ಸುಮಾರು ಮೂರು ದಶಕಗಳಿಂದ ಶಿವಣ್ಣ ತಮ್ಮ ಬರ್ಥಡೇ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಿಸಿದ್ದಾರೆ. ಆದರೆ ಈ ಬಾರಿ ಶಿವಣ್ಣ ಅವರು ಅಭಿಮಾನಿಗಳ ಜೊತೆಗೆ ಬರ್ಥಡೇ ಆಚರಿಸೋದು ಡೌಟು. ಹಾಗಾದರೆ ಅವರು ಬರ್ಥಡೇ ಆಚರಿಸೋದು ಎಲ್ಲಿ? ಇಲ್ಲಿದೆ ನೋಡಿ ಮಾಹಿತಿ.
ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಅವರದ್ದು ಜುಲೈ 12 ರಂದು ಜನ್ಮದಿನ. ಈ ಬಾರಿ ಶಿವರಾಜ್ ಕುಮಾರ್ ಅವರು ತಮ್ಮ ಮೊದಲಿನ ಸಂಪ್ರದಾಯವನ್ನು ಮುರಿಯಲಿದ್ದಾರೆ. ಅದಕ್ಕೆ ಕಾರಣ ಅವರು ಲಂಡನ ಗೆ ತೆರಳಿತ್ತಿರುವುದು.
ಹೌದು, ಜುಲೈ ಮೊದಲ ವಾರದಲ್ಲಿ ವಿದೇಶಕ್ಕೆ ಹಾರಲಿದ್ದಾರೆ. ಶಿವರಾಜ್ ಕುಮಾರ್ ಭುಜದ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲಿದ್ದಾರೆ. ಜುಲೈ ಮೊದಲ ವಾರದಲ್ಲಿ ಅವರು ಲಂಡನ್‌ಗೆ ಹೊರಡುವುದರಿಂದ ಅಲ್ಲಿಯೇ 20 ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ.
click and follow Indiaherald WhatsApp channel