ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಬದಲಿಗೆ ಕಳೆದ 9 ದಿನಗಳಿಂದ ನಿರಂತರವಾಗಿ ಬೆಲೆಯನ್ನು ಏರಿಸುತ್ತಿದೆ.  


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ‌ ಹಿಂದಿನಿಂದಲೂ ನಡೆದುಕೊಂಡ ಬಂದಿರುವ ರೀತಿ. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಷ್ಟಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 9 ದಿನಗಳಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

ಬಳಕೆ ಅಥವಾ ಬೇಡಿಕೆ ಕಡಿಮೆ ಆದಾಗಲೂ ವಸ್ತುಗಳ ದರ ಇಳಿಕೆಯಾಗುತ್ತೆ. ಇದು ಮಾರುಕಟ್ಟೆಯಲ್ಲಿ ಸಹಜವಾಗಿ ಕಂಡುಬರುವ ರೀತಿ.‌ ಒಂದೊಮ್ಮೆ ಬೇಡಿಕೆ ಕಡಿಮೆ ಆದಾಗಲೂ ಬೆಲೆ ಇಳಿದಿಲ್ಲ ಎಂದರೆ ಏನೋ 'ಮಿಸ್ ಮ್ಯಾಚ್' ಆಗುತ್ತಿದೆ ಎಂದು ಅರ್ಥ. ಇದೇ ರೀತಿ ದೇಶದಲ್ಲಿ ಈಗ ಲಾಕ್ಡೌನ್ ಕಾರಣಕ್ಕೆ ಹಾಗೂ ಕೊರೊನಾಗೆ ಹೆದರಿ‌ ಜನ‌ ಮೊದಲಿನಷ್ಟು ಹೊರಗಡೆ ಓಡಾಡುತ್ತಿಲ್ಲ. ಪೆಟ್ರೋಲ್, ಡೀಸೆಲ್ ಬಳಕೆಯಾಗುತ್ತಿಲ್ಲ. ಆದರೂ ದೇಶದಲ್ಲಿ ‌ಪ್ರತಿದಿನ‌ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ‌ ಹೆಚ್ಚಳವಾಗುತ್ತಿದೆ.‌ ಸಹಜವಾಗಿ ಇದು‌ ಕೇಂದ್ರ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ, ಜನರಿಂದ ಕೊರೊನಾ ಮತ್ತು ಲಾಕ್ಡೌನ್ ನಂತಹ‌‌ ಕಡುಕಷ್ಟದ ಕಾಲದಲ್ಲೂ ಹಣ ದೋಚುತ್ತಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ನವೆಂಬರ್ನಲ್ಲಿ ಕೊರೋನಾ ಸಮಸ್ಯೆ ತಾರರಕ್ಕೇರಲಿದೆ: ಐಸಿಎಂಆರ್ ಸಂಶೋಧನಾ ಗುಂಪಿನಸಮೀಕ್ಷೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆ‌ ಇರುವುದರಿಂದ ಹಾಗೂ ಕೊರೊನಾ ಮತ್ತು ಲಾಕ್ಡೌನ್ ನಂತಹ‌‌ ಕಷ್ಟದ ಸಂದರ್ಭ‌ ಇದಾಗಿರುವುದರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು‌ ಡೀಸೆಲ್ ಬೆಲೆ‌ಯನ್ನು‌ ಇಳಿಕೆ ಮಾಡಬೇಕು. ಜನರಿಂದ ಹಣ ಸುಲಿಯಲು ಇದು ಸೂಕ್ತ ಕಾಲವಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಆದರೂ‌ ಪ್ರತಿಪಕ್ಷಗಳ ಮಾತಿಗೆ ಕಿಮ್ಮತ್ತು ಕೊಡ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು‌ ಏರಿಸುತ್ತಲೇ ಇದೆ.

ನಿರಂತರವಾಗಿ ಕಳೆದ 9 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಇಂದು ಪ್ರತಿ ಲೀಟರ್ ಪೆಟ್ರೋಲ್ ಗೆ 48 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 59 ಪೈಸೆ ಹೆಚ್ಚಳ ಮಾಡಲಾಗಿದೆ.‌ ಕಳೆದ 9 ದಿನಗಲ್ಲಿ ಒಟ್ಟು ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಲಾಗಿದೆ. ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 5.23 ರೂಪಾಯಿ ಹೆಚ್ಚಳ ಮಾಡಲಾಗಿದೆ

ಇಂದು ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರೀತಿ ಇವೆ.

ದೆಹಲಿ- ಪೆಟ್ರೋಲ್ 76.26 ರೂ., ಡೀಸೆಲ್ 74.62 ರೂ.
ಕೋಲ್ಕತಾ- ಪೆಟ್ರೋಲ್ 78.10 ರೂ., ಡಿಸೆಲ್ 70.33 ರೂ.
ಚೆನ್ನೈ- ಪೆಟ್ರೋಲ್ 79.96 ರೂ., ಡೀಸೆಲ್ 72.69 ರೂ.
ಮುಂಬೈ- ಪೆಟ್ರೋಲ್ ರೂ., ಡೀಸೆಲ್ 73.21 ರೂ.
ಬೆಂಗಳೂರು- ಪೆಟ್ರೋಲ್ 78.73 ರೂ., ಡೀಸೆಲ್ 70.95 ರೂ.
ಚಂಡೀಘಡ- ಪೆಟ್ರೋಲ್ 73.41 ರೂ., ಡೀಸೆಲ್ 66.70 ರೂ.

మరింత సమాచారం తెలుసుకోండి: