ಇಷ್ಟು ದಿನ ಭಾರತ ಪಾಕಿಸ್ತಾನ ಮಾಡಿರುವ ಉಗ್ರರ ದಾಳಿಗಳ ಬಗ್ಗೆ ವಿಶ್ವ ಸಂಸ್ಥೆಯ ಮುಂದೆ ದೂರನ್ನು ಇಡುತ್ತಿತ್ತು ಆದರೆ ಈ ಬಾರಿ ಪಾಕಿಸ್ಥಾನದ ಕರಾಚಿಯಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕಿಸ್ಥಾನ ಹೇಳುತ್ತಿದೆ. ಈ ಕುರಿತು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪವನ್ನು ಮಾಡುವುದಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದವು ಆದರೆ ಅಮೇರಿಕಾ ಈ ವಿಷಯವನ್ನು ತಡೆದಿದೆ.
ಹೌದು ಕರಾಚಿಯ ಷೇರು ವಿನಿಮಯ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪಿಸುತ್ತಿರುವ ಪಾಕಿಸ್ತಾನ, ಈ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲು ಹುನ್ನಾರ ನಡೆಸಿತ್ತು. ಅದರ ಈ ಹುನ್ನಾರಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಒತ್ತಾಸೆಯಾಗಿ ನಿಂತಿದ್ದರು. ಆದರೆ, ಭಾರತದ ಪರ ನಿಲುವು ತೆಳೆದಿರುವ ಅಮೆರಿಕ, ಕರಾಚಿ ದಾಳಿಯ ವಿಷಯವನ್ನು ಇಮ್ರಾನ್ ಖಾನ್ ರಾಜಕೀಯಕರಣಗೊಳಿಸದಂತೆ ತಡೆಯೊಡ್ಡಿದೆ.
ಇಂಥ ಘಟನೆಗಳು ನಡೆದಾಗಲೆಲ್ಲ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅದನ್ನು ಖಂಡಿಸುತ್ತದೆ. ಆದರೆ, ಈ ಬಾರಿ ಈ ದಾಳಿಗೆ ಭಾರತವನ್ನು ಹೊಣೆಯಾಗಿಲು ಪಾಕಿಸ್ತಾನ ಪ್ರಯತ್ನಿಸಿದ್ದರಿಂದ, ಆ ಘಟನೆ ಕುರಿತ ವಿಶ್ವಸಂಸ್ಥೆಯ ಹೇಳಿಕೆಯ ವಿಷಯ ಜಟಿಲಗೊಂಡಿತು ಎನ್ನಲಾಗಿದೆ.
ಮಂಗಳವಾರ ದಾಳಿಯ ಕುರಿತು ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಮಕ್ದುಮ್ ಷಾ ಮೆಹಮೂದ್ ಖುರೇಷಿ, ಈ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದರು. ಪಾಕ್ನ ಸಂಸತ್ ಅಧಿವೇಶನದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ವಿದೇಶಾಂಗ ಸಚಿವರ ಹೇಳಿಕೆಯನ್ನೇ ಪುನರುಚ್ಚರಿಸಿದ್ದರು. ಆದರೆ, ಈ ಬಲೂಚ್ ಲಿಬರೇಷನ್ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆದರೂ ಇದಕ್ಕೆ ಭಾರತವನ್ನೇ ಧೂಷಿಸುವ ಕಾಯಕದಿಂದ ಪಾಕಿಸ್ತಾನ ಹಿಂದೆಸರಿದಿರಲಿಲ್ಲ.
ಈ ವಿಷಯವಾಗಿ ಮೊದಲಿಗೆ ಭಾರತದ ಪರವಾಗಿ ಜರ್ಮನಿ ಧ್ವನಿಯೆತ್ತಿತು. ತನ್ಮೂಲಕ ಅದು ಚೀನಾದ ಸಹಕಾರದೊಂದಿಗೆ ಕರಾಚಿ ದಾಳಿಯ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸುವ ಇಮ್ರಾನ್ ಖಾನ್ ಉದ್ದೇಶಕ್ಕೆ ತಣ್ಣೀರೆರೆಚಿತ್ತು. ಅಮೆರಿಕ ಕೂಡ ಇದಕ್ಕೆ ಧ್ವನಿಗೂಡಿಸಿತು.
ಸದ್ಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜರ್ಮನಿ ಮತ್ತು ಅಮೆರಿಕ ಒತ್ತಡದಿಂದ ಕರಾಚಿ ದಾಳಿ ಕುರಿತ ತನ್ನ ಹೇಳಿಕೆಯನ್ನು ವಿಳಂಬ ಮಾಡಿರಬಹುದು. ಆದರೆ, ಇಂದಲ್ಲ ನಾಳೆ ಆ ಹೇಳಿಕೆಯನ್ನು ನೀಡಿಯೇ ತೀರುತ್ತದೆ. ಆದರೆ, ಈ ವಿಳಂಬದಿಂದಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಟ ಕಟ್ಟಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಎಂಬ ಸಂಗತಿಯನ್ನು ಪಾಕಿಸ್ತಾನ ಮತ್ತು ಚೀನಾಕ್ಕೆ ಮನವರಿಕೆ ಮಾಡಿಕೊಡುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
click and follow Indiaherald WhatsApp channel