ಕೊರೋನಾ ವೈರಸ್ ನಿಂದಾಗಿ ಬೇಸತ್ತು ಹೋಗಿರುವ ಇಡೀ ವಿಶ್ವದ ಜನತೆ ಈಗ ಕೊರೋನಾ ವೈರಸ್ ನನ್ನು ನಾಶಮಾಡುವಂತಹ ಲಿಸಿಕೆಯ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸಲು ಜಗತ್ತಿನ ಹಲವು ರಾಷ್ಟ್ರಗಳು ತಾಮುಂದು ತಾಮುಂದು ಎಂದು ಸ್ಪರ್ಧೆಯಲ್ಲಿ ಬಿದ್ದವರಂತೆ ಕೊರೋನಾಗೆ ಔಷಧಿಯನ್ನು ಸಂಶೋಧಿಸುತ್ತಿದ್ದಾರೆ, ಆದರೆ ಈಗಾಗಲೇ ಹಲವು ರಾಷ್ಟ್ರಗಳು ಔಷಧಿಯನ್ನು ತಯಾರಿಸಿ ಕ್ಲಿನಿಕಲ್ ಟೆಸ್ಟ್ ಗಳನ್ನು ಮಾಡುತ್ತಿವೆ, ಆದರೆ ರಷ್ಯಾದ ಸಂಶೋಧನಾ ಸಂಸ್ಥೆ ಮಾತ್ರ  ಔಷಧಿಯನ್ನು ಸಂಶೋಧಿಸುವುದರಲ್ಲಿ ಒಂದು ಹೆಜ್ಜೆ ಮುಂದಿದೆ. ಈಗಾಗಲೇ ರಷ್ಯಾದಲ್ಲಿ ಕೊರೋನಾ ಔಷಧಿ ತಯಾರಾಗಿದ್ದು ಎಲ್ಲಾ ಪ್ರಯೋಗಗಳಲ್ಲೂ ಪಾಸಾಗಿದೆ. ಸದ್ಯಕ್ಕೇನಿದ್ದರೂ  ರಷ್ಯಾ ಔಷಧಿಯನ್ನು ಮಾರುಕಟ್ಟೆಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ.  




 

ಹೌದು ಕರೊನಾ ಲಸಿಕೆ ಸಂಶೋಧನೆಯಲ್ಲಿ ತಾನೇ ಮುಂಚೂಣಿಯಲ್ಲಿರುವುದಾಗಿ ಘೋಷಿಸಿಕೊಂಡಿರುವ ರಷ್ಯಾ, ವೈರಸ್ ನಿಗ್ರಹಕ್ಕೆ ಜಗತ್ತಿನಲ್ಲಿಯೇ ಮೊತ್ತ ಮೊದಲ ಲಸಿಕೆ ಸಿದ್ಧಗೊಳಿಸಿದ್ದು, ಅಕ್ಟೋಬರ್ನಲ್ಲಿ ಸಾರ್ವತ್ರಿಕವಾಗಿ ಲಸಿಕೆ ನೀಡುವ ಬೃಹತ್ ಪ್ರಮಾಣದ ಅಭಿಯಾನ ಆಯೋಜಿಸಲು ಸಿದ್ಧತೆಗಳನ್ನು ನಡೆಸಿದೆ.




ಮಾಸ್ಕೋದಲ್ಲಿರುವ ಸರ್ಕಾರಿ ಸ್ವಾಮ್ಯದ ಗಾಮಲೆಯಾ ಇನ್ಸ್ಟಿಟ್ಯೂಟ್ ಕರೊನಾ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದೆ. ಲಸಿಕೆಯ ನೋಂದಣಿಗಾಗಿ ಸಂಶೋಧನಾ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಳಿಕ ಇದರ ನೋಂದಣಿ ಕಾರ್ಯ ನಡೆಯಲಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಷ್ಕೋ ಹೇಳಿದ್ದಾಗಿ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.



 

ಕ್ಲಿನಿಕಲ್ ಟ್ರಯಲ್ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ನಲ್ಲಿ ಕರೊನಾ ಲಸಿಕೆ ನೀಡುವ ಅಭಿಯಾನ ನಡೆಸಲು ರಷ್ಯಾ ಸಿದ್ಧತೆ ನಡೆಸಿದೆ. ವೈದ್ಯರು ಹಾಗೂ ಶಿಕ್ಷಕರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ಮಿಖಾಯಿಲ್ ತಿಳಿಸಿದ್ದಾರೆ.




ಕರೊನಾ ನಿಗ್ರಹಕ್ಕೆ ರಷ್ಯಾದ ಪ್ರಥಮ ಲಸಿಕೆ ಇದಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ದೇಶೀಯ ನಿಯಂತ್ರಣ ಪ್ರಾಧಿಕಾರಗಳ ಪರವಾನಗಿ ಪಡೆದುಕೊಳ್ಳಲಿದೆ. ಬಳಿಕ ಆರೋಗ್ಯ ಕಾಯರ್ಯಕರ್ತರಿಗೆ ನೀಡಲಾಗುತ್ತದೆ ಎಂದು ಸ್ಥಳೀಯ ಮೂಲಗಳು ತಿಳಿಸಿದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.





ಲಸಿಕೆ ವಿಚಾರವಾಗಿ ಇಷ್ಟೊಂದು ತರಾತುರಿ ನಡೆಸಿರುವ ರಷ್ಯಾ ಜನರ ಸುರಕ್ಷೆ ಹಾಗೂ ಆರೋಗ್ಯ ವಿಚಾರವನ್ನು ಕಡೆಗಣಿಸಿ ಪ್ರತಿಷ್ಠೆಯನ್ನೇ ಮುಖ್ಯವಾಗಿಸಿಕೊಂಡಿದೆ ಎಂಬ ಟೀಕೆಯೂ ಕೇಳಿ ಬಂದಿದೆ. ಏಕೆಂದರೆ, ಯಾವುದೇ ಲಸಿಕೆಯ ಬೃಹತ್ ಪ್ರಮಾಣದ ಬಳಕೆಗೂ ಮುನ್ನ ಅದನ್ನು ಹತ್ತಾರು ಸಾವಿರಾರು ಜನರಿಗೆ ಪ್ರಾಯೋಗಿಕವಾಗಿ ನೀಡಬೇಕಾಗುತ್ತದೆ. ಇಷ್ಟೊಂದು ಬೃಹತ್ ಮಟ್ಟದಲ್ಲಿ ರಷ್ಯಾ ಕ್ಲಿನಿಕಲ್ ಟ್ರಯಲ್ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.





ಆದರೆ, ಕರೊನಾ ಲಸಿಕೆಯ ಸಂಶೋಧನೆಯನ್ನು 1957ರಲ್ಲಿ ರಷ್ಯಾ ಹಾರಿಸಿದ ಜಗತ್ತಿನ ಮೊತ್ತ ಮೊದಲ ಉಪಗ್ರಹ ಸ್ಪುಟ್ನಿಕ್ ಯಶಸ್ಸಿಗೆ ಹೋಲಿಸಲಾಗುತ್ತಿದೆ. ರಷ್ಯಾದಲ್ಲಿ ಶನಿವಾರ (ಆಗಸ್ಟ್ 1) 5,462 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,45,443ಕ್ಕೆ ತಲುಪಿದೆ. ಜತೆಗೆ, 95 ಜನರು ಮೃತಪಟ್ಟಿದ್ದು, ಈವರೆಗಿನ ಸಾವಿನ ಪ್ರಮಾಣ 14,058ಕ್ಕೆ ಏರಿಕೆಯಾಗಿದೆ.

మరింత సమాచారం తెలుసుకోండి: