ಉಪ್ಪಿ ಅಂದರೆ ಅದ್ಯಾವಗಲೂ ಡಿಫರೆಂಟೇ. ಹೀಗೆ ಡಿಫರೆಂಟ್ ಸಿನಿಮಾಗಳನ್ನು ಮಾಡಿಕೊಂಡ ಬಂದ ಉಪೇಂದ್ರ ಇದೀಗ ಐ ಲವ್ ಯೂ ಎನ್ನುತ್ತಿದ್ದಾರೆ. ಉಪ್ಪಿ ಅಭಿಮಾನಿಗಳು ಸಿನಿಮಾಬಿಡುಗಡೆಗೂ ಮುನ್ನವೇ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಈ ಕುರಿತು ಮತ್ತಷ್ಟು ಡಿಟೇಲ್ಸ್ ಇಲ್ಲಿದೆ.
ಉಪ್ಪಿ ಸಿನಿಮಾ ಬಿಡುಗಡೆ ಆಗಿ ಬಹುದಿನಗಳೇ ಕಳೆದಿವೆ. ಹೀಗಾಗಿ ಐ ಲವ್ ಯೂ ಚಿತ್ರದ ಮೂಲಕ ಉಪ್ಪಿ ಮತ್ತೆ ತೆರೆ ಮೇಲೆ ಕಾಣುತ್ತಿರೋದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಹೀಗಾಗಿ ಚಿತ್ರ ಜೂನ್ 14 ಕ್ಕೆ ಬಿಡುಗಡೆ ಆಗುತ್ತಿದ್ದರೂ, ಜೂನ್ 10 ರಂದೇ ಉಪ್ಪಿ ಅಭಿಮಾನಿಗಳು ಸಂಭ್ರಮ ಮಾಡೋಕೆ ರೆಡಿ ಆಗಿದ್ದಾರೆ.
(ರಚಿತಾ ರಾಮ್)
ಚಿತ್ರತಂಡ ಈಗಾಗಲೇ ಉಪೇಂದ್ರ ಅವರ ದೊಡ್ಡ ಕಟೌಟ್ ಡಿಸೈನ್ ಮಾಡಿಸಿದ್ದು, ಜೂನ್ 10 ರಙದು ಈ ಕಟೌಟ್ ಅನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ಇಡಲಾಗುತ್ತದೆ. ಅದೇ ಸಮಯದಲ್ಲಿ ಉಪ್ಪಿ ಅಭಿಮಾನಿಗಳು ಒಂದಾಗಿ ಅಣ್ಣಮ್ಮ ದೇವಸ್ಥಾನದ ರಸ್ತೆಯಲ್ಲಿ ಮೆರವಣಿಗೆ ಮಾಡಿ, ಚಿತ್ರ ಮಂದಿರದ ಮುಂದೆ ಸಂಭ್ರಮಾಚರಣೆ ಮಾಡಲಿದ್ದಾರೆ.
(ಸೋನು ಗೌಡ)
ಈ ಚಿತ್ರ ಪರಿಭಾಷೆಯಲ್ಲಿಯೂ ಬೇಡಿಕೆ ಪಡೆದುಕೊಂಡಿದೆ. ಉಪೇಂದ್ರ ಜೊತೆಗೆ ರಚಿತಾ ರಾಮ್ ಸಖತ್ ಬೋಲ್ಡ್ ಮತ್ತು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಸೋನು ಗೌಡ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
click and follow Indiaherald WhatsApp channel