ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜರುದ್ದೀನ್ ಭಾರತ ಕಂಡ ಶ್ರೇಷ್ಠ ಆಟಗಾರ. ಒಂದು ಕಾಲದಲ್ಲಿ ಟೀಂ ಇಂಡಿಯಾದ ಆಧಾರವಾಗಿದ್ದ ಆಟಗಾರ. ಹೌದು, ಇದೀಗ ಅಜರುದ್ದೀನ್ ಸೇರಿದಂತೆ ಇನ್ನಿಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಎಷ್ಟು ಮೊತ್ತ ಗೊತ್ತಾ! ದೂರು ನೀಡಿದ್ದಾದರೂ ಯಾರು ಗೊತ್ತಾ!? ಇಲ್ಲಿದೆ ನೋಡಿ ಆ ಮಾಹಿತಿ.
ಟೀಂ ಇಂಡಿಯಾದ ಮಾಜಿ ಆಟಗಾರ ಅಜರುದ್ದೀನ್ ಹಾಗೂ ಇನ್ನಿಬ್ಬರು ಬರೋಬ್ಬರಿ 20.96 ಲಕ್ಷ ವಂಚಿಸಿದ್ದಾರೆ ಎಂದು ಟ್ರಾವೆಲ್ ಏಜೆಂಟ್ ಮೊಹಮ್ಮದ್ ಶಹಾಬ್ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಜರುದ್ದೀನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಮೊಹಮ್ಮದ್ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದಿದ್ದಾರೆ.
ಅಜರುದ್ದೀನ್ ಅವರ ಪಿಎ ಮುಜಿಬ್ ಖಾನ್ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅಜರುದ್ದೀನ್ ಹಾಗೂ ಮತ್ತೆ ಕೆಲವರ ಹೆಸರಿನಲ್ಲಿ 20.96 ಲಕ್ಷ ಮೊತ್ತದ ಹಲವು ಇಂಟೆರ್ ನ್ಯಾಷನಲ್ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಬುಕ್ ಮಾಡಿದ ಬಳಿಕ ಆನ್‍ಲೈನ್‍ನಲ್ಲಿ ಪೇಮೆಂಟ್ ಮಾಡುವುದಾಗಿ ಹೇಳುತ್ತಿದ್ದರು. ಆದರೆ ಇದುವರೆಗೂ ಯಾವುದೇ ಹಣ ನನಗೆ ಸಿಕ್ಕಿಲ್ಲ ಎಂದು ಡ್ಯಾನೀಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ಮಾಲೀಕರಾಗಿರುವ ಮೊಹಮ್ಮದ್ ಶಾಹಬ್ ಆರೋಪಿಸಿದ್ದಾರೆ.
ದೂರಿನಲ್ಲಿ ಶಹಾಬ್, ನಾನು ಪೇಮೆಂಟ್ ಬಗ್ಗೆ ಕೇಳುತ್ತಿದ್ದಾಗ ಮುಜಿಬ್ ಸಹದ್ಯೋಗಿ ಸುದೇಶ್ ಅವಕ್ಕಲ್ 10.6 ಲಕ್ಷ ರೂ. ವರ್ಗಾಯಿಸಿದ್ದೇನೆ ಎಂದು ಇಮೇಲ್ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಹಣ ಸಿಗಲಿಲ್ಲ. ಬಳಿಕ ನವೆಂಬರ್ 29ರಂದು ಮಜಿಬ್ ಕೂಡ ಇದೇ ರೀತಿ ಮಾಡಿದರು. ಶಹಾಬ್‍ಗೆ ಇದುವರೆಗೂ ಯಾವುದೇ ಚೆಕ್ ಸಿಗಲಿಲ್ಲ. ಶಹಾಬ್ ಬುಧವಾರ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಅಜುರುದ್ದೀನ್, ಮುಜಿಬ್ ಖಾನ್ ಹಾಗೂ ಸುದೇಶ್ ಅವಕ್ಕಲ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರ ವಿರುದ್ಧ ಐಪಿಸಿ ಸೆಕ್ಷನ್ 420, 406 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಈ ಆರೋಪಗಳನ್ನು ಅಜರುದ್ದೀನ್ ತಳ್ಳಿ ಹಾಕಿದ್ದಾರೆ.
click and follow Indiaherald WhatsApp channel