ಮದ್ಯಪ್ರದೇಶ: ಮದ್ಯಪ್ರದೇಶದ ರಾಜ್ಯ ರಾಜಕೀಯ ಇದೀಗ ದೇಶದ ಸುದ್ದಿಕೇಂದ್ರಕ್ಕೆ ಬಂದು ನಿಂತಿದೆ. ಹೌದು, ನಿರೀಕ್ಷಿತ ಬೆಳವಣಿಗೆಯೊಂದು ಮದ್ಯಪ್ರದೇಶದ ರಾಜಕೀಯದಲ್ಲಿ ನಡೆದಿದೆ. ಇದೀಗ ರಾಜ್ಯಪಾಲರಾದ ಲಾಲ್.ಜಿ.ಟಂಡನ್ ಅವರು ವಿಶ್ವಾಸ ಮತ ಸಾಬೀತು ಮಾಡುವಂತೆ ಸಿಎಂ ಕಮಲನಾಥ್ ಅವರಿಗೆ ನಿರ್ದೇಶನ ಮಾಡಿದ್ದಾರೆ. ಅದಕ್ಕೆ ಸಮಯದ ಅವಕಾಶವನ್ನೂ ನೀಡಿಲ್ಲ. ಏನೇ ಇದ್ದರೂ, ಸೋಮವಾರವೇ ಈ ಬಹುಮತ ಸಾಬೀತು ಮಾಡಬೇಕಿದೆ. ಹೀಗಾಗಿ ಇದೀಗ ಕಮಲನಾಥ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. 

 

ಅಷ್ಟಕ್ಕೂ ರಾಜ್ಯಪಾಲರು ಹೇಳಿದ್ದೇನು? 

 

"ಸಂವಿಧಾನದ ವಿಧಿ 174 ಮತ್ತು 175(2) ಅಡಿಯಲ್ಲಿ ಮಾರ್ಚ್ 16ರಂದು ವಿಶ್ವಾಸ ಮತ ಸಾಬಿತು ಪಡಿಸುವಂತೆ ತಿಳಿಸಿದ್ದೇನೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ನಾನು ಪ್ರಾಸ್ತವಿಕ ಭಾಷಣ ಆಡಲಿದ್ದು, ಅದಾದ ನಂತರ ವಿಶ್ವಾಸ ಮತ ಸಾಬೀತುಪಡಿಸಲಾಗುತ್ತದೆ" ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಹೀಗಾಗಿ ಇದೀಗ ಸಿಎಂ ಕಮಲನಾಥ್ ಅವರು ಈ ಇಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಕುತೂಹಲದ ಸಂಗತಿ.

 


ಮದ್ಯಪ್ರದೇಶ ಸರ್ಕಾರ ರಚನೆ ಆಗಿ ಇದೀಗ 14 ತಿಂಗಳು ಕಳೆದಿವೆ. ಇಷ್ಟು ಕಡಿಮೆ ಅವಾಧಿಯಲ್ಲಿಯೇ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಇದೇ ಕಾರಣಕ್ಕೆ ಮಾರ್ಚ್ 16 ರಿಂದ ಬಜೆಟ್ ಅಧಿವೇಶನ ಆರಂಭ ಆಗುವುದರಿಂದ ಸೋಮವಾರವೇ ಸಿಎಂ ಕಮಲನಾಥ್ ಅವರು ವಿಶ್ವಾಸಮತ ಸಾಬೀತು ಮಾಡಬೇಕಿದೆ. ಮದ್ಯಪ್ರದೇಶ ಸರ್ಕಾರದ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಅದರಲ್ಲಿ 6 ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅವರು ಸ್ವೀಕಾರ ಮಾಡಿದ್ದಾರೆ. 

 

ಇದರೊಂದಿಗೆ ಒಟ್ಟಾರೆ 228 ಸದಸ್ಯ ಬದಲ ವಿಧಾನಸಭೆ ಸದಸ್ಯರ ಸಂಖ್ಯೆ ಇದೀಗ 222 ಆಗಿದೆ. ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಇದೀಗ 108 ಜನ ಶಾಸಕರು ಇದ್ದಾರೆ. ಆದರೆ ಮೈತ್ರಿ ಪಕ್ಷಗಳ ಬೆಂಬಲದಿಂದ 115 ಶಾಸಕರ ಬೆಂಬಲ ಇದೆ.  ಸರಳ ಬಹುಮತಕ್ಕೆ 113 ಶಾಸಕರ ಅಗತ್ಯ ಇದೆ. ಹೀಗಾಗಿ ಕಾಂಗ್ರೆಸ್ ಈಗಾಗಲೇ 2 ಶಾಸಕರನ್ನು ಹೆಚ್ಚಿಗೆ ಹೊಂದಿದೆ ಎಂದು ಹೇಳಬಹುದು. ಆದರೆ ಬಿಜೆಪಿಯು 107 ಸದಸ್ಯರನ್ನು ಹೊಂದಿದೆ. ಬಿಜೆಪಿಗೆ ಮಹುಮತ ಸಾಬೀತು ಮಾಡಲು 6 ಶಾಸಕರ ಕೊರತೆ ಇದೆ. 

 

మరింత సమాచారం తెలుసుకోండి: