಿ ಪಟಾಕಿ ಸಿಡಿಸುವುದನ್ನು ಕೂಡ ಕಡ್ಡಾಯವಾಗಿ ನಿಷೇಧಿಸಿದೆ.

ದೆಹೆಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಗುಣಮಟ್ಟವು ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ.ವಾಯು ಮಾಲಿನ್ಯ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಪಿಸಿಎ ಅಧ್ಯಕ್ಷ ಭೂರಿ ಲಾಲ್‌ ಅವರು ತಿಳಿಸಿದ್ದಾರೆ.  ನೆರೆ ರಾಜ್ಯಗಳ ಕೃಷಿತ್ಯಾಜ್ಯ ಸುಡುವುದರಿಂದ ಈ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಇದಕ್ಕಾಗಿ 50 ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. 

ವಾಯು ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ ಪ್ರಕಾರ ಶುಕ್ರವಾರ ಬೆಳಗ್ಗೆ 11:30ರ ವೇಳೆಗೆ ವಾಯು ಗುಣಮಟ್ಟ ಸೂಚ್ಯಂಕ 480ಕ್ಕೆ ಕುಸಿದಿದೆ. ಅಂದ್ರೆ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಮಾಡಿರುವ ಅಪಾಯಕಾರಿ ಮಟ್ಟಕ್ಕಿಂತಲೂ ಹಲವು ಪಟ್ಟು ಹೆಚ್ಚಿದೆ. ದೆಹಲಿಯ ಹಲವಾರು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕುಸಿದೆ. ಪೂಸಾ ಬಳಿ 480, ಲೂದಿ ರಸ್ತೆ 436, ವಿಮಾನನಿಲ್ದಾಣದ ಟರ್ಮಿನಲ್‌ ಟಿ3 ಬಳಿ 460, ನೋಯ್ಡಾ 668, ಮಥುರಾ ರಸ್ತೆ 413, ಆಯಾನಗರ್‌ 477, ದೆಹಲಿ ಐಐಟಿ 483, ಧೀರ್‌ಪುರ 553ರಷ್ಟಿದೆ.




మరింత సమాచారం తెలుసుకోండి: